/newsfirstlive-kannada/media/post_attachments/wp-content/uploads/2025/03/Cockroach_milk.jpg)
ಹಸಿರು ತರಕಾರಿ, ಸೊಪ್ಪು ಹಾಗೂ ಧಾನ್ಯಗಳಲ್ಲಿ ಹೆಚ್ಚಿನ ಪೌಷ್ಟಿಕಾಂಶದಿಂದ ಕೂಡಿವೆ ಎಂದು ವಿಜ್ಞಾನ ಹೇಳುತ್ತದೆ. ಇವುಗಳಲ್ಲಿ ಹೆಚ್ಚಿನ ಕ್ಯಾಲ್ಸಿಯಂ ಮತ್ತು ಇತರ ಖನಿಜಗಳು ಸೇರಿದಂತೆ ಪೋಷಕಾಂಶಗಳಿರುತ್ತವೆ. ಇಂತಹ ಧಾನ್ಯಗಳನ್ನ ನಿತ್ಯ ತಿನ್ನುವುದರಿಂದ ಆರೋಗ್ಯ ವೃದ್ಧಿಸಿಕೊಳ್ಳಬಹುದು. ಆದರೆ ಇತ್ತೀಚಿನ ಒಂದು ಸಂಶೋಧನೆಯಲ್ಲಿ ಉತ್ತಮಮಟ್ಟದ ಆಹಾರದಲ್ಲೇ ಜಿರಳೆ ಹಾಲು ಸೂಪರ್ ಫುಡ್ ಎಂದು ದೃಢಪಟ್ಟಿದೆ.
ಸೂಪರ್ ಫುಡ್​ ಸಾಲಿಗೆ ಜಿರಳೆ ಹಾಲು ಕೂಡ ಸೇರಿದೆ. ಇದು ಕೇಳುವುದಕ್ಕೂ ವಿಚಿತ್ರ, ಅಸಹ್ಯ ಎನಿಸಿದರೂ ಸಂಶೋಧನೆಯಲ್ಲಿ ಹಸು, ಎಮ್ಮೆಗಿಂತ ಅತ್ಯಂತ ಪೌಷ್ಟಿಕಾಂಶ ಹೊಂದಿದ ಹಾಲು ಎಂದರೆ ಅದು ಜಿರಳೆ ಹಾಲು ಎನ್ನುವುದು ಸಾಬೀತಾಗಿದೆ. ಈ ಹಾಲು ಎಲ್ಲ ಜಿರಳೆಗಳಲ್ಲಿ ಇರುವುದಿಲ್ಲ. ಅತ್ಯಧಿಕ ಪೌಷ್ಟಿಕಾಂಶ ಇರುವ ಹಾಲು ಎಂದರೆ ಅದು ಪೆಸಿಫಿಕ್ ಜೀರುಂಡೆ ಜಿರಳೆ (Diploptera punctata) ಎನ್ನುವುದು ಸಂಶೋಧನೆಯಿಂದ ತಿಳಿದು ಬಂದಿದೆ.
ಈ ಜಿರಳೆ ಪ್ರಭೇದವು ತನ್ನ ಮರಿಗಳನ್ನ ಪೋಷಿಸಲು ಪೋಷಕಾಂಶಗಳಿಂದ ಕೂಡಿದ ಹಾಲಿನಂತಹದ್ದನ್ನು ಉತ್ಪಾದಿಸುತ್ತದೆ. ಈ ದ್ರವದಲ್ಲಿ ಪ್ರೋಟೀನ್ಸ್​, ಕೊಬ್ಬು ಹಾಗೂ ಸಕ್ಕರೆ ಇರುತ್ತದೆ. ಆದ್ದರಿಂದ ಇದುವರೆಗೆ ಗುರುತಿಸಿದ ಅತ್ಯಂತ ಪೌಷ್ಟಿಕ ನೈಸರ್ಗಿಕ ಪದಾರ್ಥಗಳಲ್ಲಿ ಜಿರಳೆ ಹಾಲು ಒಂದಾಗಿದೆ. ಸದ್ಯ ಇದರ ಪೌಷ್ಟಿಕಾಂಶ ತೆಗೆದುಕೊಂಡರೆ ಭವಿಷ್ಯದಲ್ಲಿ ಅತ್ಯುತ್ತಮ ಆಹಾರಗಳಲ್ಲಿ ಇದು ಪ್ರಮುಖವಾಗಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ.
/newsfirstlive-kannada/media/post_attachments/wp-content/uploads/2025/02/COW_Buffalo_Milk.jpg)
ಸಂಶೋಧನೆ ಏನ್ ಹೇಳುತ್ತದೆ?
ಜರ್ನಲ್ ಆಫ್ ದಿ ಇಂಟರ್ನ್ಯಾಷನಲ್ ಯೂನಿಯನ್ ಆಫ್ ಕ್ರಿಸ್ಟಲೋಗ್ರಫಿಯ 2016ರಲ್ಲಿ ಪ್ರಕಟವಾದ ಹಾಲಿನ ಅಧ್ಯಯನದಿಂದ ಇದು ಬೆಳಕಿಗೆ ಬಂದಿದೆ. ಜಿರಳೆ ಹಾಲಿನಲ್ಲಿ ಎಮ್ಮೆಯ ಹಾಲಿಗಿಂತ ಮೂರು ಪಟ್ಟು ಕ್ಯಾಲೋರಿಗಳಿವೆ. ಜೊತೆಗೆ ಪ್ರೋಟೀನ್ಸ್​, ಅಮೈನೋ ಆಮ್ಲ ಹಾಗೂ ಉತ್ತಮ ಸಕ್ಕರೆಗಳಿಂದ ಕೂಡಿದ್ದು, ಇವೆಲ್ಲವೂ ಜೀವಕೋಶಗಳ ದುರಸ್ತಿಗೆ, ಬೆಳವಣಿಗೆಗೆ ಅತ್ಯಗತ್ಯವಾಗಿದೆ ಎಂದು ಸಂಶೋಧನೆ ಗೊತ್ತಾಗಿದೆ.
ಸಂಶೋಧನೆಯಲ್ಲಿ ಮಾತ್ರ ಪೌಷ್ಟಿಕ ಆಹಾರ ಜಿರಳೆ ಹಾಲು ಎಂದು ಹೇಳಲಾಗಿದೆ. ಆದರೆ ಎಲ್ಲಿಯೂ ಜಿರಳೆ ಹಾಲನ್ನು ಇದುವರೆಗೆ ಬಳಕೆ ಮಾಡಿಲ್ಲ. ಏಕೆಂದರೆ ಜಿರಳೆಗಳಿಂದ ಹಾಲು ಹೊರತೆಗೆಯುವುದು ಕೊಂಚ ಕಷ್ಟ ಹಾಗೂ ಶ್ರಮವಹಿಸಬೇಕಾಗುತ್ತದೆ. ಎಲ್ಲಾ ಸೂಪರ್ ಫುಡ್‌ಗಳಂತೆ, ಜಿರಳೆ ಹಾಲು ಕೂಡ ಒಂದು. ಜಿರಳೆ ಹಾಲನ್ನು ಹೇಗೆ ಉತ್ಪಾದಿಸಬೇಕು, ಜನರಿಗೆ ಇದು ಹೇಗೆಲ್ಲಾ ಉಪಯೋಗ ಆಗಲಿದೆ ಇವೆಲ್ಲದಕ್ಕೆ ಇನ್ನು ಹೆಚ್ಚಿನ ಸಂಶೋಧನೆ ಅಗತ್ಯವಿದೆ. ಆದರೆ ಭವಿಷ್ಯದಲ್ಲಿ ಇದಕ್ಕೆ ಬೇಡಿಕೆ ಹೆಚ್ಚಾಗಬಹುದು ಎಂದು ಹೇಳಲಾಗಿದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us