ಪೋಷಕರೇ ಎಚ್ಚರ! ಸಾಲದ ಹೊರೆ; ಆನ್​​ಲೈನ್​ ಗೇಮಿಂಗ್​ನಿಂದ ಪ್ರಾಣವನ್ನೇ ಬಿಟ್ಟ ವಿದ್ಯಾರ್ಥಿ!

author-image
Ganesh Nachikethu
Updated On
ಪೋಷಕರೇ ಎಚ್ಚರ! ಸಾಲದ ಹೊರೆ; ಆನ್​​ಲೈನ್​ ಗೇಮಿಂಗ್​ನಿಂದ ಪ್ರಾಣವನ್ನೇ ಬಿಟ್ಟ ವಿದ್ಯಾರ್ಥಿ!
Advertisment
  • ಆನ್​ಲೈನ್​​ ಗೇಮಿಂಗ್​​ ಹುಚ್ಚು ತರೋ ಅವಾಂತರಗಳು ಒಂದೆರಡಲ್ಲ
  • ಹಣ ಕಳೆದುಕೊಳ್ಳುವುದು ಮಾತ್ರವಲ್ಲ ಜತೆಗೆ ಜೀವವನ್ನೇ ತೆಗೆಯುತ್ತೆ..!
  • ಎಚ್ಚೆತ್ತುಕೊಳ್ಳೋ ಮುನ್ನ ವಂಚನೆಗೆ ಬಲಿಯಾಗುರೋರ ಸಂಖ್ಯೆ ಹೆಚ್ಚುತ್ತಿದೆ

ಬೆಂಗಳೂರು: ಆನ್​ಲೈನ್​​ ಗೇಮಿಂಗ್​​ ಹುಚ್ಚು ತರೋ ಅವಾಂತರಗಳು ಒಂದೆರಡಲ್ಲ. ಕೇವಲ ಹಣ ಕಳೆದುಕೊಳ್ಳುವುದು ಮಾತ್ರವಲ್ಲ ಜತೆಗೆ ಜೀವವನ್ನೇ ತೆಗೆದು ಹಾಕುತ್ತದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು, ಗೃಹಿಣಿಯರು, ಉದ್ಯಮಿಗಳು ಹೀಗೆ ಎಷ್ಟೋ ಮಂದಿ ಹಣದೊಂದಿಗೆ ಜೀವವನ್ನು ಕಳೆದುಕೊಂಡ ಹಲವು ಕೇಸುಗಳು ಬೆಳಕಿಗೆ ಬಂದಿವೆ. ಎಚ್ಚೆತ್ತುಕೊಳ್ಳುವುದಕ್ಕೂ ಮುನ್ನವೇ ವಂಚನೆಗೆ ಬಲಿಯಾಗುರೋರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.

ಇಂಥದ್ದೊಂದು ಕೇಸ್​ ಈಗ ಬೆಂಗಳೂರಲ್ಲಿ ನಡೆದಿದೆ. ಆನ್​ಲೈನ್​ ಗೇಮಿಂಗ್​​ಗೆ 19 ವರ್ಷದ ಪ್ರವೀಣ್ ಎಂಬ ಯುವಕ ಬಲಿಯಾಗಿದ್ದಾನೆ. ಕಳೆದ 10 ದಿನಗಳ ಹಿಂದೆ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಅಸಲಿಗೆ ಆಗಿದ್ದೇನು?

ಪ್ರವೀಣ್​​ ಕೆ.ಆರ್​ ಪುರಂ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲೇ ವಾಸ ಇದ್ದ. ಕಾಲೇಜಿಗೆ ಹೋಗೋದು ಬಿಟ್ಟು ಯಾವಾಗಲೂ ಗೇಮ್​ ಆಡುತ್ತಿದ್ದ. ಆನ್​ಲೈನ್​ ಗೇಮ್​ ಆಡಲು ಬಹಳ ಸಾಲ ಮಾಡಿಕೊಂಡಿದ್ದ. ಗೆದ್ರೂ ಆ ಹಣವನ್ನು ಸಾಲಗಾರರೇ ತೆಗೆದುಕೊಳ್ಳುತ್ತಿದ್ರು. ಸಾಲಗಾರರ ಕಾಟವೂ ಹೆಚ್ಚಾಗಿತ್ತು. ಇದರಿಂದ ಬೇಸತ್ತ ಪ್ರವೀಣ್​ ಮನೆಯಲ್ಲೇ ನೇಣಿಗೆ ಶರಣಾಗಿದ್ದಾನೆ. ಈ ಕುರಿತು ಕೆ.ಆರ್​ ಪುರಂ ಪೊಲೀಸ್ರು ಎಫ್​ಐಆರ್​ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ:2025ರ ಐಪಿಎಲ್​; ಆರ್​​ಸಿಬಿ ತಂಡದಿಂದ ಕೊಹ್ಲಿ ಶಿಷ್ಯನನ್ನು ಕೈ ಬಿಡಲು ಕಾರಣವೇನು?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment