newsfirstkannada.com

‘ಯಾರನ್ನೂ ರಕ್ಷಿಸೋ ಪ್ರಶ್ನೆಯೇ ಇಲ್ಲ’- ಹಾನಗಲ್ ಗ್ಯಾಂಗ್‌ ರೇಪ್ ಪ್ರಕರಣಕ್ಕೆ ಸಿಎಂ ಖಡಕ್ ರಿಯಾಕ್ಷನ್

Share :

Published January 15, 2024 at 3:25pm

Update January 15, 2024 at 3:26pm

    ಹಾವೇರಿಯಲ್ಲಿ ಸಂತ್ರಸ್ಥೆ ಸಂಬಂಧಿಕರನ್ನು ಭೇಟಿಯಾದ ಸಿಎಂ

    ಯಾರೇ ಕಾನೂನು ಕೈಗೆ ತಗೊಂಡ್ರೂ ಶಿಕ್ಷೆ ಕೊಡಿಸ್ತೇವೆ

    ಯಾರನ್ನೂ ಇದರಲ್ಲಿ ರಕ್ಷಣೆ ಮಾಡೋ ಪ್ರಶ್ನೆಯೇ ಇಲ್ಲ

ಹಾವೇರಿ: ಹಾನಗಲ್​ನಲ್ಲಿ ನಡೆದ ಗ್ಯಾಂಗ್​ ರೇಪ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಹಾವೇರಿಯಲ್ಲಿ ಸಂತ್ರಸ್ಥೆ ಸಂಬಂಧಿಕರನ್ನು ಭೇಟಿಯಾದ ಸಿಎಂ, ಯಾರು ಆರೋಪಿಗಳಿದ್ದಾರೆ ಎಲ್ಲರೂ ಅರೆಸ್ಟ್ ಆಗಿದ್ದಾರೆ. ಯಾವುದೇ ಧರ್ಮಕ್ಕೆ ಸೇರಿದವರಾಗಲಿ ಜಾತಿಗೆ ಸೇರಿದವರಾಗಲಿ ಈ ಕೇಸ್‌ನಲ್ಲಿ ಯಾರೇ ಕಾನೂನು ಕೈಗೆ ತಗೊಂಡ್ರೂ ಶಿಕ್ಷೆ ಕೊಡಿಸ್ತೇವೆ. ಯಾರನ್ನೂ ಇದರಲ್ಲಿ ರಕ್ಷಣೆ ಮಾಡೋ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸಂತ್ರಸ್ತ ಮಹಿಳೆಯ ಕಡೆಯವರು ಈಗ ತಾನೇ ಅರ್ಜಿ ಕೊಟ್ಟಿದ್ದಾರೆ. ಪ್ರಾಥಮಿಕ ವರದಿ ಬರಲಿ. ಯಾವುದನ್ನೂ ಮುಚ್ಚಿ ಹಾಕೋ ಪ್ರಶ್ನೆಯೇ ಇಲ್ಲ. ಸ್ಥಳೀಯ ಶಾಸಕ ಶಿವಣ್ಣನವರ ಜೊತೆ ಮಾತಾಡಿ ಮುಂದೆ ನಿರ್ಧಾರ ಮಾಡ್ತೀನಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಇದನ್ನೂ ಓದಿ: ಸಾಮೂಹಿಕ ಅತ್ಯಾ** ಆರೋಪ ಕೇಸ್​.. ಸಿಎಂ ಭೇಟಿಗೂ ಮುನ್ನ ಹಾವೇರಿಯಲ್ಲಿ ಮಹತ್ವದ ಬೆಳವಣಿಗೆ

ಸಿಎಂ ಸಿದ್ದರಾಮಯ್ಯ ಅವರನ್ನೇ ಭೇಟಿಯಾದ ಸಂತ್ರಸ್ತೆ ಕುಟುಂಬಸ್ಥರು ನ್ಯಾಯಕ್ಕಾಗಿ ಮನವಿ ಮಾಡಿದರು. ಗ್ಯಾಂಗ್​ ರೇಪ್​ ಆದ ಸಂತ್ರಸ್ಥೆ ಸೋದರಿ ಮಾತನಾಡಿ, ಪೊಲೀಸರು ಮನೆಗೆ ಕರೆದುಕೊಂಡು ಬಿಟ್ಟು ಹೋಗಿದ್ದಾರೆ. ನನ್ನ ಸಹೋದರಿಗೆ ಬಹಳ ತೊಂದರೆ ಆಗಿದೆ ಪರಿಹಾರ ನೀಡಿ. ಅವರಿಗೆ ಮತ್ತೆ ಈಗ ಹುಷಾರಿಲ್ಲ, ಆಕೆಗೆ ಚಿಕಿತ್ಸೆ ನೀಡಬೇಕಿದೆ. ಪೊಲೀಸರು ಏನು ಹೇಳಲಿಲ್ಲ, ಮನೆಗೆ ಬಿಟ್ಟು ಹೋದರು ಅಷ್ಟೆ. ನಮಗೆ ನ್ಯಾಯ ಬೇಕು ಜೊತೆಗೆ ಪರಿಹಾರ ಬೇಕೆಂದು ಸಿಎಂ ಬಳಿ ಸಂತ್ರಸ್ಥೆ ಸೋದರಿ ಮನವಿ ಮಾಡಿದ್ದಾರೆ.

ಇಂದು ಸಿಎಂ ಸಿದ್ದರಾಮಯ್ಯ ಹಾವೇರಿ ಜಿಲ್ಲೆಗೆ ಆಗಮಿಸುವ ಹಿನ್ನೆಲೆಯಲ್ಲಿ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಸಾಧಿಕ್ ಅಗಸಿಮನಿ, ಶೋಯೆಬ್ ಮುಲ್ಲಾನ ಬಂಧಿತರು. ಇಲ್ಲಿವರೆಗೂ ಈ ಪ್ರಕರಣದ ಒಟ್ಟು ಎಂಟು ಆರೋಪಿಗಳ ಬಂಧನವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಯಾರನ್ನೂ ರಕ್ಷಿಸೋ ಪ್ರಶ್ನೆಯೇ ಇಲ್ಲ’- ಹಾನಗಲ್ ಗ್ಯಾಂಗ್‌ ರೇಪ್ ಪ್ರಕರಣಕ್ಕೆ ಸಿಎಂ ಖಡಕ್ ರಿಯಾಕ್ಷನ್

https://newsfirstlive.com/wp-content/uploads/2023/12/Siddaramaiah-3.jpg

Load More