/newsfirstlive-kannada/media/post_attachments/wp-content/uploads/2025/07/GAMBHIR-FIR-ON-Lee-Fortis.jpg)
ಭಾರತ ಮತ್ತು ಇಂಗ್ಲೆಂಡ್ ನಡುವಿನ 5ನೇ ಮತ್ತು ಅಂತಿಮ ಟೆಸ್ಟ್ ಪಂದ್ಯಕ್ಕೂ ಮುಂಚೆ ಕೋಚ್ಗಳು ಕಿತ್ತಾಡಿಕೊಂಡಿದ್ದಾರೆ. ಲಂಡನ್‌ನ ಓವಲ್ ಕ್ರೀಡಾಂಗಣದಲ್ಲಿ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಓವಲ್ ಪಿಚ್ ಕ್ಯುರೇಟರ್ ಲೀ ಫೋರ್ಟಿಸ್ ನಡುವೆ ತೀವ್ರ ವಾಗ್ವಾದ ನಡೆದಿದೆ.
ಭಾರತ ತಂಡವು ಓವಲ್ ಕ್ರೀಡಾಂಗಣದಲ್ಲಿ ತಮ್ಮ ಮೊದಲ ಅಭ್ಯಾಸ ಸೆಷನ್‌ಗೆ ತೆರಳಿತು. ಈ ಸಂದರ್ಭದಲ್ಲಿ, ಗೌತಮ್ ಗಂಭೀರ್ ಮತ್ತು ಬ್ಯಾಟಿಂಗ್ ಕೋಚ್ ಸೀತಾಂಶು ಕೊಟಕ್ ಪಿಚ್‌ನ ಸ್ಥಿತಿಯನ್ನ ಪರಿಶೀಲಿಸಲು ಕೇಂದ್ರ ಸ್ಕ್ವೇರ್‌ಗೆ ತೆರಳಿದ್ದರು. ಓವಲ್‌ನ ಮುಖ್ಯ ಕ್ಯುರೇಟರ್ ಲೀ ಫೋರ್ಟಿಸ್, ಭಾರತ ತಂಡದ ಆಟಗಾರರು ಮತ್ತು ಸಿಬ್ಬಂದಿ ಸ್ಕ್ವೇರ್‌ನಲ್ಲಿ ತಿರುಗಾಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಈ ಗ್ರಾಮಕ್ಕೆ ಸೇತುವೆಯೇ ಇಲ್ಲ.. ಗರ್ಭಿಣಿಗೆ ಹೆರಿಗೆ ನೋವು, ಎತ್ತಿನ ಗಾಡಿಯಲ್ಲಿ ಸಾಗಿಸಿದ ಜನ
ಅವರು ಭಾರತ ತಂಡವನ್ನ 2.5 ಮೀಟರ್ ದೂರದಲ್ಲಿ ಇರಬೇಕೆಂದು ಸೂಚಿಸಿದ್ದಾರೆ. ಸಿಬ್ಬಂದಿ ಐಸ್ ಬಾಕ್ಸ್‌ಅನ್ನ ಮೈದಾನಕ್ಕೆ ತೆಗೆದುಕೊಂಡು ಹೋಗದಂತೆ ತಡೆದ್ದಾರೆ. ಇದರಿಂದ ಕೋಪಗೊಂಡ ಗಂಭೀರ್, ಫೋರ್ಟಿಸ್‌ಗೆ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: 8.8 ತೀವ್ರತೆಯಲ್ಲಿ ಭೂಕಂಪ.. ಭಯಾನಕ ಸುನಾನಿ ಎಚ್ಚರಿಕೆ.. ರಷ್ಯಾ ಕರಾವಳಿ ಅಕ್ಷರಶಃ ಪ್ರಕ್ಷುಬದ್ಧ..!
India head coach Gautam Gambhir was involved in a heated altercation with Surrey groundsman Lee Fortis at The Oval pic.twitter.com/6qBYaBSdkD
— ESPNcricinfo (@ESPNcricinfo) July 29, 2025
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ