newsfirstkannada.com

ನೇಹಾ ಹಿರೇಮಠ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ; ತಂದೆ-ತಾಯಿ ಬೇಡಿಕೆಗೆ ಅಸ್ತು; ಹೇಳಿದ್ದೇನು?

Share :

Published April 25, 2024 at 7:57pm

Update April 25, 2024 at 7:58pm

    ನೇಹಾ ಕುಟುಂಬದ ಜೊತೆಗೆ ನಾವಿದ್ದೇವೆ ಎಂದ ಸಿಎಂ ಸಿದ್ದರಾಮಯ್ಯ

    ನೇಹಾ ತಂದೆ ನಿರಂಜನ್ ಹಿರೇಮಠ ಹಾಗೂ ಗೀತಾ ದಂಪತಿಗೆ ಸಾಂತ್ವನ

    ಸಿಬಿಐ ತನಿಖೆಗೆ ಕೊಡಬೇಕು ಅನ್ನೋ ಬಿಜೆಪಿ ಬೇಡಿಕೆಗೆ ಸಿಎಂ ಹೇಳಿದ್ದೇನು?

ಹುಬ್ಬಳ್ಳಿಯಲ್ಲಿ ಬರ್ಬರವಾಗಿ ಹತ್ಯೆಯಾದ ಕಾಲೇಜು ವಿದ್ಯಾರ್ಥಿ ನೇಹಾ ಹಿರೇಮಠ ಅವರ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ್ದಾರೆ. ನೇಹಾ ತಂದೆ ನಿರಂಜನ್ ಹಿರೇಮಠ ಹಾಗೂ ಗೀತಾ ದಂಪತಿಗೆ ಸಾಂತ್ವನ ಹೇಳಿದ ಸಿಎಂ ಕೆಲ ಹೊತ್ತು ಮಾತನಾಡಿಸಿದರು. ಸಿಎಂ ಸಿದ್ದರಾಮಯ್ಯ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್, ಶಾಸಕ ಪ್ರಸಾದ ಅಬ್ಬಯ್ಯ, ಎನ್.ಹೆಚ್ ಕೋನರೆಡ್ಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ: ‘ನನಗೆ ಸಿಗದ ನೇಹಾ ಯಾರಿಗೂ ಸಿಗಬಾರದು’- CID ಮುಂದೆ ಭಯಾನಕ ಸತ್ಯ ಬಾಯ್ಬಿಟ್ಟ ಫಯಾಜ್‌

ನಿರಂಜನ ಹಿರೇಮಠ ಹಾಗೂ ಗೀತಾ ಅವರಿಗೆ ಸಾಂತ್ವನ ಹೇಳಿದ ಸಿಎಂ ಸಿದ್ದರಾಮಯ್ಯ, ಇದೊಂದು ದುರದೃಷ್ಟಕರ ಘಟನೆ. ಎಲ್ಲಾ ಆಯಾಮದಲ್ಲಿಯೂ ತನಿಖೆ ಮಾಡಲು ಸಿಐಡಿಗೆ ಸೂಚಿಸಿದ್ದೇನೆ. ಆರೋಪಿಯನ್ನು ಈಗಾಗಲೇ ಬಂಧಿಸಿದ್ದು, ಸಿಐಡಿ ತನಿಖೆ ಆರಂಭಗೊಂಡಿದೆ. ನೇಹಾ ಕುಟುಂಬದ ಜೊತೆಗೆ ನಾವಿದ್ದೇವೆ ಎಂದು ಹೇಳಿದರು.

ಇದು ಬಹಳ ಅಮಾನವೀಯ ಕೃತ್ಯವಾಗಿದೆ. ನೇಹಾ ಆತ್ಮಕ್ಕೆ ಶಾಂತಿ ಸಿಗಲಿ. ನೇಹಾ ಕುಟುಂಬಕ್ಕೆ ರಕ್ಷಣೆ ಬೇಕಿದ್ದರೆ ಕೊಡುತ್ತೇವೆ. ಸಿಐಡಿ ಅಧಿಕಾರಿಗಳು ತನಿಖೆ ಮಾಡಿ ವಿಶೇಷ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸುತ್ತಾರೆ. ಇದಾದ ನಂತರ ಕೋರ್ಟ್‌ನಲ್ಲಿ ಟ್ರಯಲ್ ನಡೆಯುತ್ತೆ. ಆದಷ್ಟು ಬೇಗ ನ್ಯಾಯಾಲಯದಲ್ಲಿ ಆರೋಪಿಗೆ ಗರಿಷ್ಠ ಶಿಕ್ಷೆ ಆಗುತ್ತೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಇದೇ ವೇಳೆ ನೇಹಾ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡಬೇಕು ಅನ್ನೋ ಬಿಜೆಪಿ ಬೇಡಿಕೆಗೂ ಸಿಎಂ ಪ್ರತಿಕ್ರಿಯೆ ನೀಡಿದರು. ಬಿಜೆಪಿ ಇದರಲ್ಲೂ ರಾಜಕೀಯ ಮಾಡ್ತಿದೆ. ಒಂದು ಪ್ರಕಣವನ್ನಾದ್ರೂ ಅವರು ಸಿಬಿಐಗೆ ಕೊಟ್ಟಿದ್ದರಾ? ನಮ್ಮ ಅವಧಿಯಲ್ಲಿ ಸಾಕಷ್ಟು ಪ್ರಕರಣಗಳನ್ನು ಸಿಬಿಐಗೆ ಕೊಟ್ಟಿದ್ದೆವು. ಈಗ ನೇಹಾ ಕುಟುಂಬ ದುಃಖದಲ್ಲಿದೆ ಇಲ್ಲಿ ರಾಜಕೀಯ ಮಾತಾಡಲ್ಲ ಎಂದು ಸಿಎಂ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನೇಹಾ ಹಿರೇಮಠ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ; ತಂದೆ-ತಾಯಿ ಬೇಡಿಕೆಗೆ ಅಸ್ತು; ಹೇಳಿದ್ದೇನು?

https://newsfirstlive.com/wp-content/uploads/2024/04/Neha-Hiremath-Siddaramaiah.jpg

Load More