newsfirstkannada.com

ಹಾರ್ದಿಕ್​ ಪಾಂಡ್ಯಗೆ ಬಿಗ್ ಶಾಕ್‌.. ಡ್ರೆಸ್ಸಿಂಗ್​ ರೂಮ್‌ನಲ್ಲೇ ಕೋಚ್‌ ಗಂಭೀರ್​​ ವಾರ್ನಿಂಗ್‌; ಹೇಳಿದ್ದೇನು?

Share :

Published August 1, 2024 at 11:49am

    ಲಂಕಾ ಟಿ20 ಸರಣಿ ಕ್ಲೀನ್​ಸ್ವೀಪ್​​ ಬೆನ್ನಲ್ಲೇ ಖಡಕ್​​​ ವಾರ್ನಿಂಗ್​

    ಟೀಂ ಇಂಡಿಯಾ ಆಟಗಾರರಿಗೆ ಎಚ್ಚರಿಕೆ ಕೊಟ್ಟಿದ್ಯಾಕೆ ಗಂಭೀರ್?

    ಮುಂದಿನ ಸೆಪ್ಟೆಂಬರ್​ನಲ್ಲಿ ಬಾಂಗ್ಲಾದೇಶ ತಂಡ ಭಾರತಕ್ಕೆ ಆಗಮನ

ಶ್ರೀಲಂಕಾ ಎದುರಿನ ಚುಟುಕು ಸರಣಿ ಗೆಲುವಿನ ಬೆನ್ನಲ್ಲೇ ಹೆಡ್​ ಕೋಚ್​ ಗೌತಮ್​ ಗಂಭೀರ್​ ಗರಂ ಆಗಿದ್ದಾರೆ. ಖಡಕ್​ ಮಾತುಗಳಲ್ಲಿ ಟೀಮ್​ ಇಂಡಿಯಾ ಸ್ಟಾರ್​ಗಳಿಗೆ ವಾರ್ನಿಂಗ್​ ಕೊಟ್ಟಿದ್ದಾರೆ.
ಟೀಮ್​ ಇಂಡಿಯಾ ಹೆಡ್​ ಕೋಚ್ ಆಗಿ​​​ ಗೌತಮ್​ ಗಂಭೀರ್​​ ಅದ್ಧೂರಿ ಆರಂಭ ಮಾಡಿದ್ದಾರೆ. ಗಂಭೀರ್​ ಮಾರ್ಗದರ್ಶನದಲ್ಲಿ ಟೀಮ್​ ಇಂಡಿಯಾ ಸಿಂಹಳೀಯರ ಬೇಟೆಯಾಡಿದೆ. ಕ್ಲೀನ್​ ಸ್ವೀಪ್ ದಿಗ್ವಿಜಯ ಸಾಧಿಸೋದ್ರೊಂದಿಗೆ ಗೌತಮ್​ ಗಂಭೀರ್​, ಕೋಚ್​ ಆಗಿ ಮೊದಲ ಅಗ್ನಿ ಪರೀಕ್ಷೆ ಗೆದ್ದಿದ್ದಾರೆ. 3-0 ಅಂತರದಲ್ಲಿ ಸರಣಿ ಗೆಲುವಿನೊಂದಿಗೆ ಟೀಮ್​​ ಇಂಡಿಯಾದಲ್ಲಿ ಗಂಭೀರ್​ ಯುಗ ಆರಂಭವಾಗಿದೆ.

ಸರಣಿ ಕ್ಲೀನ್​ಸ್ವೀಪ್​​ ಬೆನ್ನಲ್ಲೇ ಖಡಕ್​​​ ವಾರ್ನಿಂಗ್​
ಆಟಗಾರರಿಗೆ ಎಚ್ಚರಿಕೆ ಕೊಟ್ಟ ಗುರು ಗಂಭೀರ್
ಪೆಲ್ಲೆಕೆಲೆಯಲ್ಲಿ ಚುಟುಕು ಸರಣಿ ಗೆದ್ದ ಬಳಿಕ ಏಕದಿನ ಸರಣಿಯ ಭಾಗವಾಗಿರೋ ಆಟಗಾರರು ಹಾಗೂ ಸಪೋರ್ಟ್​​ ಸ್ಟಾಫ್​​​ ಕೊಲಂಬೋಗೆ ಬಂದಿದ್ದಾರೆ. ಇನ್ನುಳಿದ ಆಟಗಾರರು ಸೀದಾ ಭಾರತಕ್ಕೆ ವಾಪಾಸ್ಸಾಗಿದ್ದಾರೆ. ಈ ಭಾರತಕ್ಕೆ ವಾಪಾಸ್ಸಾದ ಆಟಗಾರರಿಗೆ ಕೋಚ್​ ಗಂಭೀರ್​ ಖಡಕ್​ ವಾರ್ನಿಂಗ್ ಕೊಟ್ಟಿದ್ದಾರೆ. ಪೆಲ್ಲೆಕೆಲೆಯಲ್ಲಿ ಪಂದ್ಯ ಮುಕ್ತಾಯದ ಬಳಿಕ ಗಂಭೀರ್​ ಡ್ರೆಸ್ಸಿಂಗ್​ರೂಮ್​ನಲ್ಲಿ ಮಾತನಾಡಿದ್ದು, ಖಡಕ್​ ಸಂದೇಶ ರವಾನಿಸಿದ್ದಾರೆ.

ಸ್ಕಿಲ್​​, ಫಿಟ್​ನೆಸ್​ ಮೇಲೆ ವರ್ಕೌಟ್​​ ಮಾಡಿ
ಸುದೀರ್ಘ ಬ್ರೇಕ್​ಗೂ ಮುನ್ನ ‘ಗಂಭೀರ’​ ಮಾತು
ಶ್ರೀಲಂಕಾ ಪ್ರವಾಸ ಅಂತ್ಯದ ಬಳಿಕ ಟೀಮ್​ ಇಂಡಿಯಾ ಮತ್ತೆ ಪಂದ್ಯವನ್ನಾಡೋದು ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ. ಸೆಪ್ಟೆಂಬರ್​ನಲ್ಲಿ ಬಾಂಗ್ಲಾದೇಶ ತಂಡ ಭಾರತಕ್ಕೆ ಬರಲಿದ್ದು, 2 ಟೆಸ್ಟ್​ ಹಾಗೂ 3 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ. ಅಲ್ಲಿಯವರೆಗೆ ಸುಮಾರು 1 ತಿಂಗಳಿಗೂ ಅಧಿಕ ಕಾಲದ ವಿಶ್ರಾಂತಿ ಆಟಗಾರರಿಗೆ ಸಿಗಲಿದೆ. ಈ ವಿಶ್ರಾಂತಿಯ ವೇಳೆ ಮೈ ಮರೆಯದೇ ಸ್ಕಿಲ್ಸ್​ ಹಾಗೂ ಫಿಟ್​ನೆಸ್​ ಮೇಲೆ ವರ್ಕೌಟ್​ ಮಾಡಿ ಎಂದು ಗಂಭೀರ್​ ಹೇಳಿದ್ದಾರೆ.

ಕೆಲ ಆಟಗಾರರು ಏಕದಿನ ಸರಣಿಯಲ್ಲಿ ಇಲ್ಲ. ಅವರಿಗೆ ಸುದೀರ್ಘ ಬ್ರೇಕ್ ಸಿಗಲಿದೆ. ನೀವು ಕಮ್​​ಬ್ಯಾಕ್​ ಮಾಡೋದು ಬಾಂಗ್ಲಾದೇಶ ಎದುರಿನ ಸರಣಿಯಲ್ಲಿ. ನೀವು ವಿಶ್ರಾಂತಿ ತೆಗೆದುಕೊಳ್ಳಿ. ಅದಕ್ಕೆ ನೀವು ಅರ್ಹರು. ಆದ್ರೆ, ನಿಮ್ಮ ಸ್ಕಿಲ್ಸ್​ ಹಾಗೂ ಫಿಟ್ನೆಸ್​​ ಮೇಲೆ ವರ್ಕೌಟ್ ಮಾಡಿ. ಆ ಸರಣಿಗೂ ಮುನ್ನ ಫಿಟ್ನೆಸ್​ ಮೇಲೆ ಫೋಕಸ್ ಮಾಡ್ತೇವೆ ಅಂದ್ರೆ ಆಗಲ್ಲ. ಆ ಟೈಮ್​ನಲ್ಲಿ ಸಂಪೂರ್ಣ ಫಿಟ್ನೆಸ್ ಇರಬೇಕು.

ಇದನ್ನೂ ಓದಿ: ಕೊಲಂಬೋದಲ್ಲಿ ಕೊಹ್ಲಿಗೆ ಮತ್ತೆ ಅವಮಾನ.. ಅಭ್ಯಾಸದ ವೇಳೆ ಕೆಣಕಿದ ಫ್ಯಾನ್; ವಿರಾಟ ದರ್ಶನ ಫಿಕ್ಸ್‌! 

2025ರಲ್ಲಿ ಚಾಂಪಿಯನ್ಸ್​ ಟ್ರೋಫಿಯಂತಾ ಮಹತ್ವದ ಐಸಿಸಿ ಟೂರ್ನಿಗಳಿವೆ. ಹೀಗಾಗಿ ಆಟಗಾರರ ಇಂಜುರಿ ಮ್ಯಾನೇಜ್​ ಮ್ಯಾನೇಜ್​ಮೆಂಟ್​ಗೆ ಬಿಗ್​ ಟಾಸ್ಕ್​ ಆಗಲಿದೆ. ಗೌತಮ್​ ಗಂಭೀರ್​​ ಕೋಚ್​ ಹುದ್ದೆ ಅಲಂಕರಿಸೋದಕ್ಕೆ ಮುನ್ನವೂ ಕೂಡ ಫಿಟ್​ನೆಸ್​ ವಿಚಾರದಲ್ಲಿ ಹಲವು ಕಡೆಗಳಲ್ಲಿ ಮಾತನಾಡಿದ್ದರು. ಮೂರೂ ಫಾರ್ಮೆಟ್​​ನ ಫ್ಲೇಯರ್​ ಫಿಟ್​ ಇರಬೇಕು. ಆತನಿಗೆ ಸರಣಿಯಿಂದ ಸರಣಿಗೆ ವಿಶ್ರಾಂತಿ ನೀಡಬಾರದು ಅಂತಾ ವಾದಿಸಿದ್ದರು. ಇದೀಗ ಕೋಚ್​ ಆದ ಬಳಿಕ ಅದೇ ಮಾತನ್ನ ಪಾಲಿಸ್ತಿರೋ ಗೌತಿ, ಫಿಟ್​ನೆಸ್​ ಮೇಲೆ ಹೆಚ್ಚಿನ ಗಮನ ಹರಿಸಿ ಅಂತಾ ವಾರ್ನಿಂಗ್​ ಕೊಟ್ಟಿದ್ದಾರೆ.

ಹಾರ್ದಿಕ್​ಗೆ ಪರೋಕ್ಷ ಎಚ್ಚರಿಕೆ​ ಕೊಟ್ರಾ ಗಂಭೀರ್​.?
ಕೆಲ ವರ್ಷಗಳಿಂದ ಹಾರ್ದಿಕ್​ ಪಾಂಡ್ಯ ಪದೇ ಪದೇ ಇಂಜುರಿ ಸಮಸ್ಯೆಯನ್ನ ಎದುರಿಸಿದ್ದಾರೆ. ಇಂಜುರಿ ಮ್ಯಾನೇಜ್​ಮೆಂಟ್​ ಕಾರಣಕ್ಕೆ ಹೆಚ್ಚು ವಿಶ್ರಾಂತಿಯನ್ನೂ ಪಡೆದಿದ್ದಾರೆ. ಇದೇ ಕಾರಣಕ್ಕೆ ಟಿ20 ಮಾದರಿಯ ನಾಯಕತ್ವ ಕೂಡ ಹಾರ್ದಿಕ್​ ಕೈ ತಪ್ಪಿತು. ಸದ್ಯ​ ಹಾರ್ದಿಕ್​ ಪಾಂಡ್ಯ, ಏಕದಿನ ಸರಣಿ ತಂಡದ ಭಾಗವಾಗಿಲ್ಲ. ಟಿ20 ಪಂದ್ಯವನ್ನ ಮಾತ್ರ ಆಡಿ ಭಾರತಕ್ಕೆ ವಾಪಾಸ್ಸಾಗಿದ್ದಾರೆ. ಅದಕ್ಕೂ ಮುನ್ನ ಹಾರ್ದಿಕ್​ ಸಮ್ಮುಖದಲ್ಲೇ ಗಂಭೀರ್​ ಫಿಟ್​ನೆಸ್​ ಪಾಠ ಮಾಡಿದ್ದಾರೆ. ಗಂಭೀರ್ ಹೇಳಿದ ಗಂಭೀರ ಮಾತುಗಳು​ ಹಾರ್ದಿಕ್​ಗೆ ನೀಡಿದ ಎಚ್ಚರಿಕೆ ಎಂದೇ ವ್ಯಾಖ್ಯಾನಿಸಲಾಗ್ತಿದೆ.

ಇದನ್ನೂ ಓದಿ: ಭಾರತದ ಮಾಜಿ ಕ್ರಿಕೆಟಿಗ ಅಂಶುಮನ್ ಗಾಯಕ್ವಾಡ್ ನಿಧನ; ಪಾಕ್‌ ವಿರುದ್ಧ ದಾಖಲೆ ಬರೆದ ಸರದಾರ ಇನ್ನಿಲ್ಲ 

ಲಂಕಾ ಟಿ20 ಸರಣಿ ಬಳಿಕ ವಿಶ್ರಾಂತಿಗೆ ಜಾರ್ತಿರೋ ಆಟಗಾರರು ಮಾತ್ರವಲ್ಲ. ತಂಡದ ಎಲ್ಲಾ ಆಟಗಾರರಿಗೂ ಇದು ಗಂಭೀರ್​ ನೀಡಿದ ಸಂದೇಶವಾಗಿದೆ. ಹೆಡ್​ಕೋಚ್​​ ಮಾತುಗಳು ಫಿಟ್​​ ಇದ್ದವರಿಗೆ ಮಾತ್ರವೇ ಟೀಮ್​ ಇಂಡಿಯಾ ಸ್ಥಾನ ಅನ್ನೋ ಪರೋಕ್ಷ ಎಚ್ಚರಿಕೆಯನ್ನೂ ನೀಡ್ತಿದೆ. ಹೀಗಾಗಿ ಸುದೀರ್ಘ ವಿಶ್ರಾಂತಿಯ ಮೊರೆ ಹೋಗ್ತಿರೋ ಆಟಗಾರರು ಎಚ್ಚರಿಕೆಯಿಂದ ಇರಬೇಕಿದೆ. ಫಾರ್ಮ್​, ಫಿಟ್​ನೆಸ್​ ವಿಚಾರದಲ್ಲಿ ಸ್ವಲ್ಪ ಯಾಮಾರಿದ್ರೂ, ಟೀಮ್​ ಇಂಡಿಯಾದಿಂದಲೇ ದೂರವಾಗಬೇಕಾಗುತ್ತದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಹಾರ್ದಿಕ್​ ಪಾಂಡ್ಯಗೆ ಬಿಗ್ ಶಾಕ್‌.. ಡ್ರೆಸ್ಸಿಂಗ್​ ರೂಮ್‌ನಲ್ಲೇ ಕೋಚ್‌ ಗಂಭೀರ್​​ ವಾರ್ನಿಂಗ್‌; ಹೇಳಿದ್ದೇನು?

https://newsfirstlive.com/wp-content/uploads/2024/08/Hardhik-Pandya-Gambhir.jpg

Load More