ಒಂದು ನಾವಿಕನ ಕುಟುಂಬ 30 ಕೋಟಿ ಆದಾಯ ಗಳಿಸಿದೆ; ಕುಂಭಮೇಳದ ಸಕ್ಸಸ್ ಸ್ಟೋರಿ ಹೇಳಿದ ಯೋಗಿ..!

author-image
Ganesh
Updated On
ಒಂದು ನಾವಿಕನ ಕುಟುಂಬ 30 ಕೋಟಿ ಆದಾಯ ಗಳಿಸಿದೆ; ಕುಂಭಮೇಳದ ಸಕ್ಸಸ್ ಸ್ಟೋರಿ ಹೇಳಿದ ಯೋಗಿ..!
Advertisment
  • 45 ದಿನ.. 130 ದೋಣಿಗಳು.. ನಾವಿಕನ ಕುಟುಂಬಕ್ಕೆ ಆದಾಯ
  • ಸುಮಾರು 130 ದೋಣಿಗಳ ಮೂಲಕ 30 ಕೋಟಿ ರೂ. ಆದಾಯ
  • ಪ್ರತಿ ದೋಣಿಯು 45 ದಿನದಲ್ಲಿ 23 ಲಕ್ಷ ರೂಪಾಯಿಯಷ್ಟು ಗಳಿಕೆ

ಮಹಾಕುಂಭ ಮೇಳ.. ಕೆಲವರ ನಂಬಿಕೆ.. ಕೆಲವರ ಭಕ್ತಿ.. ಸಾಧು ಸಂತರ ಸಮಾಗಮ ಸ್ಥಳ.. ವಿಶ್ವದ ಅತೀ ದೊಡ್ಡ ಹಬ್ಬದ ಬಗ್ಗೆ ಅನೇಕರು ಅನೇಕ ರೀತಿಗಳಲ್ಲಿ ಟೀಕೆ ಮಾಡಿದ್ದರು. 45 ದಿನಗಳ ಕಾಲ ನಡೆದ ಈ ಐತಿಹಾಸಿಕ ಧಾರ್ಮಿಕ ಕಾರ್ಯಕ್ರಮ ಉತ್ತರ ಪ್ರದೇಶದ ಆರ್ಥಿಕತೆಗೆ ಬಿಗ್​ಬೂಸ್ಟ್​ ನೀಡಿದೆ. ಕೇವಲ ಸರ್ಕಾರದ ಖಜಾನೆ ಮಾತ್ರವಲ್ಲ.. ಅದೆಷ್ಟೋ ಕುಟುಂಬಗಳ ಬದುಕಿನ ದಿಕ್ಕನ್ನೇ ಬದಲಿದೆ.

45 ದಿನ.. 130 ದೋಣಿಗಳು..

ಮಹಾಕುಂಭ ಮೇಳ ಅದೆಷ್ಟೋ ಜನರ ಅದೃಷ್ಟವನ್ನೇ ಬದಲಿಸಿದೆ. ಮೊನಾಲಿಸಾ ಎಂಬ ಚಿನ್ನದಕಂಗಳ ಹುಡುಗಿಯನ್ನು ರಾತ್ರೋ ರಾತ್ರಿ ದೊಡ್ಡ ಸ್ಟಾರ್​ ಮಾಡಿದೆ. ಅದೇ ರೀತಿ ಪ್ರಯಾಗ್​ರಾಜ್​ನ ನಾವಿಕನ ಕುಟುಂಬದ ಅದೃಷ್ಟವನ್ನೇ ಬದಲಿಸಿದೆ. ಈ ಕುಟುಂಬದ ಯಶೋಗಾಥೆಯನ್ನು ಸಿಎಂ ಯೋಗಿ ಆದಿತ್ಯನಾಥ್​ ಹಾಡಿಹೊಗಳಿದ್ದಾರೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ಪ್ರೇಯಸಿಯ ಕತ್ತು ಸೀಳಿದ ಪ್ರಿಯಕರ.. ಐಶ್ವರ್ಯ ಇಲ್ಲದೇ ನಾನಿಲ್ಲ ಅಂತ ಜೀವ ಬಿಟ್ಟ ಭಗ್ನಪ್ರೇಮಿ

publive-image

ಪ್ರಯಾಗ್​ರಾಜ್​ನ ನಾವಿಕ ಕುಟುಂಬವೊಂದು 45 ಗಳ ಕಾಲ ಸುಮಾರು 130 ದೋಣಿಗಳ ಮೂಲಕ 30 ಕೋಟಿ ರೂ. ಆದಾಯ ಬಂದಿದೆ. ಪ್ರತಿನಿತ್ಯ ದೋಣಿಯಿಂದ 50,000-52,000 ರೂಪಾಯಿ ಆದಾಯ ಗಳಿಸಸಿದೆ. ಈ ದೋಣಿಯು 45 ದಿನದಲ್ಲಿ 23 ಲಕ್ಷ ರೂಪಾಯಿಯಷ್ಟು ಗಳಿಕೆ ಮಾಡಿದೆ. ಅಂದ್ರೆ ಪ್ರತಿನಿತ್ಯ ಒಂದು ದೋಣಿಯಿಂದ 50,000-52,000 ರೂಪಾಯಿ ಆದಾಯ ಬಂದಿದೆ ಎಂದು ಸಿಎಂ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.

ವಿಪಕ್ಷಗಳಿಗೆ ಟಾಂಗ್

ನಿಮ್ಮ ನಕಾರಾತ್ಮಕ ಪ್ರಚಾರವು ಭಾರತದ ನಂಬಿಕೆಯನ್ನು ಅಲುಗಾಡಿಸಲು ಸಾಧ್ಯವಾಗಲಿಲ್ಲ. ನೀವು ನಿಮ್ಮ ಪ್ರಚಾರವನ್ನ ಮುಂದುವರಿಸಿದ್ದೀರಿ.. ಆದರೆ ದೇಶದ ಜನರು ನಿಮ್ಮ ನಕಾರಾತ್ಮಕ ಮಾತುಗಳನ್ನು ನಂಬಲಿಲ್ಲ. ಜನರು ಶೀಘ್ರದಲ್ಲೇ ನಿಮ್ಮ ಮಾತನ್ನು ಕೇಳುವುದನ್ನು ನಿಲ್ಲಿಸುತ್ತಾರೆ ಎಂದು ನಾನು ನಂಬುತ್ತೇನೆ ಎಂದು ಸಿಎಂ ಯೋಗಿ ಆದಿತ್ಯನಾಥ್ ಕಿಡಿಕಾರಿದ್ದಾರೆ. ಮಹಾ ಕುಂಭಮೇಳದ ಆರ್ಥಿಕ ಪರಿಣಾಮವು ಈ ವರ್ಷ ಭಾರತದ ಶೇಕಡ 6.5 ರಷ್ಟು ಜಿಡಿಪಿ ಬೆಳವಣಿಗೆಗೆ ಕೊಡುಗೆ ನೀಡುತ್ತಿದೆ ಅನ್ನೋದನ್ನ ಯೋಗಿ ಪ್ರಸ್ತಾಪಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಹಳೆ ದ್ವೇಷ, ರೌಡಿಶೀಟರ್​​​ನ​ ಬರ್ಬರ ಹತ್ಯೆ.. ಅಟ್ಯಾಕ್ ಮಾಡಿದ ಡೆಡ್ಲಿ ಗ್ಯಾಂಗ್ ಯಾವುದು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment