/newsfirstlive-kannada/media/post_attachments/wp-content/uploads/2025/01/JOBS_COALS.jpg)
ಕೋಲ್ ಇಂಡಿಯಾ ಲಿಮಿಟೆಡ್ ಹೊಸ ಹುದ್ದೆಗಳನ್ನು ಭರ್ತಿ ಮಾಡುವುದಕ್ಕಾಗಿ ಅರ್ಜಿಗಳನ್ನು ಆಹ್ವಾನ ಮಾಡಿದೆ. ಸಂಸ್ಥೆಯಲ್ಲಿ ಖಾಲಿ ಇರುವಂತ ಮ್ಯಾನೇಜ್‌ಮೆಂಟ್ ಟ್ರೈನಿ (ಎಂಟಿ) ಹಾಗೂ ಬ್ಯಾಕ್‌ಲಾಗ್ ಕೆಲಸಗಳನ್ನು ನೇಮಕ ಮಾಡಲಾಗುತ್ತಿದೆ. ಇದಕ್ಕಾಗಿ ಆಕಾಂಕ್ಷಿಗಳಿಂದ ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ.
400ಕ್ಕೂ ಅಧಿಕ ಹುದ್ದೆಗಳನ್ನು ತುಂಬಲು ಕೋಲ್ ಇಂಡಿಯಾ ಲಿಮಿಟೆಡ್ ಮುಂದಾಗಿದೆ. ಈ ಕೆಲಸಗಳಿಗೆ ಆಸಕ್ತಿ ಇರುವ ಅಭ್ಯರ್ಥಿಗಳು ಇಲಾಖೆಯ ವೆಬ್ಸೈಟ್ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅಪ್ಲೇ ಮಾಡಬಹುದು. ಬೇರೆ ಮೂಲದಿಂದ ಬರುವ ಅರ್ಜಿಗಳನ್ನು ಸ್ವೀಕಾರ ಮಾಡುವುದಿಲ್ಲ ಎಂದು ಸಂಸ್ಥೆ ಮಾಹಿತಿ ನೀಡಿದೆ. ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯಲ್ಲಿ ಲಭ್ಯವಿರುವ ಅರ್ಹತಾ ಮಾನದಂಡಗಳು, ವಯಸ್ಸಿನ ಮಿತಿ, ವೇತನ ಶ್ರೇಣಿ ಮತ್ತು ಇತರ ವಿವರಗಳನ್ನು ಪರಿಶೀಲಿಸಬಹುದು.
ಉದ್ಯೋಗದ ಹೆಸರು
ಮ್ಯಾನೇಜ್‌ಮೆಂಟ್ ಟ್ರೈನಿ (MT)
(ಫೈನಾನ್ಸ್, ಕಮ್ಯುನಿಟಿ ಡೆವೆಲಪ್ಮೆಂಟ್, ಎನ್ವಿರ್ಮೆಂಟ್, ಮಾರ್ಕೆಟಿಂಗ್ & ಸೇಲ್, ಮ್ಯಾನೇಜ್‌ಮೆಂಟ್, ಹೆಚ್ಆರ್ ಹುದ್ದೆಗಳು)
ವಿದ್ಯಾರ್ಹತೆ
ಪದವಿ, ಪದವಿಯಲ್ಲಿ ಎಂಎಸ್ಡಬ್ಲು, ಸ್ನಾತಕೋತ್ತರ, ಎನ್ವಿರಾನ್ಮೆಂಟಲ್ ಇಂಜಿನಿಯರಿಂಗ್, ಸಿಎ, ಐಸಿಡಬ್ಲುಎ, ಕಾನೂನು ಪದವಿ, ಎಂಬಿಎ, ಬಿಇ, ಬಿಟೆಕ್, ಬಿಎಸ್ಸಿ.
ಇದನ್ನೂ ಓದಿ: ಕೇಂದ್ರ ಸರ್ಕಾರದಡಿ 642 ಉದ್ಯೋಗಾವಕಾಶಗಳು.. SSLC, ITI ಮಾಡಿದವರಿಗೆ ಇಲ್ಲಿವೆ ಕೆಲಸಗಳು
ಒಟ್ಟು ಹುದ್ದೆಗಳು- 434
358 ಹೊಸ ಹುದ್ದೆಗಳು
76 ಬ್ಯಾಕ್‌ಲಾಗ್ ಹುದ್ದೆಗಳು
ಅರ್ಜಿ ಶುಲ್ಕ
ಜನರಲ್, ಒಬಿಸಿ, ಇಡಬ್ಲುಎಸ್- 1000 ರೂಪಾಯಿಗಳು
ಎಸ್ಸಿ, ಎಸ್ಟಿ, ವಿಷೇಶ ಚೇತನರು- ವಿನಾಯತಿ ಇದೆ
ಆಯ್ಕೆ ಪ್ರಕ್ರಿಯೆ
ಕಂಪ್ಯೂಟರ್ ಬೇಸಡ್ ಟೆಸ್ಟ್ (ಸಿಬಿಟಿ)
ಸಂದರ್ಶನ
ವಯೋಮಿತಿ
18 ರಿಂದ 30 ವರ್ಷಗಳು
ಮುಖ್ಯವಾದ ದಿನಾಂಕಗಳು
ಅಧಿಸೂಚನೆ ರಿಲೀಸ್ ಆಗಿರುವ ದಿನಾಂಕ- 14 / 01 / 2025
ಅರ್ಜಿ ಸಲ್ಲಿಕೆಯ ಆರಂಭದ ದಿನಾಂಕ- 15 / 01 / 2025
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ- 14 / 02 / 2025
ಪೂರ್ಣ ಮಾಹಿತಿಗಾಗಿ- https://static-cdn.publive.online/newsfirstlive-kannada/media/pdf_files//per/g03/pub/726/EForms/image/ImageDocUpload/121118481387502228841686.pdf
ಅರ್ಜಿ ಸಲ್ಲಿಕೆಗೆ ಲಿಂಕ್- https://cdn.digialm.com/EForms/configuredHtml/1258/92240/Index.html
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ