ಹಸು, ಎಮ್ಮೆ ಹಾಲಿಗಿಂತ ಜಿರಳೆ ಹಾಲು ಬೆಸ್ಟ್​.. ಆರೋಗ್ಯಕ್ಕೆ ಹೇಗೆಲ್ಲಾ ಉಪಯೋಗ ಆಗುತ್ತೆ ಇದು?

author-image
Bheemappa
Updated On
ಹಸು, ಎಮ್ಮೆ ಹಾಲಿಗಿಂತ ಜಿರಳೆ ಹಾಲು ಬೆಸ್ಟ್​.. ಆರೋಗ್ಯಕ್ಕೆ ಹೇಗೆಲ್ಲಾ ಉಪಯೋಗ ಆಗುತ್ತೆ ಇದು?
Advertisment
  • ಹಸುವಿನ ಹಾಲಿಗಿಂತ ಜಿರಳೆ ಹಾಲಿನಲ್ಲಿ ಎಷ್ಟು ಅಂಶಗಳು ಇವೆ?
  • ನಿಮಗೆ ಇಂತಹ ಸಮಸ್ಯೆಗಳಿದ್ರೆ ಜಿರಳೆ ಹಾಲು ಸೂಪರ್ ಫುಡ್
  • ಜಿರಳೆ ಚಿಕ್ಕದು ಇರುವುದರಿಂದ ಹಾಲು ಹೇಗೆ ಉತ್ಪಾದನೆ ಸಾಧ್ಯ?

ಹಾಲು ಕುಡಿದು ಮಲಗು ಎಂದು ಮಕ್ಕಳಿಗೆ ಅಮ್ಮ ಹೇಳುವುದು ಸಾಮಾನ್ಯ. ವೈದ್ಯರು ಸಹ ಹಾಲು ಕುಡಿದರೆ ದೇಹಕ್ಕೆ, ಆರೋಗ್ಯಕ್ಕೆ ಉತ್ತಮವೆಂದು ಸಲಹೆ ನೀಡುತ್ತಾರೆ. ಈ ರೀತಿ ಹೇಳಿದಾಗ ಹಸು ಹಾಲು ಅಥವಾ ಎಮ್ಮೆ ಹಾಲು ಬಳಕೆ ಮಾಡೋದು ಸಾಮಾನ್ಯ. ಆದರೆ ಈ ಹಸು, ಎಮ್ಮೆ ಹಾಲಿಗಿಂತಲೂ ಇನ್ನೊಂದು ಹಾಲು ಸಾಕಷ್ಟು ನ್ಯೂಟ್ರಿಷಿಯನ್ ತುಂಬಿದೆಯಂತೆ. ಆಶ್ಚರ್ಯ ಪಡಬೇಡಿ ಈ ಹಾಲು ತುಂಬಾ ಸ್ಪೆಷಲ್.

ಅಯ್ಯೋ ಜಿರಳೆ ಅಂತಾ ದೂರ ಹೋಗಬೇಡಿ. ಹಸುಗೊಂದು ಕಾಲ, ಎಮ್ಮೆಗೊಂದು ಕಾಲ. ಈಗ ಜಿರಳೆಗೊಂದು ಕಾಲ ಬಂದಿದೆ. ಯಾಕಂದ್ರೆ ಆಕಳು, ಎಮ್ಮೆ ಹಾಲಿಗಿಂತ ಜಿರಳೆ ಹಾಲು ಸೂಪರ್ ನ್ಯೂಟ್ರಿಷಿಯನ್ ಹೊಂದಿರುತ್ತದೆ ಎಂದು ಸಂಶೋಧನೆಯೊಂದು ದೃಢಪಡಿಸಿದೆ.

publive-image

ಜರ್ನಲ್ ಇಂಟರ್ನ್ಯಾಷನಲ್ ಯೂನಿಯನ್ ಆಫ್ ಕ್ರಿಸ್ಟಲೋಗ್ರಫಿ ಪ್ರಕಟಿಸಿದ ಅಧ್ಯಯನದ ಪ್ರಕಾರ ಜಿರಳೆ ಹಾಲಿನಲ್ಲಿ ಪ್ರೋಟಿನ್ ಹೇರಳವಾಗಿರುತ್ತಂತೆ. ಇದು ಹಸು ಮತ್ತೆ ಎಮ್ಮೆ ಹಾಲಿಗಿಂತ 3 ಪಟ್ಟು ಪೋಷಕಾಂಶ ಹೊಂದಿರುತ್ತದೆ. ಅಷ್ಟೇ ಅಲ್ಲ ಅಮೈನೋ ಆಮ್ಲವನ್ನು ಇದು ಹೊಂದಿರುತ್ತೆ ಅಂತ ವಿಜ್ಞಾನಿಗಳು ಹೇಳಿದ್ದಾರೆ. ಆರೋಗ್ಯಕರ ಕೊಬ್ಬು ಕೂಡ ಇದರಲ್ಲಿ ಸಾಕಷ್ಟು ಪ್ರಮಾಣದಲ್ಲಿರುತ್ತೆ ಅನ್ನೋದು ವಿಜ್ಞಾನಿಗಳ ವಾದ. ಜಿರಳೆ ಹಾಲು ಕ್ಯಾಲೋರಿ ಮತ್ತೆ ಪೋಷಕಾಂಶದ ಪ್ಯಾಕೇಜ್ ಅಂತೆ.. ಅವರ ಪ್ರಕಾರ ಇದೊಂದ್ ರೀತಿ ಪ್ರೋಟಿನ್ ನಿಧಿ

ಜಿರಳೆ ಹಾಲು ಜಿಂಗಾಲಾಲ!

  • ಜಿರಳೆಯ 100 ಎಂಎಲ್​ ಹಾಲಿನಲ್ಲಿ 232 ಕ್ಯಾಲೋರಿ ಸಿಗುತ್ತೆ
  • ಹಸುವಿನ 100 ಎಂಎಲ್ ಹಾಲಿನಲ್ಲಿರೋದು 66 ಕ್ಯಾಲೋರಿ
  • ಜಿರಳೆಯ ಹಾಲಿನಲ್ಲಿ ಶೇಕಡಾ 45ರಷ್ಟು ಪ್ರೊಟೀನ್ ಇರುತ್ತದೆ
  • ಶೇ.16 -22ರಷ್ಟು ಕೊಬ್ಬು, ಶೇ.25ರಷ್ಟು ಕಾರ್ಬೋಹೈಡ್ರೇಟ್ ಇದೆ
  • ಶೇಕಡಾ 5ರಷ್ಟು ಅಮೈನೋ ಆಮ್ಲ , ಒಲೀಕ್ ಆಮ್ಲ, ಖನಿಜವಿದೆ
  • ಹಸು. ಎಮ್ಮೆ ಹಾಲಿನಲ್ಲಿರುವ ಲ್ಯಾಕ್ಟೋಸ್ ಹಲವರಿಗೆ ಜೀರ್ಣವಾಗಲ್ಲ
  • ಅಂಥವರಿಗೆ ಜಿರಳೆ ಹಾಲು ಬೆಸ್ಟ್ ಅನ್ನೋದು ಸೈಂಟಿಸ್ಟ್​ಗಳ ವಾದ
  • ಜಿರಳೆ ಹಾಲು ಸೇವಿಸಿದ್ರೆ ಜೀರ್ಣಕ್ರಿಯೆ ಸಮಸ್ಯೆಯೂ ಕಾಡೋದಿಲ್ಲ
  • ಹೊಟ್ಟೆ ಉಬ್ಬರ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆ ಕೂಡ ಕಾಡೋದಿಲ್ವಂತೆ

ಇದನ್ನೂ ಓದಿ:ವಿಶ್ವದ ಬಲಿಷ್ಠ ರಾಷ್ಟ್ರದ ನಾಯಕರ ಜೊತೆ ಮಹತ್ವದ ಚರ್ಚೆ.. ಮೋದಿಗೆ ಸ್ಪೆಷಲ್ ಗಿಫ್ಟ್​ ಕೊಟ್ಟ ಎಲಾನ್‌ ಮಸ್ಕ್‌

publive-image

ಕ್ಯಾಲೋರಿ ಹೆಚ್ಚಿರೋ ಕಾರಣ ತೂಕ ಹೆಚ್ಚಳ, ಆರೋಗ್ಯಕ್ಕೆ ಉತ್ತಮ

ಜಿರಳೆನೇ ಅಷ್ಟು ಚಿಕ್ಕದು ಇರುತ್ತದೆ. ಆ ಜಿರಳೆಯಲ್ಲಿ ಎಷ್ಟು ಹಾಲು ಸಿಗಬಹದಪ್ಪ ಅನ್ನೋ ಡೌಟ್ ಸಹಜವೇ. ಜಿರಳೆ ಉತ್ಪಾದಿಸೋದೇ ಅತಿ ಕಡಿಮೆ ಪ್ರಮಾಣದ ಹಾಲು. ನಿಮಗೆ ಹಸು, ಎಮ್ಮೆಯಂತೆ ಜಿರಳೆ ಹಾಲು ಸಿಗೋದಿಲ್ಲ. ನೀವು ಜಿರಳೆ ಹಾಲು ಬೇಕು ಅಂದ್ರೆ ಅದನ್ನು ಸಾಯಿಸ್ಬೇಕು. ಜಿರಳೆ ಕರುಳಿನಲ್ಲಿ ಹಾಲಿನಂತ ವಸ್ತು ಉತ್ಪಾದನೆ ಆಗೋದ್ರಿಂದ ನೀವು ಅದನ್ನು ಕೊಂದು ಹಾಲು ಪಡೀಬೇಕು. 100 ಎಂಎಲ್ ಹಾಲು ಬೇಕೆಂದ್ರೆ ಸರಿಸುಮಾರು ಸಾವಿರ ಜಿರಳೆ ಕೊಲ್ಲಬೇಕು. ಚೀನಾ, ಮಲೇಷ್ಯಾದಂತ ದೇಶದಲ್ಲಿ ಕಾಕ್ರೋಚ್ ಫಾರ್ಮ್​ಗಳಿದ್ದು, ಅಲ್ಲಿ ಈ ರೀತಿ ಮಾಡುತ್ತಾರೆ ಎನ್ನಲಾಗುತ್ತದೆ.

ಜಿರಳೆ ಹಾಲು ಕೂಡ ಪ್ರೋಟಿನ್ ಅನ್ನೋ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿರೋದು ಸುಳ್ಳಲ್ಲ. ಆದ್ರೆ, ಜಿರಳೆ ಅಂದ್ರೇನೇ ಭಯ ಪಡೋರಿರೋ ನಮ್ಮ ಸುತ್ತಮುತ್ತ, ಹಾಲು ತೆಗೆಯೋರು ಯಾರು ಅಲ್ವಾ?.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment