newsfirstkannada.com

ಸಿದ್ದು ಲೆಕ್ಕದಲ್ಲಿ ಕ್ಷೇತ್ರಗಳಿಗೆ ‘ಅನುದಾನ’ ಅನುಮಾನ.. ಯಾಕೆಂದರೆ..!

Share :

Published February 16, 2024 at 7:46am

    ಬೆಳಗ್ಗೆ 10.15ಕ್ಕೆ ಸಿದ್ದರಾಮಯ್ಯ ಬಜೆಟ್ ಮಂಡನೆ

    ಬಜೆಟ್‌ ಗಾತ್ರ ಹಿಗ್ಗಿದರೂ ಗ್ಯಾರಂಟಿಗೆ ವಿನಿಯೋಗ ನಿಶ್ಚಿತ

    ತುರ್ತು ಪ್ರಸ್ತಾವನೆಗಳಿಗೆ ಅವಕಾಶ ನೀಡುವ ಲೆಕ್ಕಾಚಾರ

ಫೆಬ್ರವರಿ ಬಂದ್ರೆ ಸಾಕು ಬಜೆಟ್​ಗಳ ಮೇಲೆಯೇ ಎಲ್ಲರ ಕಣ್ಣು ನೆಟ್ಟಿರುತ್ತದೆ. ಜನಪರ ಘೋಷಣೆಗಳನ್ನು ಕೇಳಲು ಜನರ ಕಿವಿಗಳು ಹಾತೊರೆಯುತ್ತಿರುತ್ತವೆ. ಸದ್ಯ ಇದೇ ಬಜೆಟ್​ ಕುತೂಹಲ, ನಿರೀಕ್ಷೆಗಳು ರಾಜ್ಯದಲ್ಲೂ ಗರಿಗೆದರಿವೆ.

ಅದರಲ್ಲೂ ಬರಗಾಲ, ಗ್ಯಾರಂಟಿ ಹಾಗೂ ಕೇಂದ್ರದ ಅನುದಾನ ತಾರತಮ್ಯ ಹೋರಾಟದ ಬೆನ್ನಲ್ಲೇ ಈ ಬಾರಿಯ ರಾಜ್ಯ ಬಜೆಟ್ ಹಲವು ನಿರೀಕ್ಷೆ ಹುಟ್ಟು ಹಾಕಿದೆ. ರಾಜ್ಯದಲ್ಲಿ ಬರದ ಛಾಯೆ ಆವರಿಸಿದ್ದು, ಸರ್ಕಾರದ ಆದಾಯವೂ ಕುಂಠಿತವಾಗಿದೆ. ಅಲ್ಲದೇ ಕೇಂದ್ರ ಸರ್ಕಾರವೂ ಬರ ಪರಿಹಾರ ಸೇರಿದಂತೆ ರಾಜ್ಯದ ಅನುದಾನವನ್ನ ನೀಡದೆ ತಡೆಹಿಡಿದಿದೆ. ಇದ್ರಿಂದ ಸರ್ಕಾರದ ಇಲಾಖೆಗಳಿಗೆ ಅನುದಾನದ ಬಿಸಿ ತಟ್ಟುವ ಸಾಧ್ಯತೆ ಇದೆ.

‘ಅನುದಾನ’ ಅನುಮಾನ
ಈ ಬಾರಿ ಬಜೆಟ್‌ನಲ್ಲಿ ಬಹುತೇಕ ಇಲಾಖೆಗಳಿಗೆ ಹೆಚ್ಚುವರಿ ಅನುದಾನ ನೀಡೋದು ಅನುಮಾನವಾಗಿದ್ದು, ಶೇಕಡ 5 ರಿಂದ ಶೇ.10ರಷ್ಟು ಏರಿಕೆ ಮಾಡೋದು ಡೌಟ್ ಎನ್ನಲಾಗಿದೆ. ಇನ್ನೂ ಆಯವ್ಯಯದಲ್ಲಿ ‘ಪಂಚ’ ಗ್ಯಾರಂಟಿಗಳದ್ದೇ ಪಾರುಪತ್ಯವಿರಲಿದ್ದು, ಗ್ಯಾರಂಟಿಗಳಿಗೆ ಬರೋಬ್ಬರಿ ₹58 ಸಾವಿರ ಕೋಟಿ ರೂಪಾಯಿ ವೆಚ್ಚವಾಗಲಿದೆ. ಬಜೆಟ್‌ ಗಾತ್ರ ಹೀಗ್ಗಿದರೂ ಗ್ಯಾರಂಟಿಗೆ ಬಹುತೇಕ ವಿನಿಯೋಗವಾಗೋದು ನಿಶ್ಚಿತವಾಗಿದೆ. ತುರ್ತು ಪ್ರಸ್ತಾವನೆಗಳಿಗೆ ಮಾತ್ರ ಸರ್ಕಾರ ಅವಕಾಶ ನೀಡುವ ಲೆಕ್ಕಾಚಾರದಲ್ಲಿದ್ದು, ತೀರಾ ಅಗತ್ಯಗಳಿಗಷ್ಟೇ ಪ್ರಸ್ತಾವ ಸಲ್ಲಿಕೆಗೆ ಆರ್ಥಿಕ ಇಲಾಖೆ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿದ್ದು ಲೆಕ್ಕದಲ್ಲಿ ಕ್ಷೇತ್ರಗಳಿಗೆ ‘ಅನುದಾನ’ ಅನುಮಾನ.. ಯಾಕೆಂದರೆ..!

https://newsfirstlive.com/wp-content/uploads/2023/07/Siddu_Session.jpg

Load More