/newsfirstlive-kannada/media/post_attachments/wp-content/uploads/2025/03/SIDDARAMIAH.jpg)
ಇಂದು ರಾಜ್ಯದ ಪಾಲಿಗೆ ಮಹತ್ವದ ದಿನ. ಸಿಎಂ ಸಿದ್ದರಾಮಯ್ಯ ದಾಖಲೆಯ 16ನೇ ಬಜೆಟ್​ ಮಂಡನೆ ಮಾಡಲಿದ್ದಾರೆ. ಗ್ಯಾರಂಟಿ ಹೊರೆ, ಅನುದಾನದ ಕೊರತೆ ನಡುವೆಯು ಸಮತೋಲಿತ, ವಾಸ್ತವದ ಬಜೆಟ್​ ಮಂಡನೆ ಮಾಡುವ ಲೆಕ್ಕಾಚಾರದಲ್ಲಿ ಸಿಎಂ ಇದ್ದಾರೆ. ಹೀಗಾಗಿ ಇಡೀ ರಾಜ್ಯದ ಜನರು ನಿರೀಕ್ಷೆ ಎಲ್ಲ ಸಿದ್ದರಾಮಯ್ಯರ ಸೂಟ್​ಕೇಸ್​ ಮೇಲಿದೆ.
ಒಂದು ಕಡೆ ಗ್ಯಾರಂಟಿಗಳ ಹೊರೆ, ಶಾಸಕರಿಗೆ, ಯೋಜನೆಗಳಿಗೆ ಅನುದಾನದ ಬರೆ. ಮತ್ತೊಂದ್ಕಡೆ ಸಾಲು ಸಾಲು ಬೆಲೆ ಏರಿಕೆ. ಈ ನಡುವೆ ರಾಜಸ್ವ ಕೊರತೆ ನಡುವೆ ಸಾಲ ಪಡೆದು, ಆರ್ಥಿಕ ಶಿಸ್ತು ಕಾಪಾಡಬೇಕಾದ ಅನಿವಾರ್ಯತೆ. ಈ ಎಲ್ಲ ಸವಾಲುಗಳ ನಡುವೆ ಇಂದು ಸಿಎಂ ಸಿದ್ದರಾಮಯ್ಯ ಬಜೆಟ್​ ಮಂಡನೆ ಮಾಡಲು ಸಿದ್ಧರಾಗಿದ್ದಾರೆ.
/newsfirstlive-kannada/media/post_attachments/wp-content/uploads/2025/02/CM_SIDDARAMAIAH_BUDGET.jpg)
ಇಂದು ದಾಖಲೆಯ ಬಜೆಟ್​ ಮಂಡನೆಗೆ ಸಿಎಂ ಸಿದ್ಧತೆ
ಸಿದ್ದರಾಮಯ್ಯ ಇಂದು ತಮ್ಮ ದಾಖಲೆಯ 16ನೇ ಬಜೆಟ್ ಮಂಡಿಸಲಿದ್ದಾರೆ. ಮುಖ್ಯಮಂತ್ರಿಯಾಗಿ ಅವರು 9ನೇ ಬಜೆಟ್​ ಮಂಡಿಸಲಿದ್ದು ಬಜೆಟ್​​ ಲೆಕ್ಕ ಹೇಗಿರಲಿದೆ ಎಂದು ಇಡೀ ರಾಜ್ಯವೇ ಕುತೂಹಲ ಮತ್ತು ನಿರೀಕ್ಷೆ ಗಣ್ಣಿನಿಂದ ಎದುರು ನೋಡ್ತಿದೆ. ಈ ಬಾರಿ ಸಮತೋಲಿತ, ವಾಸ್ತವದ ಬಜೆಟ್ ಮಂಡನೆಯ ಪ್ಲಾನ್​ ಮಾಡಿರುವ ಸಿಎಂ, ಹೊಸ ಯೋಜನೆ ಜೊತೆಗೆ ಹೂಡಿಕೆಗೆ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆ ಇದೆ.
ರಾಹುಕಾಲ ನೋಡಿ ಬಜೆಟ್ ಮಂಡಿಸ್ತಾರಾ ಸಿದ್ದರಾಮಯ್ಯ?
ಇನ್ನು ಸಿಎಂ ಸಿದ್ದರಾಮಯ್ಯ ಘಳಿಗೆ ನೋಡಿ ಬಜೆಟ್ ಮಂಡಿಸ್ತಾರೆ ಎನ್ನಲಾಗ್ತಿದೆ. ಬೆಳಗ್ಗೆ 10.30ರಿಂದ ರಾಹುಕಾಲ ಶುರುವಾಗಲಿದೆ. ಹೀಗಾಗಿ ರಾಹುಕಾಲ ಆರಂಭಕ್ಕೂ ಮುನ್ನವೇ 10.15ಕ್ಕೆ ಬಜೆಟ್ ಮಂಡನೆ ಆರಂಭಿಸಲಿದ್ದಾರೆ. ಸಂಪುಟ ಸಹೋದ್ಯೋಗಿಗಳ ಸಲಹೆ ಮೇರೆಗೆ ಸುಮಾರು ಮೂರೂವರೆ ತಾಸು ಮಂಡನೆ ಮಾಡಲಿದ್ದಾರೆ.
ಈ ಬಾರಿ ಬಜೆಟ್​ ಗಾತ್ರ 4 ಲಕ್ಷ ಕೋಟಿ ದಾಟುವ ಸಾಧ್ಯತೆ
ಕಳೆದ ಬಾರಿ ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಸಿದ್ದರಾಮಯ್ಯ ಬಜೆಟ್​ ಮಂಡನೆ ಮಾಡಿದ್ರು. ಈ ಬಾರಿ ಆರ್ಥಿಕ ಶಿಸ್ತು ಕಾಪಾಡುವ ತುಂಬಾ ಬುದ್ಧಿವಂತಿಕೆಯ, ವಾಸ್ತವ ಹಾಗೂ ಸಮತೋಲಿತ ಬಜೆಟ್ ಮಂಡಿಸಲು ಸರ್ವ ತಯಾರಿ ಮಾಡಿದ್ದಾರೆ. ಕಳೆದ ಬಾರಿ 3.71ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡಿಸಲಾಗಿತ್ತು. ಈ ಬಾರಿ ಅದು 4 ಲಕ್ಷ ಕೋಟಿ ದಾಟುವ ಸಾಧ್ಯತೆ ದಟ್ಟವಾಗಿದೆ. ಅಲ್ಲದೆ ಈ ಬಾರಿ ಸಾಲದ ಪ್ರಮಾಣ ಕೂಡ ಹೆಚ್ಚಳವಾಗುವ ಸಾಧ್ಯತೆ ಇದ್ದು ಸುಮಾರು ₹1.4 ಲಕ್ಷ ಕೋಟಿ ಸಾಲ ಮಾಡುವ ಸಂಭವವಿದೆ. ಇಷ್ಟೆಲ್ಲಾ ದಾಖಲೆಯ 16ನೇ ಬಜೆಟ್​​​ ಮಂಡನೆ ಸಿದ್ಧವಾಗಿರುವ ಸಿದ್ದರಾಮಯ್ಯಗೆ ಮಂಡಿ ನೋವು ಬಾಧಿಸುತ್ತಿದೆ. ಹೀಗಾಗಿ ಅವರು ಕುಳಿತುಕೊಂಡೇ ಆಯವ್ಯಯ ಮಂಡಿಸಲಿದ್ದಾರೆ ಎನ್ನಲಾಗ್ತಿದೆ.
ಇದನ್ನೂ ಓದಿ: ಶಾಕಿಂಗ್ ವಿಚಾರ ಹಂಚಿಕೊಂಡ ನಯನತಾರಾ; ಅಭಿಮಾನಿಗಳಿಗೆ ಕೈಮುಗಿದು ವಿನಂತಿಸಿದ ನಟಿ..!
/newsfirstlive-kannada/media/post_attachments/wp-content/uploads/2025/02/Cm-Siddaramaiah-Manipal-Hospital-2.jpg)
ಸಿದ್ದರಾಮಯ್ಯ ದಾಖಲೆಯ ಬಜೆಟ್​
- ಬೆಳಗ್ಗೆ 9.45ಕ್ಕೆ ವಿಶೇಷ ಸಂಪುಟ ಸಭೆ ನಡೆಸಲಿರುವ ಸಿದ್ದರಾಮಯ್ಯ
- ಸಭೆಯಲ್ಲಿ ಬಜೆಟ್​​ಗೆ ಒಪ್ಪಿಗೆ ಪಡೆದ ಬಳಿಕ ಸದನದಲ್ಲಿ ಬಜೆಟ್​ ಮಂಡನೆ
- ಮಂಡಿ ನೋವಿನ ಕಾರಣ ಕುಳಿತುಕೊಂಡೇ ಬಜೆಟ್ ಮಂಡಿಸುವ ಸಾಧ್ಯತೆ
- ನಂತರ ಬೆಳಗ್ಗೆ 10.15ಕ್ಕೆ ಬಜೆಟ್ ಪ್ರತಿ ಓದಲು ಆರಂಭಿಸಲಿರುವ ಸಿಎಂ
- ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ಬಜೆಟ್​ನಲ್ಲಿ ಮಂಡಿಸುವ ನಿರೀಕ್ಷೆ
ಗ್ಯಾರಂಟಿಗಳ ಹೊರೆ, ಬೃಹತ್ ಯೋಜನೆಗಳಿಗೆ ಅನುದಾನದ ಕೊರತೆ, ರಾಜಸ್ವ ಕೊರತೆ ಈ ಎಲ್ಲ ಸವಾಲುಗಳನ್ನು ಮೆಟ್ಟಿನಿಂತು ಜನ ಪರವಾದ ಬಜೆಟ್​ ಮಂಡನೆ ಮಾಡ್ತಾರಾ ಅನ್ನೋದನ್ನು ಕಾದುನೋಡಬೇಕಿದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us