ಮತ್ತೆ ವಕ್ಕರಿಸಿದ ಕೊರೊನಾ.. ಮಾಸ್ಕ್ ಧರಿಸಿದ ಸಿಎಂ ಸಿದ್ದರಾಮಯ್ಯ; ನಾಳೆಯಿಂದ ಟೆಸ್ಟಿಂಗ್ ಆರಂಭ

author-image
admin
Updated On
ಮತ್ತೆ ವಕ್ಕರಿಸಿದ ಕೊರೊನಾ.. ಮಾಸ್ಕ್ ಧರಿಸಿದ ಸಿಎಂ ಸಿದ್ದರಾಮಯ್ಯ; ನಾಳೆಯಿಂದ ಟೆಸ್ಟಿಂಗ್ ಆರಂಭ
Advertisment
  • 35 ಸಕ್ರಿಯ ಪ್ರಕರಣಗಳಲ್ಲಿ ಬೆಂಗಳೂರಿನಲ್ಲೇ 32 ಕೇಸ್ ಪತ್ತೆ
  • ಬೆಂಗಳೂರಲ್ಲಿ ಒಟ್ಟು ಮೂರು ಮಗುವಿಗೆ ಕೊವಿಡ್ ಪಾಸಿಟಿವ್
  • 8 RTPCR ಟೆಸ್ಟಿಂಗ್ ಲ್ಯಾಬ್‌ಗಳನ್ನ ಓಪನ್ ಮಾಡಲು ನಿರ್ಧಾರ

ಇಡೀ ಮನುಕುಲವನ್ನೇ ಅಲ್ಲಾಡಿಸಿದ ಹೆಮ್ಮಾರಿ ಕೊರೊನಾ ವೈರಸ್‌ ಮತ್ತೆ ಕಾಣಿಸಿಕೊಂಡಿದೆ. ರಾಜ್ಯದಲ್ಲಿ ಒಟ್ಟು 35 ಕೊವಿಡ್‌ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ಮೂರು ಮಗುವಿಗೆ ಪಾಸಿಟಿವ್ ಕಂಡು ಬಂದಿದೆ. 35 ಸಕ್ರಿಯ ಪ್ರಕರಣಗಳಲ್ಲಿ ಬೆಂಗಳೂರಿನಲ್ಲೇ 32 ಕೇಸ್ ಪತ್ತೆಯಾಗಿದೆ.

ದೇಶದಲ್ಲಿ ಕೊವಿಡ್‌ ಪ್ರಕರಣ ಮತ್ತೆ ಹೆಚ್ಚಾಗುತ್ತಿದ್ದಂತೆ ರಾಜ್ಯ ಸರ್ಕಾರ ಕೂಡ ಅಲರ್ಟ್‌ ಆಗಿದೆ. ಮುಂಜಾಗ್ರತೆಯಾಗಿ ಸಿಎಂ ಸಿದ್ದರಾಮಯ್ಯನವರು ಮನೆಯಿಂದ ಮಾಸ್ಕ್ ಧರಿಸಿ ಹೊರಗೆ ಬಂದಿದ್ದಾರೆ.

publive-image

ಮೈಸೂರಿನ ನಿವಾಸದ ಬಳಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲು ಹಲವಾರು ಜನರು ಆಗಮಿಸಿದ್ದರು. ಸಿಎಂಗೆ ಮನವಿ ಕೊಡಲು ಸಾರ್ವಜನಿಕರು ಮುಗಿಬಿದ್ದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮಾಸ್ಕ್ ಧರಿಸಿ ಸಮಾಧಾನದಿಂದ ಎಲ್ಲರ ಮನವಿ ಪತ್ರಗಳನ್ನು ಸ್ವೀಕಾರ ಮಾಡಿದರು.

ಬೆಂಗಳೂರಲ್ಲಿ ನಾಳೆಯಿಂದ ಕೊವಿಡ್ ಟೆಸ್ಟ್‌!
ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಒಟ್ಟು 32 ಕೊವಿಡ್‌ ಕೇಸ್‌ಗಳು ಸಕ್ರಿಯವಾಗಿದೆ. ಅದರಲ್ಲಿ ಮೂರು ಮಗುವಿಗೆ ಕೊವಿಡ್ ಪಾಸಿಟಿವ್ ಕಂಡು ಬಂದಿದೆ. ವಾಣಿ ವಿಲಾಸ ಆಸ್ಪತ್ರೆಯಲ್ಲಿ ಒಂದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಎರಡು ಮಗುವಿಗೆ ಕೊವಿಡ್‌ ಪಾಸಿಟಿವ್ ಕಂಡು ಬಂದಿದ್ದು, ಚಿಕಿತ್ಸೆ ಮುಂದುವರಿದಿದೆ.

publive-image

ಬೆಂಗಳೂರಲ್ಲಿ ಕೊವಿಡ್‌ನ ಅತಿ ಹೆಚ್ಚು ಆ್ಯಕ್ಟಿವ್ ಕೇಸ್ ಪತ್ತೆಯಾಗಿರುವುದರಿಂದ ನಾಳೆಯಿಂದ ಕೊವಿಡ್ ಟೆಸ್ಟ್ ಆರಂಭಿಸಲು ನಿರ್ಧಾರ ಮಾಡಲಾಗಿದೆ. ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಜಿಲ್ಲಾಸ್ಪತ್ರೆಗಳಲ್ಲಿ ಕೊವಿಡ್ ಟೆಸ್ಟ್ ಮಾಡಲು ಸಿದ್ಧತೆ ನಡೆದಿದೆ.

ಇದನ್ನೂ ಓದಿ: ಮುಂಗಾರು ಮಳೆ ಅಬ್ಬರಕ್ಕೆ ಕ್ಷಣಗಣನೆ.. ಇಂದಿನಿಂದ ಒಂದು ವಾರ ಅಲರ್ಟ್‌, ಅಲರ್ಟ್‌; ಓದಲೇಬೇಕಾದ ಸ್ಟೋರಿ! 

ಬೆಂಗಳೂರು ನಗರದ ಮೆಡಿಕಲ್ ಕಾಲೇಜು, ಜಿಲ್ಲಾಸ್ಪತ್ರೆಯಲ್ಲಿ ಮತ್ತೆ 8 RTPCR ಟೆಸ್ಟಿಂಗ್ ಲ್ಯಾಬ್‌ಗಳನ್ನ ಓಪನ್ ಮಾಡಲು ಆರೋಗ್ಯ ಇಲಾಖೆ ಮುಂದಾಗಿದೆ. ಕೊವಿಡ್‌ ಕೇಸ್ ಏರಿಕೆಯ ಭೀತಿ ಹಿನ್ನೆಲೆಯಲ್ಲಿ ಮೊದಲು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬಳಿಕ ಬೌರಿಂಗ್ ಸೇರಿ ಉಳಿದ ಆಸ್ಪತ್ರೆಯಲ್ಲಿ ಟೆಸ್ಟಿಂಗ್ ಹೆಚ್ಚಳ ಮಾಡಲು ತಯಾರಿ ನಡೆಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment