/newsfirstlive-kannada/media/post_attachments/wp-content/uploads/2025/03/COFP-Walkathon.jpg)
ಹಣಕಾಸು ಯೋಜಕರ ಮಂಡಳಿ (COFP) ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ವಾಕಥಾನ್ ಮತ್ತು ಆರ್ಥಿಕ ಸಾಕ್ಷರತೆಯನ್ನು ಮೂಡಿಸುವ ಕೆಲಸ ಮಾಡಿದೆ. ದಿ ಕೌನ್ಸಿಲ್ ಆಫ್ ಫೈನಾನ್ಸಿಯಲ್ ಪ್ಲಾನರ್ಸ್ ವಿಶ್ವ ಮಹಿಳಾ ದಿನಾಚಣೆಯನ್ನು ಆಚರಿಸುತ್ತಿದ್ದು, ಹಲವು ಪರಿಣಾಮಕಾರಿ ವಿಷಯಗಳ ಸರಣಿಯನ್ನು ಕೈಗೊಂಡಿದ್ದಾರೆ. ಆರ್ಥಿಕ ಸಾಕ್ಷರತೆ ಕಾರ್ಯಕ್ರಮ ಸೇರಿಕೊಂಡು ಮಹಿಳೆಯರಿಗಾಗಿ ವಿಶೇಷ ಜ್ಞಾನದ ಸೆಷನ್ನ್ನು ಕೂಡ ಕೈಗೊಂಡಿದ್ದಾರೆ. ಮಹಿಳೆಯನ್ನು ಆರ್ಥಿಕವಾಗಿ ಸಬಲೀಕರಣದ ಗುರಿಯನ್ನಿಟ್ಟುಕೊಂಡು ಹಲವು ಚಟುವಟಿಕೆಗಳನ್ನು ಈ ಕಾರ್ಯಕ್ರಮದಲ್ಲಿ ಕೈಗೊಳ್ಳಲಾಯಿತು.
ಮಾರ್ಚ್ 23 ಅಂದ್ರೆ ಇಂದು ಈ ವಾಕಥಾನ್ನ್ನು ಹಮ್ಮಿಕೊಳ್ಳಲಾಗಿದ್ದು, ಮಹಿಳೆಯರು ಆರ್ಥಿಕವಾಗಿ ಸ್ವತಂತ್ರವಾಗಿ ಬದುಕುವುದು ಹೇಗೆ ಎಂಬ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಕೈಗೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಮಹಿಳೆಯರು, ಪುರುಷರು ಹಾಗೂ ಯುವ ಜನತೆಯೂ ಕೂಡ ಭಾಗವಹಿಸಿದ್ದು ವಿಶೇಷವಾಗಿತ್ತು. ಇದರೊಂದಿಗೆ ಮಹಿಳೆಯರ ಶಿಕ್ಷಣ, ಸಬಲೀಕರಣ ಮತ್ತು ಹೂಡಿಕೆಗಳ ಬಗ್ಗೆ ಇರುವ ಅವಕಾಶಗಳನ್ನು ಒಟ್ಟಾಗಿ ಎಲ್ಲರೂ ಆಲಿಸಿದರು.
ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜ್ನಲ್ಲಿ COFP ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡ ಈ ಒಂದು ವಾಕಥಾನ್ ನಡೆಯಿತು. ವಾಕಥಾನ್ನಲ್ಲಿ ಭಾಗಿಯಾದವರಲ್ಲಿ ಆರ್ಥಿಕ ಸಬಲೀಕರಣ ಹಾಗೂ ಲಿಂಗ ಸಮಾನತೆಯ ಕುರಿತಾಗಿ ನಡೆದ ಕಾರ್ಯಗಳ ಕುರಿತು ಅಪಾರ ಪ್ರಮಾಣದಲ್ಲಿ ಉತ್ಸಾಹ, ಶ್ರದ್ಧೆ ಕಂಡು ಬಂದಿತು.
ಇದೇ ವೇಳೆ ಮಾತನಾಡಿದ COFP ಅಧ್ಯಕ್ಷರಾದ ಎ.ಸುರೇಶ್ ಅವರು, ಯಾವಾಗ ಹಣ್ಣು ಮಕ್ಕಳು ಆರ್ಥಿಕವಾಗಿ ಸ್ವತಂತ್ರಗೊಳ್ಳುತ್ತಾರೊ ಆಗ ಅವರ ಧ್ವನಿಯಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಒಂದು ಶಕ್ತಿ ಬರುತ್ತದೆ. ಇದರಿಂದ ಅವರ ಪ್ರೀತಿ ಪಾತ್ರರನ್ನು ಎಲ್ಲ ರೀತಿಯಲ್ಲೂ ಬೆಂಬಲಿಸುವ ಸಾಮರ್ಥ್ಯ ಅವರಲ್ಲಿ ತಂದುಕೊಡುತ್ತದೆ ಮತ್ತು ಈ ಸ್ವಾತಂತ್ರ್ಯ ಅವರ ಗಮ್ಯವನ್ನು ತಲುಪಲು ಒಂದು ದಾರಿಯಾಗುತ್ತದೆ ಎಂದು ಹೇಳಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ