/newsfirstlive-kannada/media/post_attachments/wp-content/uploads/2025/07/DK-SHIVAKUMAR-5.jpg)
ಐದು ವರ್ಷ ನಾನೇ ಮುಖ್ಯಮಂತ್ರಿ.. ದೆಹಲಿಯಲ್ಲಿ ಕುಳಿತು ಸಿಎಂ ಆಡಿದ ಮಾತು ಪವರ್ ಶೇರಿಂಗ್ ಫೈಟ್​ನಲ್ಲಿ ದೊಡ್ಡ ಸದ್ದು ಮಾಡಿದೆ. ಈ ಬೆನ್ನಲ್ಲೇ ಸಿದ್ದರಾಮಯ್ಯ ಖರ್ಗೆ ಭೇಟಿಯಾಗಿ ಚರ್ಚಿಸಿದ್ದಾರೆ. ಈ ಮಾತಿಗೆ ಉತ್ತರ ಕೊಡಬೇಕಿದ್ದ ಡಿಸಿಎಂ ಡಿ.ಕೆ ಶಿವಕುಮಾರ್ ಮೌನಕ್ಕೆ ಜಾರಿದ್ದಾರೆ.
ಸಿಎಂ ಸಿದ್ದರಾಮಯ್ಯ ಚರ್ಚೆ
ನಾಯಕತ್ವ ಬದಲಾವಣೆಯೇ ಸುಳ್ಳು ಎಂದ ಸಿದ್ದರಾಮಯ್ಯ ಮಾತು ಕಾಂಗ್ರೆಸ್​ನೊಳಗೆ ಕಂಪಿಸಿದೆ. ಈ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯನ್ನ ಭೇಟಿಯಾದ ಸಿಎಂ ಸಿದ್ದರಾಮಯ್ಯ ಮಹತ್ವದ ಚರ್ಚೆ ನಡೆಸಿದ್ರು. ದೆಹಲಿಯ ಖರ್ಗೆ ನಿವಾಸದಲ್ಲಿ ಉಭಯ ನಾಯಕರು ಮಹತ್ವದ ಮಾತುಕತೆ ನಡೆಸಿದ್ದು, ಈ ವೇಳೆ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಖರ್ಗೆ ಮಾಹಿತಿ ಪಡೆದಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.
ಇನ್ನೊಂದೆಡೆ ರಾಜ್ಯದಲ್ಲಿ ಶಾಸಕರ ಬೇಸರ, ಬೇಡಿಕೆ ಆಲಿಸಿರೋ ಸುರ್ಜೇವಾಲಾ ದೆಹಲಿಗೆ ರೀಚ್ ಆಗಿದ್ದಾರೆ. ರಾಷ್ಟ್ರ ರಾಜಧಾನಿಗೆ ತಲುಪುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್​ರನ್ನ ಕರೆಸಿ ಮಾತುಕತೆ ನಡೆಸಿದ್ದಾರೆ. ಬರೋಬ್ಬರಿ ಸುಮಾರು 2 ಗಂಟೆಗಳ ಕಾಲ ಇಬ್ಬರೊಂದಿಗೆ ರಾಜ್ಯ ಉಸ್ತುವಾರಿ ಮಾತನಾಡಿರೋದು ಮಹತ್ವದ ಚರ್ಚೆ ನಡೆದಿದೆ.
ಮೌನವಾಗಿರೋ ಡಿಸಿಎಂ ಡಿಕೆಶಿ ಬೆಂಗಳೂರಲ್ಲಿ ಲ್ಯಾಂಡ್
5 ವರ್ಷ ನಾನೇ ಸಿಎಂ ಅಂತಾ ಬಹಿರಂಗವಾಗಿ ಹೇಳಿರೋ ಸಿದ್ದರಾಮಯ್ಯ, ದೆಹಲಿಯಲ್ಲೇ ವಾಸ್ತವ್ಯ ಹೂಡಿದ್ದಾರೆ. ರಾಹುಲ್ ಗಾಂಧಿ ಜೊತೆಗೆ ಮಾತುಕತೆಗೆ ಟೈಂ ಕೇಳಿದ್ದು, ಇಂದು ಅವಕಾಶ ಸಿಗೋ ಸಾಧ್ಯತೆ ಇದೆ. ಈ ವೇಳೆ ರಾಜ್ಯದಲ್ಲಿನ ಬೆಳವಣಿಗೆಗಳ, ನಾಯಕತ್ವ ಬದಲಾವಣೆಯ ಚರ್ಚೆ ಬಗ್ಗೆ ರಾಹುಲ್​ಗೆ ಸಿಎಂ ಮಾಹಿತಿ ನೀಡಲಿದ್ದಾರೆ.
ಇದನ್ನೂ ಓದಿ: ಮುಖ್ಯಮಂತ್ರಿ ತವರು ಜಿಲ್ಲೆ ಮೈಸೂರಿನಲ್ಲಿ ಬೆಚ್ಚಿ ಬೀಳಿಸೋ ಘಟನೆ.. ಯುವತಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ
ನಾನೇ ಪೂರ್ಣವಧಿ ಸಿಎಂ ಅಂತಾ ಸಿದ್ದರಾಮಯ್ಯ ಹೇಳ್ತಿದ್ರೂ, ಡಿಸಿಎಂ ಡಿ.ಕೆ ಶಿವಕುಮಾರ್ ಮಾತ್ರ ಯಾವುದೇ ರೀತಿ ರಿಯಾಕ್ಟ್ ಮಾಡ್ತಿಲ್ಲ. ಬದಲಾಗಿ ರಾಹುಲ್​ಗಾಂಧಿ ಭೇಟಿಗೂ ಮುನ್ನವೇ ಡಿಕೆಶಿ ರಾಜ್ಯಕ್ಕೆ ವಾಪಸ್ ಆಗಿದ್ದಾರೆ. ಯಾವುದೇ ಪ್ರತಿಕ್ರಿಯೆ ನೀಡದೇ ದೆಹಲಿಯಲ್ಲಿ ಫ್ಲೈಟ್ ಹತ್ತಿದ ಡಿಕೆಶಿ ಮಿಡ್​ನೈಟ್ ಬೆಂಗಳೂರಲ್ಲಿ ಲ್ಯಾಂಡ್ ಆಗಿದ್ದಾರೆ. ಡಿ.ಕೆ ಶಿವಕುಮಾರ್​ ಮೌನವಾಗಿರೋದೇಕೆ ಅಂತಾ ನೋಡಿದ್ರೆ, ಈ ಸೈಲೆಂಟ್ ನಡೆಯ ಹಿಂದೆಯೂ ಒಂದಷ್ಟು ತಂತ್ರಗಳಿವೆ.
ಡಿಕೆಶಿ ಮುಂದಿನ ನಡೆ ಏನು?
- ಆಯ್ಕೆ 01 : ಪವರ್​​ ಫಾರ್ಮೂಲದಂತೆ ಡಿಸೆಂಬರ್​​ವರೆಗೂ ತಾಳ್ಮೆ ಕಾಯುವುದು
- ಆಯ್ಕೆ 02 : ಮುಖ್ಯಮಂತ್ರಿ ಸ್ಥಾನಕ್ಕೆ ಆತುರ ಪಡದೆ ಮೌನಿಯಾಗಿರೋದೇ ಲೇಸು
- ಆಯ್ಕೆ 03 : ತಟಸ್ಥರಾಗಿ ಸೋನಿಯಾ, ರಾಹುಲ್ ಮುಂದೆ ಪಟ್ಟು ಹಿಡಿಯುವುದು
- ಆಯ್ಕೆ 04 : ಪಟ್ಟಕ್ಕೆ ಹೈಕಮಾಂಡ್​ ನಾಯಕರನ್ನ ಶತಾಯಗತಾಯ ಒಪ್ಪಿಸೋದು
- ಆಯ್ಕೆ 05 : ಸದ್ಯಕ್ಕೆ ಸಿದ್ದರಾಮಯ್ಯ ಜೊತೆ ಬಾಂಧವ್ಯ ಗಟ್ಟಿಗೊಳಿಸಿಕೊಳ್ಳುವುದು
- ಆಯ್ಕೆ 06 : ಸಿಎಂ ಸಿದ್ದು ವಿಶ್ವಾಸ ಪಡೆದುಕೊಂಡೇ ಮುಂದಿನ ಹೆಜ್ಜೆ ಇಡುವ ಲೆಕ್ಕ
ಮೈಸೂರಿನಲ್ಲಿ ನಿಂತು ಬಂಡೆಯಂತೆ ಸರ್ಕಾರ ಭದ್ರ ಎಂದಿದ್ದ ಸಿದ್ದರಾಮಯ್ಯ, ಸ್ವರ ದೆಹಲಿಯಲ್ಲಿ ಹೊಸ ಸ್ವರೂಪ ಪಡೆದುಕೊಂಡಿದೆ. 2 ವರ್ಷ ಹೇಗೋ ಸರ್ಕಾರವನ್ನು ತಳ್ಳಿಕೊಂಡು ಬಂದ ಈ ಜೋಡೆತ್ತು, ಈಗ ಹಾದಿ ತಪ್ಪುತ್ತಿದೆ.. ಈ ಎರಡು ವರ್ಷ ಒಂದು ಲೆಕ್ಕವಾದ್ರೆ, ಇನ್ಮುಂದೆ ಇರೋದು ಇನ್ನೊಂದು ಲೆಕ್ಕ.. ಕಾಂಗ್ರೆಸ್ ಹೈಕಮಾಂಡ್‌ಗೆ ನಿಜವಾದ ಅಗ್ನಿ ಪರೀಕ್ಷೆ ಈಗ ಶುರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ