newsfirstkannada.com

ನಿಮ್ಮ ಮಗನನ್ನು ಕ್ರಿಕೆಟ್​​ ಟೂರ್ನಮೆಂಟ್​ನಲ್ಲಿ ಆಡಿಸ್ತೇನೆ.. ಪೋಷಕರಿಗೆ 12 ಲಕ್ಷ ರೂಪಾಯಿ ವಂಚಿಸಿದ ಕೋಚ್​

Share :

Published February 26, 2024 at 11:44am

Update February 27, 2024 at 4:57pm

    ಕ್ರಿಕೆಟ್​ ಕೋಚ್​ ಮಾತಿಗೆ ಮರುಳಾದ ಪೋಷಕರು

    ಮಗನಿಗಾಗಿ 12 ಲಕ್ಷ ರೂಪಾಯಿ ಕಳೆದಕೊಂಡ ತಂದೆ-ತಾಯಿ

    ಟೂರ್ನಮೆಂಟ್​ನಲ್ಲಿ ಆಡಿಸೋದಾಗಿ ನಂಬಿಸಿದ್ದ ಕ್ರಿಕೆಟ್​ ಕೋಚ್

ಕ್ರಿಕೆಟ್​ ಕೋಚ್​ವೊಬ್ಬರು ಆಟಗಾರನಿಗೆ ಕ್ರಿಕೆಟ್ ಟೂರ್ನಮೆಂಟ್‌ ಗಳಲ್ಲಿ ಆಡುವ ಅವಕಾಶ ಕೊಡಿಸುವುದಾಗಿ ವಂಚಿಸಿದ ಆರೋಪವೊಂದು ಕೇಳಿಬಂದಿದೆ. 23 ವರ್ಷದ ಕ್ರಿಕೆಟ್ ಆಟಗಾರನಿಗೆ ಕೋಚ್ ಬರೋಬ್ಬರಿ 12 ಲಕ್ಷ ರೂಪಾಯಿ ವಂಚಿಸಿರುವುದು ತಿಳಿದುಬಂದಿದೆ.

ಬೆಂಗಳೂರಿನ ರೋರ್​ ಕ್ರಿಕೆಟ್ ಅಕಾಡೆಮಿ ಕೋಚ್ ಗೌರವ್ ಧಿಮಾನ್ ವಂಚನೆ ಆರೋಪ ಕೇಳಿಬಂದಿದೆ. ಅದೇ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದ ಯುವಕನಿಂದ ಉಪ್ಪಾರಪೇಟೆಗೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೋಚ್ ಗೌರವ್ ಧಿಮಾನ್ ಯುವಕನ ಪೋಷಕರನ್ನ ಪರಿಚಯ ಮಾಡಿಕೊಂಡಿದ್ದರು. ಬಳಿಕ ಕೆಲವು ಟೂರ್ನಮೆಂಟ್ ಗಳಲ್ಲಿ ಮಗನಿಗೆ ಆಡಲು ಅವಕಾಶ ಕೊಡಿಸುವುದಾಗಿ ನಂಬಿಸಿದ್ದರು. ಹಾಗೆ ಈ ಹಿಂದೆ ಆಡುತ್ತಿದ್ದ ಕ್ಲಬ್ ಗೆ ಆಡದಂತೆ ಷರತ್ತು ಹಾಕಿದ್ದರು. ಬಳಿಕ ಟೂರ್ನಮೆಂಟ್ ಗಳಲ್ಲಿ ಆಡಲು ಒಳ್ಳೆ ಬ್ಯಾಟ್ ಗಳು, ತರಬೇತಿ ನೀಡುವುದಾಗಿ ಹೇಳಿದ್ದರು. ಇದಕ್ಕಾಗಿ ಯುವಕನ ಪೋಷಕರ ಬಳಿ ಹಂತ ಹಂತವಾಗಿ 12.23 ಲಕ್ಷ ರೂ ಪಡೆದಿದ್ದರು.

ಆದರೆ ಯುವಕನಿಗೆ ಯಾವುದೇ ಟೂರ್ನಮೆಂಟ್ ಗಳಲ್ಲಿ ಅವಕಾಶವಾಗಲಿ, ಕ್ರಿಕೆಟ್ ಐಟಂಗಳನ್ನ ಕೊಡಿಸದೇ ವಂಚಿಸಿರುವ ಆರೋಪ ಕೇಳಿಬಂದಿದೆ. ಕೊನೆಗೆ ಹಣ ವಾಪಸ್ ಕೇಳಿದರೆ ಕೋಚ್ ಬೆದರಿಕೆ ಹಾಕಿದ್ದಾರೆ ಎಂದು ಪೋಷಕರು ಹೇಳಿದ್ದಾರೆ. ಮಗನ ಭವಿಷ್ಯ ಹಾಳು ಮಾಡುವುದಾಗಿ, ಕೊಲೆ ಮಾಡಿಸುವುದಾಗಿ ಕೋಚ್ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಸದ್ಯ ಯುವಕನ ಪೋಷಕರು ಈ ಬಗ್ಗೆ ಉಪ್ಪಾರಪೇಟೆ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರು ಆಧರಿಸಿ FIR ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಿಮ್ಮ ಮಗನನ್ನು ಕ್ರಿಕೆಟ್​​ ಟೂರ್ನಮೆಂಟ್​ನಲ್ಲಿ ಆಡಿಸ್ತೇನೆ.. ಪೋಷಕರಿಗೆ 12 ಲಕ್ಷ ರೂಪಾಯಿ ವಂಚಿಸಿದ ಕೋಚ್​

https://newsfirstlive.com/wp-content/uploads/2024/02/roar-1.jpg

Load More