KannadaFirst.. ಕನ್ನಡ ಮಾತಾಡಲ್ಲ ಎಂದ ಬ್ಯಾಂಕ್ ಮ್ಯಾನೇಜರ್ ಟ್ರಾನ್ಸ್‌ಫರ್‌; ಕೊನೆಗೂ ಕನ್ನಡಿಗರ ಹೋರಾಟಕ್ಕೆ ಸಿಕ್ತು ಜಯ

author-image
Veena Gangani
Updated On
KannadaFirst.. ಕನ್ನಡ ಮಾತಾಡಲ್ಲ ಎಂದ ಬ್ಯಾಂಕ್ ಮ್ಯಾನೇಜರ್ ಟ್ರಾನ್ಸ್‌ಫರ್‌; ಕೊನೆಗೂ ಕನ್ನಡಿಗರ ಹೋರಾಟಕ್ಕೆ ಸಿಕ್ತು ಜಯ
Advertisment
  • ಬ್ಯಾಂಕ್ ಮ್ಯಾನೇಜರ್ ವರ್ಗಾವಣೆ ಬಗ್ಗೆ‌ ಸಿಎಂ ಸಿದ್ದರಾಮಯ್ಯ ಪೋಸ್ಟ್
  • ನಾನು ಯಾವತ್ತೂ ಕನ್ನಡ ಮಾತಾಡಲ್ಲ ಎಂದಿದ್ದ ಮ್ಯಾನೇಜರ್
  • ಕನ್ನಡದ ಮಾತಾಡದೇ ದರ್ಪ ತೋರಿಸಿದ್ದಕ್ಕೆ ಮ್ಯಾನೇಜರ್ ಎತ್ತಂಗಡಿ

ಬೆಂಗಳೂರು: SBI ಮಹಿಳಾ ಮ್ಯಾನೇಜರ್ ಕರ್ನಾಟಕದಲ್ಲಿರುವವರೆಗೆ ನಾನು ಯಾವತ್ತೂ ಕನ್ನಡ ಮಾತಾಡಲ್ಲ ಎಂದು ದರ್ಪ ತೋರಿಸಿದ್ದಕ್ಕೆ ಟ್ರಾನ್ಸ್‌ಫರ್ ಮಾಡಲಾಗಿದೆ. ಆನೇಕಲ್ ತಾಲೂಕು ಸೂರ್ಯ ನಗರ ಎಸ್​ಬಿಐ ಕಚೇರಿಯಲ್ಲಿ ಮ್ಯಾನೇಜರ್ ಕನ್ನಡ ಮಾತಾಡಲ್ಲ ಎಂದು ಹೇಳಿದ್ದ ವಿಡಿಯೋ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.

ಇದನ್ನೂ ಓದಿ: ಜಸ್ಟ್‌ 7 ತಿಂಗಳಲ್ಲಿ 25 ಮದುವೆ.. 23 ವರ್ಷದ ಸುಂದರಿ ಸಂಚು ಬಾಲಿವುಡ್‌ ಸಿನಿಮಾನೂ ಮೀರಿಸಿದ ಸ್ಟೋರಿ!

publive-image

SBI ಮ್ಯಾನೇಜರ್ ಕನ್ನಡ ಮಾತಾಡಲ್ಲ.. ಹಿಂದಿ ಮಾತಾಡ್ತೀನಿ ಎಂದು ಹೇಳುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಹೀಗಾಗಿ ಮಹಿಳೆಯ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೇ ಆತ ದರ್ಪದಿಂದ ಮಾತಾಡಿರೋ ವಿಡಿಯೋ ವೈರಲ್​ ಆಗುತ್ತಿದ್ದಂತೆ, ಕನ್ನಡಿಗರು ಆಕ್ರೋಶ ಹೊರ ಹಾಕಿದ್ದರು. ಕೊನೆಗೆ ಕನ್ನಡಿಗರ ಪ್ರತಿಭಟನೆ ಭೀತಿಯಿಂದ ಬ್ಯಾಂಕ್ ಮ್ಯಾನೇಜರ್ ಕ್ಷಮೆ ಕೇಳಿದ್ದರು.


">May 20, 2025


ಆದ್ರೆ ಕನ್ನಡ ಮಾತಾಡಲ್ಲ ಎಂದಿದ್ದ ಬ್ಯಾಂಕ್ ಮ್ಯಾನೇಜರ್ ನಡೆ ಬಗ್ಗೆ ಸಿಎಂ ಸಿದ್ದರಾಮಯ್ಯ ಖಂಡನೆ ವ್ಯಕ್ತಪಡಿಸಿದ್ದಾರೆ. ಬ್ಯಾಂಕ್ ಸಿಬ್ಬಂದಿ ಜನರ ಜೊತೆ ಸ್ಥಳೀಯ ಭಾಷೆಯಲ್ಲಿ ವ್ಯವಹರಿಸಬೇಕು. ಎಸ್‌ಬಿಐ ಶಾಖಾ ವ್ಯವಸ್ಥಾಪಕರು ಕನ್ನಡ ನಿರಾಕರಿಸಿ ನಾಗರಿಕರನ್ನು ಕಡೆಗಣಿಸಿರುವುದು ತೀವ್ರವಾಗಿ ಖಂಡನೀಯ. ಅಧಿಕಾರಿಯನ್ನು ವರ್ಗಾವಣೆ ಮಾಡುವಲ್ಲಿ ಎಸ್‌ಬಿಐನ ತ್ವರಿತ ಕ್ರಮವನ್ನು ಪ್ರಶಂಸಿಸುತ್ತೇವೆ. ಅಂತಹ ಘಟನೆಗಳು ಮರುಕಳಿಸಬಾರದು. ಎಲ್ಲಾ ಬ್ಯಾಂಕ್ ಉದ್ಯೋಗಿಗಳು ಗ್ರಾಹಕರನ್ನ ಘನತೆಯಿಂದ ನಡೆಸಿಕೊಳ್ಳಬೇಕು. ಗ್ರಾಹಕರ ಜೊತೆ ಸ್ಥಳೀಯ ಭಾಷೆಯಲ್ಲಿ ಮಾತನಾಡುವ ಪ್ರಯತ್ನ ಮಾಡಬೇಕು. ಬ್ಯಾಂಕ್ ಸಿಬ್ಬಂದಿ ಸಾಂಸ್ಕೃತಿಕ ಮತ್ತು ಭಾಷಾ ಸಂವೇದನಾ ತರಬೇತಿ ಕಡ್ಡಾಯಗೊಳಿಸಬೇಕು. ಸ್ಥಳೀಯ ಭಾಷೆಯನ್ನು ಗೌರವಿಸುವುದು ಎಂದರೆ ಜನರನ್ನು ಗೌರವಿಸುವುದು ಎಂದರ್ಥ ಎಂದು ಹೇಳುತ್ತಾ ಕೇಂದ್ರ ಹಣಕಾಸು ಇಲಾಖೆಗೆ ಸಿಎಂ ಸಿದ್ದರಾಮಯ್ಯ ಆಗ್ರಹ ಮಾಡಿದ್ದಾರೆ.


">May 21, 2025

ಕನ್ನಡಪರ ಸಂಘಟನೆಗಳು SBI ಹೆಡ್ ಆಫೀಸ್ ಜನರಲ್ ಮ್ಯಾನೇಜರ್ ಸುಶೀಲ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದರು. ಇದೀಗ ಕನ್ನಡಿಗರ ಹೋರಾಟಕ್ಕೆ ಮಣಿದು ಕನ್ನಡ ಮಾತಾಡಲ್ಲ ಎಂದಿದ್ದ ಬ್ಯಾಂಕ್ ಮ್ಯಾನೇಜರ್  ಅನ್ನು ವರ್ಗಾವಣೆ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment