/newsfirstlive-kannada/media/post_attachments/wp-content/uploads/2024/07/SIDDU_R_ASHOK.jpg)
ಕಾಂಗ್ರೆಸ್ನಲ್ಲಿ ಸಿಎಂ ಕುರ್ಚಿ ಬದಲಾವಣೆ ಎಂಬ ಸುದ್ದಿ ಆಗಾಗ್ಗೆ ಕೇಳಿ ಬರ್ತಾನೇ ಇದೆ. ಇದು ಹಲವು ಸಲ ಹಸ್ತದೊಳ್ ಕೋಲಾಹಲವನ್ನೇ ಎಬ್ಬಿಸಿ ಸದ್ಯ ಬೂದಿ ಮುಚ್ಚಿದ ಕೆಂಡದಂತಿದೆ. ಆದ್ರೆ ವಿಪಕ್ಷ ನಾಯಕರು ಇದಕ್ಕೆ ಗಾಳಿ ಹಾಕಿ ಬೆಂಕಿ ಹಚ್ಚುತ್ತಲೇ ಇದ್ದಾರೆ. ಈಗ ಮತ್ತೆ ಆರ್ ಅಶೋಕ್ ಹೊಸ ಬಾಂಬ್ ಸಿಡಿಸಿದ್ದಾರೆ.
ಇದನ್ನೂ ಓದಿ:ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಏನೂ ಸಿಕ್ಕಿಲ್ವಾ? ಕಾಂಗ್ರೆಸ್ ಕೈಗೆ ಬ್ರಹ್ಮಾಸ್ತ್ರ!
ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಪವರ್ ಶೇರಿಂಗ್ ಬೂದಿ ಮುಚ್ಚಿದ ಕೆಂಡ... ಅದ್ಯಾವಾಗ ಬೂದಿ ಹಾರಿ ಆ ಕೆಂಡ ಮತ್ತೆ ಜ್ವಾಲಾಮುಖಿಯಾಗಿ ಧಗ ಧಗ ಉರಿಯುತ್ತೋ.. ಒಂದ್ಕಡೆ ಸಿಎಂ ಸಿದ್ದರಾಮಯ್ಯ ಮತ್ತೊಂದ್ಕಡೆ ಡಿಸಿಎಂ ಡಿಕೆಶಿ ಕುರ್ಚಿಗಾಗಿ ಕಿತ್ತಾಡಿರೋದು ಗುಟ್ಟಾಗೇನೂ ಉಳಿದಿಲ್ಲ. ಈ ನಡುವೆ ಕೇಸರಿ ಕಲಿ, ವಿಪಕ್ಷ ನಾಯಕ ಆರ್ ಅಶೋಕ್ ಹೊಸ ಬಾಂಬ್ ಸಿಡಿಸಿದ್ದಾರೆ.
ನವೆಂಬರ್ನಲ್ಲಿ ಸಿಎಂ ಬದಲಾವಣೆ ಪಕ್ಕಾ ಎಂದ ಸಾಮ್ರಾಟ್
ಅದ್ಯಾರೇ ಬರಲಿ, ಏನೇ ಆಗಲಿ ಈ ನವೆಂಬರ್ನಲ್ಲಿ ಸಿಎಂ ಸಿದ್ದರಾಮಯ್ಯ ಬದಲಾವಣೆ ಖಚಿತ ಅಂತ ವಿಪಕ್ಷ ನಾಯಕ ಆರ್.ಅಶೋಕ್ ಹೊಸ ಬಾಂಬ್ ಸಿಡಿಸಿದ್ದಾರೆ. ಜನ ನಿಮ್ಮನ್ನ ಆದಷ್ಟು ಬೇಗ ಗಂಟು ಮೂಟೆ ಕಟ್ಟಿಸ್ತಾರೆ. ನವೆಂಬರ್ಗೆ ಈ ಮ್ಯೂಜಿಕಲ್ ಚೇರ್ ಬದಲಾಗುತ್ತೆ. ಆಗಲೇ ಡಿಕೆಶಿ ಒದ್ದು ಕಿತ್ತುಕೊಳ್ತೀನಿ ಅಂತ ಹೇಳಿದ್ದಾರೆ. ನವೆಂಬರ್ 15 ಅಥವಾ 16 ಸಿಎಂ ಕುರ್ಚಿ ಬದಲಾವಣೆ ಆಗುತ್ತೆ. ಆಗಲೇಬೇಕಲ್ವ, ಇಲ್ಲ ಅಂದ್ರೆ ಡಿಕೆಶಿ ಒದ್ದು ಕಿತ್ತುಕೊಳ್ತಾರೆ ಅಂತ ಭವಿಷ್ಯ ನುಡಿದಿದ್ದಾರೆ. ಇದೇ ವೇಳೆ ಅಮಾವಾಸ್ಯೆ ಹಾಗೂ ಡಿಕೆಶಿ ಬಗ್ಗೆ ಸ್ವಾರಸ್ಯಕರ ವಿಚಾರವನ್ನೂ ಬಿಚ್ಚಿಟ್ಟಿದ್ದಾರೆ.
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದ ಸಿದ್ದು
ಇನ್ನು ಸಿಎಂ ಬದಲಾವಣೆ ಎಂದ ಅಶೋಕ್ ಮಾತನ್ನು ಸಿಎಂ ಸಿದ್ದರಾಮಯ್ಯ ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಇಲ್ಲ. ಈ ಬಗ್ಗೆ ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತದೆ. ಬಿಜೆಪಿಯವರು ಬಹಳ ಕಾಲದಿಂದಲೂ ಸಿಎಂ ಬದಲಾವಣೆ ಬಗ್ಗೆ ಮಾತನಾಡ್ತಿದ್ದಾರೆ. ಮೊದಲು ಅವರ ಪಕ್ಷದಲ್ಲಿರುವ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಲಿ ಅಂತ ಸಿದ್ದರಾಮಯ್ಯ ಹೇಳಿದ್ದಾರೆ.
ಒಟ್ಟಾರೆ ರಾಜ್ಯದಲ್ಲಿ ಅದರಲ್ಲೂ ಹಸ್ತ ಪಾಳಯದಲ್ಲಿ ಸಿಎಂ ಬದಲಾವಣೆ ಎಂಬ ಚರ್ಚೆ ಆರಂಭದಿಂದಲೂ ಭಾರೀ ಹಲ್ಚಲ್ ಎಬ್ಬಿಸಿದೆ. ಈಗ ಆರ್ ಅಶೋಕ್ ಇದಕ್ಕೆ ದಿನಾಂಕವನ್ನೂ ಫಿಕ್ಸ್ ಮಾಡಿದ್ದಾರೆ. ಈ ಭವಿಷ್ಯ ನಿಜವಾಗುತ್ತಾ ಅನ್ನೋದನ್ನ ತಿಳಿಯಲು ನವೆಂಬರ್ವರೆಗೂ ಕಾಯಲೇಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ