/newsfirstlive-kannada/media/post_attachments/wp-content/uploads/2023/06/SIDDARAMAIAH_WIFE_PARWATI.jpg)
ಮೈಸೂರು: ಸಿಎಂ ಸಿದ್ದರಾಮಯ್ಯನವರ ರಾಜಕೀಯ ಬದುಕಿನಲ್ಲಿ ಈ ಹಿಂದೆ ಎಂದೂ ಕಾಣದ ಒಂದು ಕಪ್ಪು ಚುಕ್ಕೆ ಈಗ ಕಾಣಿಸಿಕೊಳ್ಳುತ್ತಿದೆ. ಮುಡಾ ಸೈಟ್ ಹಂಚಿಕೆಯಲ್ಲಿ ಅವರ ಪತ್ನಿಗೆ ಅಕ್ರಮವಾಗಿ 14 ಸೈಟ್ ನೀಡಲಾಗಿದೆ ಅನ್ನೋ ಗಂಭೀರ ಆರೋಪ ಸದ್ಯ ಸಿದ್ದರಾಮಯ್ಯನವರು ಎದುರಿಸುತ್ತಿದ್ದಾರೆ. ರಾಜ್ಯಪಾಲರು ಈಗಾಗಲೇ ಆ ವಿಚಾರವಾಗಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿ ಹೊಸ ವಿವಾದವೊಂದು ಸದ್ಯ ರಾಜಕೀಯ ಅಂಗಳದಲ್ಲಿ ಬಿರುಗಾಳಿ ಸೃಷ್ಟಿಸಿದೆ. ಅದರ ಬೆನ್ನಲ್ಲೆ ಈಗ ಮತ್ತೊಂದು ವಿವಾದ ಟಿಸಿಲೊಡೆದಿದೆ.
ಇದನ್ನೂ ಓದಿ:ಮುಡಾ ಕೇಸ್ನಿಂದ ಸಿದ್ದರಾಮಯ್ಯರನ್ನು ಬಚಾವ್ ಮಾಡಿದ್ದು ಮನು ಸಿಂಘ್ವಿ; ಯಾರು ಈ ಆಪತ್ಭಾಂದವ?
ಮುಡಾ ಸೈಟ್ಗಾಗಿ 2014ರಲ್ಲಿ ಬದಲಿ ನಿವೇಶನಕ್ಕೆಂದು ಸಿಎಂ ಸಿದ್ದರಾಮಯ್ಯನವರ ಪತ್ನಿ ಪಾರ್ವತಿಯವರು ಮೈಸೂರು ಡಿಸಿ ಹಾಗೂ ಮುಡಾ ಅಧ್ಯಕ್ಷರಿಗೆ ಪತ್ರ ಬರೆದಿದ್ದರು, ಪತ್ರದಲ್ಲಿ 3.16 ಎಕರೆ ಜಮೀನಿನಲ್ಲಿ ಬಡಾವಣೆ ನಿರ್ಮಿಸಿದ್ದರ ಬಗ್ಗೆ ಸಿಎಂ ಪತ್ನಿ ಪ್ರಶ್ನಿಸಿದ್ದರು. ಸದ್ಯ ಈ ಒಂದು ದಾಖಲೆಯನ್ನು ಸ್ನೇಹಮಯಿ ಕೃಷ್ಣ ಅವರು ಹಂಚಿಕೊಂಡಿದ್ದು ಆ ದಾಖಲೆಯ ಪತ್ರ ನ್ಯೂಸ್ ಫಸ್ಟ್ಗೆ ದೊರಕಿದೆ.
ಇದನ್ನೂ ಓದಿ:ಸಿಎಂ ಸಿದ್ದು ಬೆನ್ನಲ್ಲೇ HDKಗೂ ಸಂಕಷ್ಟ.. ಪ್ರಾಸಿಕ್ಯೂಷನ್‌ಗೆ ಗವರ್ನರ್ ಅನುಮತಿ ಕೊಡ್ತಾರಾ?
2001ರಲ್ಲಿಯೇ ಬಡವಾಣೆಯಲ್ಲಿ ನಿವೇಶನ ಹಂಚಿಕೆ ಮಾಡಿದ್ದಾಗಿ ಉಲ್ಲೇಖಿಸಲಾಗಿದೆ. 2004ರಲ್ಲಿ ದೇವರಾಜು ಅವರ ಸ್ವತ್ತಾಗಿದ್ದ ಭೂಮಿ ಹೇಗೆ ವರ್ಗಾವಣೆಯಾಯ್ತು ಅಂತ ಕೃಷ್ಣ ಪ್ರಶ್ನಿಸಿದ್ದಾರೆ. ಅಲ್ಲದೇ ಈ ನಿವೇಶನ ಭೂಮಿ ಕೃಷಿ ಭೂಮಿಯಾಗಿ ಬದಲಾಗಿದ್ದು ಹೇಗೆ ಎಂದು ಪ್ರಶ್ನೆಗಳು ಮೂಡಿವೆ.
ಅದಕ್ಕಿಂತ ಅಚ್ಚರಿಯ ವಿಷಯ ಅಂದ್ರೆ ಸಿಎಂ ಸಿದ್ದರಾಮಯ್ಯ ಪತ್ನಿ ಬರೆದ ಪತ್ರದಲ್ಲಿ ಕೆಲವು ಸಾಲುಗಳಿಗೆ ವೈಟ್ನರ್ ಹಾಕಲಾಗಿದೆ. ಅದು ಈಗ ದೊಡ್ಡ ಅನುಮಾನಕ್ಕೆ ಕಾರಣವಾಗಿದೆ. ಯಾವ ಸಾಲಿನಲ್ಲಿ ಜಾಗ ಬೇಕು ಅಂತ ಕೇಳಿದ್ರೋ ಆ ಸಾಲಿನಲ್ಲಿಯೇ ವೈಟ್ನರ್ ಹಾಕಲಾಗಿದೆ. ಹೀಗಾಗಿ ವೈಟ್ನರ್ ಹಾಕಿ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಏನಾದರೂ ನಡೆದಿದೆಯಾ ಅನ್ನುವ ಅನುಮಾನಗಳು ಕೂಡ ಮೂಡಿವೆ
ಈ ಪ್ರಕರಣದಲ್ಲಿ ಒಟ್ಟು ಆರು ಅನುಮಾನಗಳ ಹುಟ್ಟಿಕೊಂಡಿವೆ
2001ರಲ್ಲಿ ಪ್ರಾಧಿಕಾರದ ಸ್ವತ್ತು, 2004ರಲ್ಲಿ ದೇವರಾಜುರವರ ಸ್ವತ್ತಾಗಿ ಬದಲಾಗಿದ್ಹೇಗೆ?
ನಿವೇಶನವಾಗಿದ್ದ ಜಾಗ ನಂತರ ಕೃಷಿಭೂಮಿಯಾಗಿ ಬದಲಾವಣೆ ಆಗಿದ್ದು ಹೇಗೆ?
ಬದಲಿ ನಿವೇಶನ ನೀಡುವಂತೆ ಕೋರಿ ಬರೆದಿದ್ದ ಪತ್ರದಲ್ಲಿ ವೈಟ್ನರ್ ಬಳಕೆ ಮಾಡಿದ್ದೇಕೆ?
ವಿಜಯನಗರ ಬಡಾವಣೆಯಲ್ಲೇ ಸೈಟ್ ನೀಡುವಂತೆ ಪತ್ರದಲ್ಲಿ ಉಲ್ಲೇಖಿಸಲಾಗಿತ್ತಾ?
ಯಾವ ಸ್ಥಳದಲ್ಲಿ ಎಂದು ಬರೆದ ಜಾಗಕ್ಕೆ ವೈಟ್ನರ್ ಬಳಸಿ ತಿದ್ದಿದ್ಯಾರು? ಯಾರ ಒತ್ತಡ?
ವಿಜಯನಗರದ 2 ಮತ್ತು 3ನೇ ಹಂತದಲ್ಲೇ ನಿವೇಶನ ಕೊಡುವಂತೆ ಸಿಎಂ ಪತ್ನಿ ಕೇಳಿದ್ರಾ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ