newsfirstkannada.com

ಯಾರಿಗೆ ಸಾಲುತ್ತೆ ಸಂಬಳ.. ಕಾಗ್ನಿಜೆಂಟ್‌ ಕೊಟ್ಟ ಹೊಸ ಆಫರ್‌ ಸರೀನಾ? ತಪ್ಪಾ? ನೆಟ್ಟಿಗರು ಕನ್ಫ್ಯೂಸ್‌!

Share :

Published August 15, 2024 at 4:34pm

Update August 15, 2024 at 4:44pm

    ಫ್ರೆಶರ್​ಗಳಿಗೆ ಭರ್ಜರಿ ಆಫರ್ ನೀಡಿದ ಕಾಗ್ನಿಜೆಂಟ್ಸ್ ಕಂಪನಿ

    ಎಕ್ಸ್​ ಖಾತೆಯಲ್ಲಿ ಶುರುವಾಯ್ತು ಪರ-ವಿರೋಧದ ಚರ್ಚೆಗಳು

    ಕಾಗ್ನಿಜೆಂಟ್ಸ್ ಬೆಂಬಲಕ್ಕೆ ನಿಂತ ಸಂಘ್ವಿ ಹೇಳಿಕೆಗೂ ಟೀಕೆಗಳು

ಬೆಂಗಳೂರು:  ಸದ್ಯ ಸೋಷಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ಕಾಗ್ನಿಜೆಂಟ್ಸ್​ ಹೊಸ ಕೆಲಸಗಾರರಿಗೆ ಹಾಗೂ ಕ್ಯಾಂಪಸ್​​ ಇಂಟರ್ವ್ಯೂವ್​​ನಲ್ಲಿ ಸೆಲೆಕ್ಟ್ ಆಗಿರುವ ನೂತನ ಕೆಲಸಗಾರರಿಗೆ ನೀಡಿರುವ ಸಂಬಳದ ಆಫರ್ ದೊಡ್ಡದಾಗಿ ಸದ್ದು ಮಾಡುತ್ತಿದೆ. ಟೆಕ್​ ಉದ್ಯಮದಲ್ಲಿ ಕಾಗ್ನಿಜೆಂಟ್ಸ್ ತನ್ನದೇ ಒಂದು ಹೆಸರನ್ನು ಹೊಂದಿದೆ. ಇತ್ತೀಚೆಗೆ ತನ್ನ ಕಂಪನಿಯಲ್ಲಿ ಕೆಲಸ ಮಾಡಲು ಇಚ್ಛಿಸುವ ಇಂಜಿನಿಯರಿಂಗ್ ಪದವಿ ಪಡೆದಿರುವ ಹೊಸ ನೌಕರರಿಗೆ ವರ್ಷಕ್ಕೆ 2.5 ಲಕ್ಷ ರೂಪಾಯಿ ಸಂಬಳ ನೀಡುವುದಾಗಿ ಘೋಷಿಸಿತ್ತು.

ಇದನ್ನೂ ಓದಿ: ಭಾರತದ ಮೊದಲ eSIM ಇದು! ಇನ್ಮುಂದೆ ರೋಮಿಂಗ್ ಸಮಸ್ಯೆಗೆ​ ಹೇಳಿ ಟಾಟಾ ಗುಡ್​ ಬೈ

ಇದು ಜಾಗತಿಕವಾಗಿ ದೊಡ್ಡ ಮಟ್ಟದ ಸುದ್ದಿಯಾಗಿದೆ. ಎಕ್ಸ್ ಖಾತೆಯಲ್ಲಿ ಸದ್ಯ ಇದು ಟ್ರೆಂಡಿಂಗ್​ನಲ್ಲಿದೆ. ಪರವಿರೋಧದ ಚರ್ಚೆಗಳು ಆರಂಭವಾಗಿವೆ. ತಾಂತ್ರಿಕ ಕೌಶಲ್ಯದಿಂದ ಬರುವ ಹೊಸ ಕೆಲಸಗಾರರಿಗೆ ಈ ಸಂಬಳ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಅನ್ನೋ ರೀತಿಯಲ್ಲಿ ನೆಟ್ಟಿಗರು ಟೀಕೆ ಮಾಡುತ್ತಿದ್ದಾರೆ. ಇನ್ನೂ ಕೆಲವರು ಕ್ಯಾಬ್​ ಡ್ರೈವರ್​ಗಳೂ ತಿಂಗಳಿಗೆ ಇದಕ್ಕಿಂತ ಹೆಚ್ಚು ಗಳಿಸುತ್ತಾರೆ. ಈ ಸ್ಯಾಲರಿ ಯಾವ ಮೂಲೆಗೆ ಸಾಲುತ್ತೆ ಅಂತಿದ್ದಾರೆ.

ಕಾಗ್ನಿಜೆಂಟ್ಸ್​​ ಆಫರ್​ ಸಮರ್ಥಿಸಿದ ವತ್ಸಲ್ ಸಂಘ್ವಿ

ಯಾರಿಗೆ ಸಾಲುತ್ತೆ ಈ ಸಂಬಳ ಅನ್ನೋ ಚರ್ಚೆಯಲ್ಲಿ 1811 ಲ್ಯಾಬ್​ಗಳ ಸ್ಥಾಪಕ ವತ್ಸಲ್ ಸಂಘ್ವಿ ಕಾಗ್ನಿಜೆಂಟ್ಸ್​ ನೀಡಿದ ಆಫರ್​ನ್ನು ಬೆಂಬಲಿಸಿದ್ದಾರೆ. ವತ್ಸಲ್ ಸಂಘ್ವಿ, ಜೆನ್ ಎಐ ಸಾಸ್ ಪ್ರೊಡಕ್ಟ್​ಗಳ ಸ್ಟಾರ್ಟ್​ಅಪ್ ಮೇಲೆ ಸದ್ಯ ಫೋಕಸ್ ಮಾಡುತ್ತಿದ್ದು, ಅವರು ಕಾಗ್ನಿಜೆಂಟ್ಸ್ ನೀಡದ ಆಫರ್​ಗೆ ಇದು ಆರಂಭಿಕ ಸ್ಟೈಫಂಡ್ ಮಾತ್ರ. ಅವರು ಹೇಳಿದ್ದು ಸಂಪೂರ್ಣ ಸ್ಯಾಲರಿ ಬಗ್ಗೆ ಅಲ್ಲ. ಇದು ಆಗಷ್ಟೇ ಪದವಿ ಮುಗಿಸಿ ಆಚೆ ಬಂದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ನಿಜಕ್ಕೂ ಲಾಭಕರ ಎಂದು ಹೇಳಿದ್ದಾರೆ.

ವರ್ಷಕ್ಕೆ 2.5 ಲಕ್ಷ ರೂಪಾಯಿ ಅಂದ್ರೆ ತಿಂಗಳಿಗೆ 20 ಸಾವಿರ ರೂಪಾಯಿ ಫ್ರೆಶರ್​ಗಳಿಗೆ ನೀಡುವುದು ನಿಜಕ್ಕೂ ಹೆಚ್ಚಿನ ಖರ್ಚು. ಆರಂಭದಲ್ಲಿ ಅವರಿಗೆ ವೃತ್ತಿಯ ಕೌಶಲ್ಯವಾಗಲಿ, ವೃತ್ತಿಪರ ಸಂವಹನವಾಗಲಿ ಯಾವುದು ಇರೋದಿಲ್ಲ. ವೃತ್ತಿಪರತೆಯಲ್ಲಿ ಹೇಗೆ ವರ್ತಿಸಬೇಕು ಅಂತ ಕೂಡ ಅವರಿಗೆ ಗೊತ್ತಿರಲ್ಲ ಎಂದು ಸಂಘ್ವಿ ತಮ್ಮ ಎಕ್ಸ್​ ಖಾತೆಯಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಬರೀ 4 ನಿಮಿಷದಲ್ಲಿ ಚಾರ್ಜ್​​ ಫುಲ್​.. 320w ಚಾರ್ಜಿಂಗ್​ ವೈಶಿಷ್ಟ್ಯ ಪರಿಚಯಿಸುತ್ತಿದೆ ರಿಯಲ್​ಮಿ! ಎಷ್ಟು ಸುರಕ್ಷಿತ?

ವತ್ಸಲ್ ಸಂಘ್ವಿ ಹೇಳಿಕೆಗೆ ನೆಟ್ಟಿಗರ ವಿರೋಧ

ಕಾಗ್ನಿಜೆಂಟ್ಸ್ ಪರವಾಗಿ ಬ್ಯಾಟ್ ಬೀಸಿದ ಸಂಘ್ವಿ ವಿರುದ್ಧ ಅನೇಕ ಟೀಕೆಗಳು ಹರಿದು ಬರುತ್ತಿವೆ. ವ್ಯಕ್ತಿಗತವಾಗಿ ಆರಂಭಿಕ ಕೆಲಸಗಾರರಿಗೆ ಕೌಶಲ್ಯದ ಅಭಿವೃದ್ಧಿ ಇರುವುದಿಲ್ಲ ಅನ್ನೋದು ನಿಜ. ಅದನ್ನು ಕಂಪನಿಗಳು ಅವರಲ್ಲಿ ನಿರ್ಮಿಸಬೇಕು. ಅವರಿಗೆ ಆ ನಿಟ್ಟಿನಲ್ಲಿ ತರಬೇತಿ ನೀಡಬೇಕು ಹೇಳಿಕೊಡಬೇಕು. ಅದು ಕಾಲೇಜು ಮಟ್ಟದಲ್ಲಿಯೇ ಅವರಿಗೆ ನೀಡಿದಲ್ಲಿ ಇನ್ನೂ ಉತ್ತಮ ಎಂದು ಹೇಳಿದ್ದಾರೆ. ಇನ್ನು ಮತ್ತೊಬ್ಬ ಮಾಡಿದ ಕಾಮೆಂಟ್​​ನಲ್ಲಿ ನಾನು 2006ರಲ್ಲಿ ಫ್ರೆಶರ್ ಆಗಿ ಕಂಪನಿಯೊಂದಕ್ಕೆ ಸೇರಿಕೊಂಡಾಗ ಇದೇ ಸ್ಯಾಲರಿಗೆ ಸೇರಿಕೊಂಡಿದ್ದೇನೆ. ಸದ್ಯ ಕಾಗ್ನಿಜೆಂಟ್ಸ್ ಆಫರ್ ಮಾಡಿರುವ ಸಂಬಳ ಹೆಚ್ಚಿನದೇನು ಅಲ್ಲ ಎಂದು ಟೀಕಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಯಾರಿಗೆ ಸಾಲುತ್ತೆ ಸಂಬಳ.. ಕಾಗ್ನಿಜೆಂಟ್‌ ಕೊಟ್ಟ ಹೊಸ ಆಫರ್‌ ಸರೀನಾ? ತಪ್ಪಾ? ನೆಟ್ಟಿಗರು ಕನ್ಫ್ಯೂಸ್‌!

https://newsfirstlive.com/wp-content/uploads/2024/08/COGNIZANS.jpg

Load More