newsfirstkannada.com

ನೇಹಾ ಹಿರೇಮಠ್ ನಿವಾಸಕ್ಕೆ ಇಂದು ಸಿದ್ದರಾಮಯ್ಯ ಭೇಟಿ; ಬಿಜೆಪಿ ಆರೋಪಗಳಿಗೆ ಸಿಎಂ ಬ್ರೇಕ್..!​

Share :

Published April 25, 2024 at 8:14am

    ನೇಹಾ ಕುಟುಂಬಕ್ಕೆ ಸಾಂತ್ವನ ಹೇಳಲಿರುವ ಸಿಎಂ ಸಿದ್ದರಾಮಯ್ಯ

    ಸರ್ಕಾರ ನಿಮ್ಮ ಜೊತೆ ಇರಲಿದೆ ಎಂಬ ಸಂದೇಶ ಸಾರುವ ಪ್ರಯತ್ನ

    ನೇಹಾ ಕುಟುಂಬಕ್ಕೆ ನಟಿ ಹರ್ಷಿಕಾ ಪೂಣಚ್ಚ ದಂಪತಿ ಸಾಂತ್ವನ

ಹುಬ್ಬಳ್ಳಿಯ ಕಾಲೇಜು ಕ್ಯಾಂಪಸ್​​ನಲ್ಲಿ ನಡೆದಿದ್ದ ನೇಹಾ ಹಿರೇಮಠ್ ಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಆಕ್ರೋಶದ ಜ್ವಾಲೆಯನ್ನ ಎಬ್ಬಿಸಿದೆ. ಮಗಳ ಅಗಲಿಕೆಯ ನೋವಿನಲ್ಲಿರುವ ನೇಹಾ ಕುಟುಂಬವನ್ನ ನಟಿ ಹರ್ಷಿಕಾ ಪೂಣಚ್ಚ ದಂಪತಿ ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಕೂಡ ನೇಹಾ ಮನೆಗೆ ಭೇಟಿ ನೀಡಲಿದ್ದಾರೆ.

ನೇಹಾ ಕುಟುಂಬಕ್ಕೆ ಸಾಂತ್ವನ ಹೇಳಲಿರುವ ಸಿಎಂ
ಹುಬ್ಬಳ್ಳಿಯ ನೇಹಾ ಹಿರೇಮಠ್​ ಕೊಲೆ ಪ್ರಕರಣ ರಾಜಕೀಯ ಕಿತ್ತಾಟಕ್ಕೆ ವೇದಿಕೆ ಆಗಿತ್ತು. ಬಿಜೆಪಿಯ ಘಟಾನುಘಟಿ ನಾಯಕರು, ನಿರಂಜನ್​ ಹಿರೇಮಠ್​ ಮನೆಗೆ ತೆರಳಿ, ಸಾಂತ್ವನ ಹೇಳಿದ್ದರು. ತಮ್ಮ ಪಕ್ಷದ ಕಾರ್ಪೊರೇಟರ್​ ಪುತ್ರಿಯೇ ಅನ್ಯಕೋಮಿನ ಯುವಕನಿಂದ ಬಲಿಯಾಗಿದ್ರೂ ಸಿಎಂ, ಆಗಲಿ ಸಿಎಂ ಆಗಲಿ ಸಾಂತ್ವನ ಹೇಳಲು ಮುಂದಾಗಿರಲಿಲ್ಲ. ಇದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು. ಖುದ್ದು ನಿರಂಜನ್​ ಹಿರೇಮಠ್​ ಅವರೇ ಬೇಸರ ಹೊರಹಾಕಿದ್ರು. ಇದರ ಬೆನ್ನಲ್ಲೇ ಎಚ್ಚೆತ್ತ ಸಿಎಂ ಸಿದ್ದರಾಮಯ್ಯ ನಿನ್ನೆ ಫೋನ್​ ಕರೆ ಮಾಡಿ, ಸಾಂತ್ವನ ಹೇಳಿದ್ದರು. ಇವತ್ತು ನೇಹಾ ಹಿರೇಮಠ್​ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿಲಿದ್ದಾರೆ.

ಇದನ್ನೂ ಓದಿ:ಮತದಾನಕ್ಕೆ ಒಂದು ದಿನ ಮುಂಚೆ ಡಿಕೆಶಿ ಆಪ್ತರ ಮನೆ ಮೇಲೆ ಐಟಿ ದಾಳಿ, ಲಕ್ಷ ಲಕ್ಷ ಹಣ ಪತ್ತೆ..!

ಧಾರವಾಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕಾಗಿ ಇವತ್ತು ಸಿಎಂ ಸಿದ್ದರಾಮಯ್ಯ ಹುಬ್ಬಳ್ಳಿಗೆ ಭೇಟಿ ನೀಡಲಿದ್ದಾರೆ. ಇದೇ ವೇಳೆ ಪ್ರಚಾರಕ್ಕೂ ಮುನ್ನ, ಕೊಲೆಯಾದ ನೇಹಾ ಮನೆಗೆ ಭೇಟಿ ನೀಡಿ, ನಿರಂಜನ್​ ಹಿರೇಮಠ್​ ಅವರಿಗೆ ಧೈರ್ಯ ತುಂಬಲಿದ್ದಾರೆ. ಈ ಮೂಲಕ ​ ಬಿಜೆಪಿ ನಾಯಕರ ಆರೋಪಗಳಿಗೆ ಸಿಎಂ ಸಿದ್ದರಾಮಯ್ಯ ಬ್ರೇಕ್​ ಹಾಕಲಿದ್ದಾರೆ. ಹಾಗೂ ಸರ್ಕಾರ ನಿಮ್ಮ ಜೊತೆ ಇರಲಿದೆ ಎಂಬ ಸಂದೇಶವನ್ನು ಸಾರಲಿದ್ದಾರೆ.

ನೇಹಾ ಹಿರೇಮಠ ಹತ್ಯೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದು, ನೇಹಾ ಕುಟುಂಬಕ್ಕೆ ಸಾಂತ್ವನಗಳ ಸುರಿಮಳೆಯೇ ಆಗ್ತಿದೆ. ರಾಜಕೀಯ ಗಣ್ಯ, ಧಾರ್ಮಿಕ ಮುಖಂಡರು, ಚಿತ್ರರಂಗದ ಕಲಾವಿದರು ನೇಹಾ ಮನೆಗೆ ಭೇಟಿ ನೀಡಿ, ನಿರಂಜನ್​ ಹಿರೇಮಠ್​ ಅವರಿಗೆ ಧೈರ್ಯ ಹೇಳ್ತಿದ್ದಾರೆ. ಇದೀಗ ಅನ್ಯಕೋಮಿನಿಂದ ತೊಂದರೆಗೊಳಗಾಗಿದ್ದ ನಟಿ ಹರ್ಷಿಕಾ ಪೂಣಚ್ಚ ದಂಪತಿ ಕೂಟ ನೇಹಾ ಮನೆಗೆ ತೆರಳಿ, ಪೋಷಕರಿಗೆ ಧೈರ್ಯ ತುಂಬಿದ್ದಾರೆ. ಈ ವೇಳೆ ಹರ್ಷಿಕಾ ಮುಂದೆ ನೇಹಾ ಪೋಷಕರು ಭಾವುಕರಾಗಿರೋ ದೃಶ್ಯ ಕಂಡು ಬಂದಿದೆ.
ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ನಟಿ ಹರ್ಷಿಕಾ ದಂಪತಿ, ನೇಹಾ ಹತ್ಯೆಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದ್ರು.

ಇದನ್ನೂ ಓದಿ:7 ಪಂದ್ಯಗಳಲ್ಲಿ ಸೋತು ಭಾರೀ ಮುಖಭಂಗ; ಆರ್​​ಸಿಬಿ ಪ್ಲೇಯಿಂಗ್-11ನಲ್ಲಿ ಇಂದು ಭಾರೀ ಬದಲಾವಣೆ..!

ಕರ್ನಾಟಕದಲ್ಲೂ ಉತ್ತರಪ್ರದೇಶ ಮಾದರಿ ಜಾರಿ ಮಾಡುವಂತೆ ನಟ ಭುವನ್ ಪೊನ್ನಣ್ಣ ಒತ್ತಾಯಿಸಿದ್ರು. ನೇಹಾ ಕುಟುಂಬದ ಭೇಟಿ ಬಳಿಕ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮನೆಗೆ ಹರ್ಷಿಕಾ ದಂಪತಿ ಭೇಟಿ ನೀಡಿ, ತಮ್ಮ ಮೇಲೆ ಆದ ಹಲ್ಲೆಯ ಬಗ್ಗೆ ವಿವರಿಸಿದ್ದಾರೆ. ಒಟ್ಟಾರೆ ನೇಹಾ ಹತ್ಯೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ಮುಂದುವರಿದಿದೆ. ಆರೋಪಿ ಫಯಾಜ್​​ನನ್ನ 6 ದಿನಗಳ ಕಾಲ ವಶಕ್ಕೆ ತೆಗೆದುಕೊಂಡು ಸಿಐಡಿ ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ಇದನ್ನೂ ಓದಿ:ವಿಶ್ವದ ಮೊದಲ ‘Miss AI’ ಸೌಂದರ್ಯ ಸ್ಪರ್ಧೆ, ಗೆದ್ದ ಸುಂದರಿಗೆ ಬಂಪರ್ ಲಾಟರಿ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನೇಹಾ ಹಿರೇಮಠ್ ನಿವಾಸಕ್ಕೆ ಇಂದು ಸಿದ್ದರಾಮಯ್ಯ ಭೇಟಿ; ಬಿಜೆಪಿ ಆರೋಪಗಳಿಗೆ ಸಿಎಂ ಬ್ರೇಕ್..!​

https://newsfirstlive.com/wp-content/uploads/2024/04/HBL_NEHA_SIDDARAMAIAH.jpg

Load More