/newsfirstlive-kannada/media/post_attachments/wp-content/uploads/2024/08/cm-siddaramaiah1.jpg)
ರಾಜ್ಯಪಾಲರ ಪ್ರಾಸಿಕ್ಯೂಷನ್​ಗೆ ಹಸ್ತಪಡೆ ಸಿಡಿದು ನಿಂತಿದೆ. ಹೈಕೋರ್ಟ್​ನಲ್ಲಿ ಗವರ್ನರ್ ನಡೆ ಪ್ರಶ್ನಿಸಲು ಸಜ್ಜಾಗಿದ್ದು, ಸಿಎಂ ಕಾನೂನು ಸಮರ ಸಾರಲಿದ್ದಾರೆ. ಸಿದ್ದು ಸಂಗ್ರಾಮಕ್ಕೆ ದೇಶದ ಬಲಿಷ್ಠ ವಕೀಲರ ಪಡೆ ಬಲ ತುಂಬಲಿದೆ. ಅಸಲಿ ಆಟ ಇಂದಿನಿಂದ ಶುರುವಾಗಲಿದೆ.
ರಾಜ್ಯಪಾಲರ ನಡೆ ವಿರುದ್ಧ ಸಿಎಂ ತಿರುಗಿಬಿದ್ದಿರೋ ಪರಿ ಇದು. ಷಡ್ಯಂತ್ರದ ಬಾಣ, ಸಂವಿಧಾನ ವಿರೋಧಿ ನಡೆ ಅಂತಾ ಕಿಡಿಕಾರ್ತಿರೋ ಸಿಎಂ ಕಾನೂನು ಹೋರಾಟಕ್ಕೆ ಸಜ್ಜಾಗಿದ್ದಾರೆ.
ಕಾನೂನು ಹೋರಾಟ ಮಾಡ್ತೀವಿ
ಮುಡಾ ಚಕ್ರವ್ಯೂಹದಲ್ಲಿ ಸಿಲುಕಿರೋ ಸಿದ್ದರಾಮಯ್ಯ ವಿರುದ್ಧ ರಾಜೀನಾಮೆ ಪಟ್ಟು ಬಿಗಿಯಾಗ್ತಿದೆ. ಕ್ಲೀನ್​ ಹ್ಯಾಂಡ್​ ಎನಿಸಿಕೊಳ್ತಿದ್ದ ಹಸ್ತಪಡೆಯ ನಾಯಕನಿಗೆ ಹಗರಣದ ಕೆಸರು ರಾಚಿದೆ. ರಾಜ್ಯಪಾಲರು ಸಿಎಂ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ಕೊಟ್ಟಿದ್ದು, ಸಿಎಂಗೆ ಅಖಾಡದಲ್ಲಿ ಆತಂಕ ಸೃಷ್ಟಿಸಿದೆ. ಈ ಬೆನ್ನಲ್ಲೇ ಕಾನೂನು ಸಮರ ಸಾರಲು ಮುಂದಾಗಿದ್ದಾರೆ.
/newsfirstlive-kannada/media/post_attachments/wp-content/uploads/2024/08/CM_SIDDU-2.jpg)
ಹೈಕೋರ್ಟ್​​ನಲ್ಲಿ ಅರ್ಜಿ ಸಲ್ಲಿಸಲು ಸಿದ್ದರಾಮಯ್ಯ ಸಜ್ಜು
ಮೂಡಾ ಹಗರಣ ಸಂಬಂಧ ರಾಜ್ಯಪಾಲ ಥಾವರ್​ಚಂದ್​ ಗೆಹಲೋಥ್​ ಪ್ರಾಸಿಕ್ಯೂಷನ್​ಗೆ ಅನುಮತಿ ಕೊಟ್ಟಿರೋ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಇಂದು ಹೈಕೋರ್ಟ್​ನಲ್ಲಿ ಅಧಿಕೃತವಾಗಿ ಅರ್ಜಿ ಸಲ್ಲಿಸಲಿದ್ದಾರೆ. ಈ ಮೂಲಕ ಗವರ್ನರ್ ಬಾಣಕ್ಕೆ ಕಾನೂನಾತ್ಮಕ ಪ್ರತ್ಯಸ್ತ್ರ ಹೂಡಲು ಸಿದ್ದರಾಮಯ್ಯನವರು ಮುಂದಾಗಿದ್ದಾರೆ.
ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆ ಕೇಸ್ ಬಳಿಕ ಈಗ ಮತ್ತೊಂದು ಕೇಸ್: ದರ್ಶನ್​ ಬೆಂಬಿಡದ ಸಂಕಷ್ಟಗಳು
ಸಿಎಂ ಸಿದ್ದರಾಮಯ್ಯ ಪರ ಹೋರಾಟಕ್ಕೆ ಡಬಲ್ ಶಕ್ತಿ!
ರಾಜ್ಯಪಾಲರ ನಡೆ ವಿರುದ್ಧದ ಹೋರಾಟಕ್ಕೆ SSS ಒಂದಾಗಲಿದೆ. ಸಿಎಂ ಸಿದ್ದರಾಮಯ್ಯಗೆ ಕಾನೂನು ಶಕ್ತಿ ತುಂಬಲು ಮತ್ತೆರಡು ಎಸ್​ಗಳ ಎಂಟ್ರಿಯಾಗಲಿದೆ. ಹಿರಿಯ ವಕೀಲರಾದ ಅಭಿಷೇಕ್ ಮನು ಸಿಂಘ್ವಿ, ಕಪಿಲ್ ಸಿಬಲ್ ಇಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. ಬೆಳಗ್ಗೆ ಸಿಎಂ ಹಾಗೂ ವಕೀಲರು ಸುದೀರ್ಘ ಚರ್ಚೆ ನಡೆಸಲಿದ್ದಾರೆ. ಮುಂದೇನಿದ್ರು ಕಾನೂನು ಸಮರ.
[caption id="attachment_81784" align="alignnone" width="800"]
ಅಭಿಷೇಕ್ ಮನು ಸಿಂಘ್ವಿ- ಕಪಿಲ್ ಸಿಬಲ್[/caption]
ಗವರ್ನರ್ ವಿರುದ್ಧ ಒಂದಾಗ್ತಿರೋದು ತ್ರಿಬಲ್ ಎಸ್​. ಸಿದ್ದು ಶಕ್ತಿ. ಸಿಂಘ್ವಿ ಚಾಣ್ಯಕ್ಷತನ, ಸಿಬಲ್ ತಂತ್ರ!. ಕಾಂಗ್ರೆಸ್ ಪಕ್ಷದ ಹಿರಿಯರು ಹಾಗೂ ಕಾನೂನು ಹೋರಾಟಗಾರರು ಆಗಿರೋ ಅಭಿಷೇಕ್ ಸಿಂಘ್ವಿ ಹಾಗೂ ಕಪಿಲ್ ಸಿಬಲ್ ಎಂಟ್ರಿಯಾಗ್ತಿರೋದು ಪ್ರಕರಣವನ್ನ ಮತ್ತಷ್ಟು ರೋಚಕ ಘಟಕ್ಕೆ ಕೊಂಡೊಯ್ದಿದೆ. ಆರ್​​ಆರ್​ಆರ್​ ರೀಲ್ ಕಥನಕ್ಕಿಂತಲೂ ರಿಯಲ್ ಎಸ್​ಎಸ್​ಎಸ್​ ಕದನ ಮತ್ತಷ್ಟು ರಣರೋಚಕವಾಗಿರಲಿದೆ.
ಇದನ್ನೂ ಓದಿ: ಪೋಷಕರಿಗೆ ದುಃಖ, ಬಂಧುಗಳಿಂದ ಅವಮಾನ, ಹಣದ ಬಗ್ಗೆ ಎಚ್ಚರ; ಇಲ್ಲಿದೆ ನಿಮ್ಮ ಭವಿಷ್ಯ
ಸದ್ಯ, ಕಾನೂನು ಕದನದಲ್ಲಿ ಗೆದ್ದು ಮುಡಾ ಪಂಜರದೊಳಗೆ ಸಿಲುಕಿರೋ ಅಭಿಮಾನಿಗಳ ಪಾಲಿನ ಸಿಎಂ ಸಿದ್ದರಾಮಯ್ಯ ಹೊರಬರುತ್ತಾ? ಅಥವಾ ಕಾಲಗರ್ಭದೊಳಗಿನ 2011ರ ಇತಿಹಾಸ ಮರುಕಳಿಸುತ್ತಾ? ಈ ಪ್ರಶ್ನೆಗೆ ಇನ್ನೇನು ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us