/newsfirstlive-kannada/media/post_attachments/wp-content/uploads/2025/07/KADOOR-WATER.jpg)
ಚಿಕ್ಕಮಗಳೂರು: ಹೆಣ್ಣು, ಹೊನ್ನು, ಮಣ್ಣಿಗಾಗಿ ಭೂಮಿಯಲ್ಲಿ ದೊಡ್ಡ ದೊಡ್ಡ ಯುದ್ಧಗಳೇ ನಡೆದಿವೆ. ಅದರ ಸಾಲಲ್ಲೇ ಜಲ ವಿವಾದ ಕೂಡ ಸೇರುತ್ತೆ. ನೀರಿಗಾಗಿ ದೇಶ-ದೇಶ ನಡುವೆ, ರಾಜ್ಯ, ರಾಜ್ಯಗಳ ಮಧ್ಯೆ ಸಂಘರ್ಷ ಹೊಸದಲ್ಲ. ಅಂತೆಯೇ ಚಿಕ್ಕಮಗಳೂರಲ್ಲಿ ಎರಡು ಗ್ರಾಮಗಳ ಮಧ್ಯೆ ಜಲಕ್ಕಾಗಿ ಕೋಲ್ಡ್ ವಾರ್ ನಡೆದಿದೆ.
ಇದನ್ನೂ ಓದಿ: ಹರ್ಭಜನ್ ಸಿಂಗ್ ಕರಿಯರ್ ಮುಗಿಸಿದ್ದು ಅಶ್ವಿನ್..? ಸತ್ಯ ರಿವೀಲ್ ಮಾಡಿದ ಭಜ್ಜಿ..!
ವೇದಾ ನದಿ ನೀರಿಗಾಗಿ 2 ಊರಿನ ರೈತರ ಮಧ್ಯೆ ಕೋಲ್ಡ್ ವಾರ್ ಶುರುವಾಗಿದೆ. ಕಡೂರು ತಾಲೂಕಿನ ವೇದಾ ನದಿ ನೀರಿಗಾಗಿ ಹುಲಿಕೆರೆ-ನಾಗೇನಹಳ್ಳಿ ಮತ್ತು ಕಡೂರು-ಸಖರಾಯಪಟ್ಟಣ ರೈತರ ಮಧ್ಯೆ ವಾರ್ ಶುರುವಾಗಿದೆ. ಹುಲಿಕೆರೆ-ನಾಗೇನಹಳ್ಳಿ ಕೆರೆಗೆ ನೀರು ಹರಿಸಲು ಕಡೂರು-ಸಖರಾಯಪಟ್ಟಣ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ.
ನೀರು ವಿವಾದ ಹಿನ್ನೆಲೆಯಲ್ಲಿ ಶಾಸಕ ಆನಂದ್ ಸಮ್ಮುಖದಲ್ಲಿ ಸಭೆ ನಡೆದಿತ್ತು. ಈ ವೇಳೆ ಎರಡು ಗ್ರಾಮಸ್ಥರ ನಡುವೆ ಕೈಕೈ ಮಿಲಾಯಿಸುವ ಹಂತಕ್ಕೂ ಜಗಳ ಹೋಗಿದೆ. ಕೊನೆಗೆ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದು, ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ.
ಇದನ್ನೂ ಓದಿ: ದರ್ಶನ್ಗೆ ಗುರುವಾರದ ತನಕ ರಿಲೀಫ್; ಸುಪ್ರೀಂ ಕೋರ್ಟ್ನ ಇವತ್ತಿನ ವಿಚಾರಣೆಯಲ್ಲಿ ಏನಾಯ್ತು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ