newsfirstkannada.com

ಪೊಲೀಸ್​ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಖಡಕ್ ವಾರ್ನಿಂಗ್

Share :

Published July 7, 2024 at 8:13am

    ಎಸಿ, ಪ್ಯಾನ್​ ಕೆಳಗೆ ಆರಾಮಾಗಿ ಕುಳಿತುಕೊಳ್ಳುವುದಲ್ಲ, ಕೆಲ್ಸ ಮಾಡಿ

    ಅಪರಾಧ ಕೃತ್ಯಗಳ ಮೇಲೆ ಕಣ್ಣಿಡಿ, ಅವುಗಳು ನಡೆಯದಂತೆ ತಡೆಯಿರಿ

    ಟ್ರಾಫಿಕ್​​ಲ್ಲಿ ಕೇವಲ ಕಾನ್​​ಸ್ಟೆಬಲ್ಸ್ ಇರ್ತಾರೆ, ಇನ್ಸ್​ಪೆಕ್ಟರ್ಸ್​ ಇರಬೇಕು

ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ವಾರ್ಷಿಕ ಸಭೆ ಕರೆದಿದ್ರು. ಸಭೆಯಲ್ಲಿ ಪೊಲೀಸ್ ಹಿರಿಯ ಅಧಿಕಾರಿಗಳು ಸೇರಿ ಹಲವರು ಹಾಜರಿದ್ರು.. ಅಷ್ಟಕ್ಕೂ ಸಭೆಯಲ್ಲಿ ಸಿಎಂ ಪೊಲೀಸ್ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ಸೂಚಿಸಿದ್ರು ಕೆಲ ವಿಚಾರಕ್ಕೆ ಗರಂ ಕೂಡ ಆಗಿದ್ದಾರೆ.

ಪೊಲೀಸ್ ವಾರ್ಷಿಕ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಗರಂ

ಕರ್ನಾಟಕ ಪೊಲೀಸ್​ ಅಂದ್ರೆ, ದೇಶಮಟ್ಟದಲ್ಲಿ ಉತ್ತಮ ಹೆಸರಿದೆ. ಆದ್ರೆ ಇತ್ತೀಚೆಗೆ ಹುಬ್ಬಳ್ಳಿ ನೇಹಾ ಮರ್ಡರ್​.. ಅಂಜಲಿ ಹತ್ಯೆ.. ಹೀಗೆ ರಾಜ್ಯದಲ್ಲಿ ಸಾಲು ಸಾಲು ಅಪರಾಧ ಪ್ರಕರಣಗಳು ನಡೆಯುತ್ತಿದ್ದು, ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ಪ್ರಶ್ನೆ ಎದ್ದಿವೆ. ಇದನ್ನೇ ಅಸ್ತ್ರ ಮಾಡಿಕೊಂಡು ವಿಪಕ್ಷಗಳು ಸರ್ಕಾರವನ್ನು ತರಾಟೆ ತೆಗೆದುಕೊಂಡಿದ್ವು. ಕೊನೆಗೂ ಎಚ್ಚೆತ್ತುಕೊಂಡ ಸಿಎಂ ಸಿದ್ದರಾಮಯ್ಯ ಪೊಲೀಸ್​ ವಾರ್ಷಿಕ ಸಭೆಯಲ್ಲಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ರಾಜ್ಯದಲ್ಲಿ ಕ್ರೈಂ ರೇಟ್​ ಕಡಿಮೆ ಆಗ್ಬೇಕು ಎಂದು ಆರಕ್ಷಕರಿಗೆ ಶಿಸ್ತಿ ಪಾಠ ಮಾಡಿದ್ದಾರೆ.

ಸಭೆಯ ಆರಂಭದಲ್ಲಿ ರಾಮೇಶ್ವರಂ ಕೆಫೆ ಸ್ಫೋಟದ ತನಿಖೆ ಬಗ್ಗೆ ಪ್ರಶಂಸೆಯನ್ನ ವ್ಯಕ್ತಪಡಿಸಿದ್ರು. ಅಷ್ಟೇ ಅಲ್ಲದೇ ಕೆಲ ಪ್ರಕರಣದ ತನಿಖೆ ಬಗ್ಗೆ ಪೊಲೀಸರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಂಜಲಿ ಪ್ರಕರಣವನ್ನು ಉದಾಹರಣೆ ನೀಡಿ, ಆರೋಪಿ ಬೆದರಿಕೆ ಹಾಕಿದ ಬಗ್ಗೆ ದೂರು ನೀಡಿದ್ದರು.. ಮೊದಲೇ ಕ್ರಮ ಕೈಗೊಂಡಿದ್ರೆ ಅನಾಹುತ ತಪ್ಪಿಸಬಹುದಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದ್ರು..

ಹುಬ್ಬಳ್ಳಿಯಲ್ಲಿ ನೇಹಾ, ಅಂಜಲಿ ಕೊಲೆ ಆಯಿತು. ಅಂಜಲಿ ಕೊಲೆ ನಡೆಯುವುದಕ್ಕೂ ಮೊದಲೇ ಆರೋಪಿ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು. ಆವಾಗಲೇ ನೀವು ಕ್ರಮ ತೆಗೆದುಕೊಂಡಿದ್ದರೆ ಅಂಜಲಿ ಕೊಲೆ ಆಗುತ್ತಿರಲಿಲ್ಲ.

ಸಿದ್ದರಾಮಯ್ಯ, ಸಿಎಂ

ಪೊಲೀಸ್ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಸಿಎಂ, ಮಫ್ತಿಯಲ್ಲಿ ಇರುವುದಕ್ಕಿಂತ, ಯೂನಿಫಾರಂನಲ್ಲಿ ಸಾರ್ವನಿಕರ ಮಧ್ಯೆ ಇದ್ದರೆ, ಅಪರಾಧ ಕೃತ್ಯ ಮಾಡುವವರಿಗೂ ಭಯ ಹುಟ್ಟುತ್ತೆ ಎಂದು ಹೇಳಿದ್ರು. ದೇಶದಲ್ಲಿ ರಾಜ್ಯ ಪೊಲೀಸರಿಗೆ ಉತ್ತಮ ಹೆಸರಿದ್ದು, ಆ ಹೆಸರನ್ನು ಹಾಳು ಮಾಡದೇ ಉತ್ತಮವಾಗಿ ಕಾರ್ಯನಿರ್ವಹಿಸಿ ಎಂದು ವಾರ್ನಿಂಗ್​ ನೀಡಿದ್ದಾರೆ.

ಪೊಲೀಸರಿಗೆ ಶಿಸ್ತು ಇರಬೇಕು. ಮಫ್ತಿಯಲ್ಲಿ ತಿರುಗಾಡೋದಲ್ಲ. ನೀವು ಫುಲ್ ಡ್ರೆಸ್​​ನಲ್ಲಿ ಇದ್ದರೆ ಭಯ ಬರುತ್ತಿದೆ. ಪೊಲೀಸನವರು ಇದ್ದಾರೆ ಮಾಡಬಾರದು ಎನ್ನುವ ಭಯ ಬರುತ್ತದೆ. ಚಾಕು ಹಾಕುವುದು, ಚೈನ್ ಕಿತ್ತುಕೊಳ್ಳುವ ಸಮಯದಲ್ಲಿ ಪೊಲೀಸ್​ ಡ್ರೆಸ್​​ನಲ್ಲಿದ್ದರನ್ನ ನೋಡಿದರೆ ಯಾರು ಕೃತ್ಯ ಮಾಡಲ್ಲ.

ಸಿದ್ದರಾಮಯ್ಯ, ಸಿಎಂ

ಟ್ರಾಫಿಕ್​ ಪೊಲೀಸರಿಗೂ ಬಿಸಿಮುಟ್ಟಿಸಿದ ಸಿಎಂ

ಇದೇ ವೇಳೆ ಬೆಂಗಳೂರು ಟ್ರಾಫಿಕ್ ಬಗ್ಗೆಯೂ ಸಿಎಂ ಬೇಸರ ವ್ಯಕ್ತಪಡಿಸಿದ್ದಾರೆ. ಸಭೆಯ ಲಿಸ್ಟ್ ನಲ್ಲಿ ಟ್ರಾಫಿಕ್ ವಿಚಾರವೇ ಇರದಿದ್ದಕ್ಕೆ ಗರಂ ಆದ್ರು. ರಸ್ತೆಗಳಲ್ಲಿ ಸಿಬ್ಬಂದಿ ಬಿಟ್ಟರೆ ಎಸಿಪಿ, ಇನ್ಸ್ ಪೆಕ್ಟರ್ ಗಳು ರಸ್ತೆಗಳಲ್ಲಿ ಕಾಣೋದೆ ಇಲ್ಲ. ಇನ್ಮುಂದೆ ಎಲ್ಲ ಅಧಿಕಾರಿಗಳು ಕೂಡ ರಸ್ತೆಯಲ್ಲಿ ಇರಬೇಕು ಅಂತಾ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ದರ್ಶನ್​​ಗಾಗಿ ಶಕ್ತಿ ದೇವತೆಯ ಮೊರೆ ಹೋದ ವಿಜಯಲಕ್ಷ್ಮಿ.. ಬಂಧನಕ್ಕೂ ಮೊದಲು ನಟ ಅದೇ ದೇಗುಲಕ್ಕೆ ಹೋಗಿದ್ದರು..!

ಟ್ರಾಫಿಕ್​​ನಲ್ಲಿ ಕೇವಲ ಕಾನ್​ಸ್ಟೆಬಲ್​ಗಳು ಇರೋದಲ್ಲ. ಉನ್ನತ ಅಧಿಕಾರಿಗಳು ಕೂಡ ಟ್ರಾಫಿಕ್​ನಲ್ಲಿ ಇರಬೇಕು. ಕೇವಲ ಆಫೀಸ್​ನಲ್ಲಿ ಫ್ಯಾನ್​, ಎಸಿ ಕೆಳಗಡೆ ಕುಳಿತುಕೊಳ್ಳುವುದಲ್ಲ. ನೀವು ಕೆಲಸ ಮಾಡಬೇಕು.

ಸಿದ್ದರಾಮಯ್ಯ, ಸಿಎಂ

ಇದನ್ನೂ ಓದಿ: ಧಾರಾಕಾರ ಮಳೆಗೆ 100ಕ್ಕೂ ಹೆಚ್ಚು ರಸ್ತೆಗಳು ಬಂದ್.. ಭಾರೀ ಅನಾಹುತಕ್ಕೆ 13ಕ್ಕೂ ಹೆಚ್ಚು ಜನ ಸಾವು

ಪೊಲೀಸರು ಮನಸ್ಸು ಮಾಡಿದ್ರೆ, ಅಪರಾಧಗಳನ್ನು ಮಟ್ಟಹಾಕೋದು ಕಷ್ಟವೇನಲ್ಲ ಎಂದು ಸಿಎಂ ಆರಕ್ಷಕರಿಗೆ ಮತ್ತಷ್ಟು ಪವರ್​ ತುಂಬಿದ್ದಾರೆ. ಅದೇನೆ ಇರ್ಲಿ ರಾಜ್ಯದ ಮುಖ್ಯಮಂತ್ರಿ ಈ ರೀತಿಯ ಸಭೆ ಮಾಡಿದ್ರೆ ಪೊಲೀಸ್ ತನಿಖೆ ಇನ್ನಷ್ಟು ಸ್ಟ್ರಾಂಗ್ ಆಗೋದ್ರಲ್ಲಿ ಎರಡು ಮಾತಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪೊಲೀಸ್​ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಖಡಕ್ ವಾರ್ನಿಂಗ್

https://newsfirstlive.com/wp-content/uploads/2024/07/CM_POLICE_1.jpg

Load More