Advertisment

ಚನ್ನಪಟ್ಟಣ ಮೇಲೆ ಕೈ ನಾಯಕರ ಕಣ್ಣು, ಉಪಚುನಾವಣೆ ಗೆಲ್ಲಲು ಕಸರತ್ತು; ಅಖಾಡಕ್ಕೆ ಇಳಿದ ಸಿಎಂ ಸಿದ್ದರಾಮಯ್ಯ

author-image
AS Harshith
Updated On
ಚನ್ನಪಟ್ಟಣ ಮೇಲೆ ಕೈ ನಾಯಕರ ಕಣ್ಣು, ಉಪಚುನಾವಣೆ ಗೆಲ್ಲಲು ಕಸರತ್ತು; ಅಖಾಡಕ್ಕೆ ಇಳಿದ ಸಿಎಂ ಸಿದ್ದರಾಮಯ್ಯ
Advertisment
  • ಚನ್ನಪಟ್ಟಣ ಕಬ್ಜಾ ಮಾಡಲು ‘ಕೈ’ ತಂತ್ರ!
  • ಚಾಮುಂಡೇಶ್ವರಿ ಕರಗ ಮಹೋತ್ಸವದಲ್ಲಿ ಸಿಎಂ ಭಾಗಿ
  • ಕುಮಾರಸ್ವಾಮಿ ಌಂಡ್ ಟೀಮ್​ಗೆ ಕೌಂಟರ್ ಕೊಡಲು ಡಿಕೆಶಿ ಟೀಂ ರೆಡಿ

ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರದಲ್ಲಿ ನಡೆದಿದ್ದ ಒಕ್ಕಲಿಗರ ವಾರ್​ನ ಸೆಕೆಂಡ್ ಇನ್ನಿಂಗ್ಸ್ ಶುರುವಾಗ್ತಿದೆ. ಈ ಬಾರಿ ಒಕ್ಕಲಿಗರ ಕದನಕ್ಕೆ ವೇದಿಕೆಯಾಗ್ತಿರೋದು ಚನ್ನಪಟ್ಟಣ ಉಪಚುನಾವಣೆಯ ರಣರಂಗ. ಇದರ ಭಾಗವಾಗಿ ಖುದ್ದು ಸಿಎಂ ಸಿದ್ದರಾಮಯ್ಯ ಸಹ ಚನ್ನಪಟ್ಟಣ ಅಖಾಡಕ್ಕೆ ಎಂಟ್ರಿಯಾಗಿದ್ದಾರೆ. ರಾಮನಗರ ಕರಗದ ನೆಪದಲ್ಲಿ ಚನ್ನಪಟ್ಟಣ ಕಬ್ಜಾ ಮಾಡಲು ರಣತಂತ್ರ ಹೆಣೆದಿದ್ದಾರೆ. ಚನ್ನಪಟ್ಟಣದಲ್ಲಿ ವಿಜಯಲಕ್ಷ್ಮಿ ಒಲಿಸಿಕೊಳ್ಳಲು ಒಕ್ಕಲಿಗರ ಟೀಮ್ ನಡುವೆಯೇ ಹಣಾಹಣಿ ಶುರುವಾಗಿದೆ. ಬೆಂಗಳೂರು ಗ್ರಾಮಾಂತರದ ಗುದ್ದಾಟದಲ್ಲಿ ಸೋಲನುಭವಿಸಿದ್ದ ಡಿಕೆ ಬ್ರದರ್ಸ್​ ಚನ್ನಪಟ್ಟಣವನ್ನ ಟಾರ್ಗೆಟ್​ ಮಾಡಿ ಫೀಲ್ಡ್​ಗಿಳಿದಿದ್ದಾರೆ. ಕುಮಾರಸ್ವಾಮಿ ಌಂಡ್ ಟೀಮ್​ಗೆ ಕೌಂಟರ್ ಕೊಡಲು ಡಿಕೆಶಿ ಟೀಂ ಸಜ್ಜಾಗಿದೆ. ಈ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಸಹ ಚನ್ನಪಟ್ಟಣ ಅಖಾಡಕ್ಕೆ ಎಂಟ್ರಿ ಪಡೆದಿದ್ದಾರೆ.

Advertisment

ಇದನ್ನೂ ಓದಿ: ದೇವಸ್ಥಾನದ ಮೇಲೆ ಬಿದ್ದ ಮರ, ಕುಸಿದು ಬಿದ್ದ ಸರ್ಕಾರಿ ಶಾಲಾ ಗೋಡೆ.. ಮಳೆಯಿಂದಾಗಿ ಸಾವಿರಾರು ಸಮಸ್ಯೆ

ವಿಜಯಮಾಲೆಗಾಗಿ ಒಕ್ಕಲಿಗ ನಾಯಕರ ಹಣಾಹಣಿ

ಚನ್ನಪಟ್ಟಣ ಉಪಚುನಾವಣೆಗೆ ಯಾರು ಅಭ್ಯರ್ಥಿ ಅನ್ನೋದು ಫೈನಲ್ ಆಗಿಲ್ಲ. ಆದ್ರೆ ರೇಸ್​ನಲ್ಲಿರೋರೆಲ್ಲಾ ಒಕ್ಕಲಿಗರೇ. ಮೈತ್ರಿ ಕೂಟದಲ್ಲಿ ಒಕ್ಕಲಿಗರಾದ ನಿಖಿಲ್ ಕುಮಾರಸ್ವಾಮಿ, ಸಿ.ಪಿ.ಯೋಗೇಶ್ವರ್ ಹೆಸರು ಹರಿದಾಡ್ತಿದೆ. ಇವರಿಬ್ಬರಲ್ಲಿ ಯಾರು, ಯಾವ ಪಕ್ಷದ ಚಿಹ್ನೆಯಡಿ ಅಖಾಡಕ್ಕಿಳಿಯಲಿದ್ದಾರೆ ಕಾದು ನೋಡಬೇಕಿದೆ. ಅತ್ತ ಕಾಂಗ್ರೆಸ್​ ಪಾಳಯದಲ್ಲಿ ಟ್ರಯಲ್‌ ರನ್ ಶುರುವಾಗಿದೆ. ಪ್ರಾರಂಭದಲ್ಲಿ ಮಾಜಿ ಸಂಸದ ಡಿ.ಕೆ.ಸುರೇಶ್‌ ಹೆಸರು ಚಾಲ್ತಿಗೆ ಬಂದಿತ್ತು. ಬಳಿಕ ಖುದ್ದು ಡಿ.ಕೆ.ಶಿವಕುಮಾರ್ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ರು. ಅದಾದ ಬಳಿಕ ಯೋಗೇಶ್ವರ್ ಪುತ್ರಿ ನಿಶಾ, ಡಿಕೆಶಿ ಪುತ್ರಿ ಐಶ್ವರ್ಯ ಹೆಗ್ಡೆ ಹೆಸರುಗಳು ಓಡಾಡಿದ್ದವು.

publive-image

ಇದನ್ನೂ ಓದಿ: ಪ್ರೀತಿಗೆ ಅಡ್ಡಿ ಆಗಲಿಲ್ಲ ವಯಸ್ಸು.. ಅಳಿಯನ ವರ್ಷ ತಿಳಿದು ದಂಗಾದ ಪೋಷಕರು.. ಠಾಣೆಯಲ್ಲಿ ಹೈಡ್ರಾಮಾ

Advertisment

ಕರಗದ ನೆಪದಲ್ಲಿ ಚನ್ನಪಟ್ಟಣ ಕಬ್ಜಾ ಮಾಡಲು ‘ಕೈ’ ತಂತ್ರ!

ನಿನ್ನೆ ಮಧ್ಯಾಹ್ನ ಸುಮಾರು ಚಾಮುಂಡೇಶ್ವರಿ ಕರಗ ಮಹೋತ್ಸವದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾದ್ಯಕ್ಷ ನಿಖಿಲ್ ಕುಮಾರಸ್ವಾಮಿ ಭಾಗಿಯಾಗಿ ಪೂಜೆ ಸಲ್ಲಿಸಿದ್ದಾರೆ. ಇದು ಚನ್ನಪಟ್ಟಣಕ್ಕೆ ನಿಖಿಲ್​ ಕುಮಾರಸ್ವಾಮಿಯೇ ಅಭ್ಯರ್ಥಿ ಆಗ್ತಾರಾ ಅನ್ನೋ ಕುತೂಹಲಕ್ಕೆ ಕಾರಣಾಗಿದೆ. ಇದೇ ವೇಳೆ ಚನ್ನಪಟ್ಟಣದಲ್ಲಿ ಮೈತ್ರಿ ಅಭ್ಯರ್ಥಿ ವಿರುದ್ಧ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸೋಕೆ ಕಾಂಗ್ರೆಸ್​ ನಾಯಕರು ತಂತ್ರ ರಣತಂತ್ರ ರೂಪಿಸುತ್ತಿದ್ದಾರೆ. ಖುದ್ದು ಡಿ.ಕೆ ಶಿವಕುಮಾರ್​ ತಿಂಗಳ ಹಿಂದೆಯೇ ಚನ್ನಪಟ್ಟಣ ಅಖಾಡಕ್ಕೆ ಎಂಟ್ರಿಕೊಟ್ಟ ಬೆನ್ನಲ್ಲೇ ನಿನ್ನೆ ರಾಮನಗರ ಕರಗದ ನೆಪದಲ್ಲಿ ಜೆಡಿಎಸ್​ ಹಾಗೂ ಕಾಂಗ್ರೆಸ್​ ನಾಯಕರ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ. ರಾಮನಗರದ ಚಾಮುಂಡೇಶ್ವರಿ ಕರಗ ಮಹೋತ್ಸವ ಹಿನ್ನೆಲೆ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಮೂಲಕ ಚನ್ನಪಟ್ಟಣ ಗೆಲ್ಲಲೇಬೇಕು ಅನ್ನೋ ಸ್ಪಷ್ಟ ಸಂದೇಶವನ್ನ ಸಿಎಂ ಸಿದ್ದರಾಮಯ್ಯ ಸಹ ರವಾನಿಸಿದ್ದಾರೆ.

publive-image

ಇದನ್ನೂ ಓದಿ: ಪ್ರೇಮಿಗಳಿಗಾಗಿ ತಯಾರಾಗಿದೆ ಟು ಇನ್​ ಒನ್​​ ಛತ್ರಿ.. ನಿಮ್ಮ ಪ್ರೇಯಸಿಗಾಗಿ ಖರೀದಿ ಮಾಡಿ!

ಒಟ್ಟಿನಲ್ಲಿ ಚನ್ನಪಟ್ಟಣ ಗೆಲ್ಲೋದು ಕಾಂಗ್ರೆಸ್​ ಮತ್ತು ಮೈತ್ರಿ ಪಕ್ಷದ ಒಕ್ಕಲಿಗ ನಾಯಕರಿಗೆ ದೊಡ್ಡ ಚಾಲೆಂಜ್​ ಆಗಿದೆ. ಕಾಂಗ್ರೆಸ್​ ಹಾಗೂ ಮೈತ್ರಿಪಡೆಯಿಂದ ಯಾರು ಅಭ್ಯರ್ಥಿಯಾಗಿ ಅಖಾಡಕ್ಕೆ ಇಳೀತಾರೆ ಅನ್ನೋದೆ ಸದ್ಯದ ಕುತೂಹಲವಾಗಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment