newsfirstkannada.com

₹46 ಕೋಟಿ ವ್ಯವಹಾರ ಮಾಡಿದ ಅಂತ ಕಾಲೇಜು ವಿದ್ಯಾರ್ಥಿಗೆ IT ನೋಟಿಸ್.. ಫೊಲೀಸರು ಏನು ಅಂತಾರೆ?

Share :

Published March 31, 2024 at 9:10am

    ಸದ್ಯ ನೋಟಿಸ್ ಪಡೆದಿರುವ ಕಾಲೇಜು ವಿದ್ಯಾರ್ಥಿ ಫುಲ್ ಶಾಕ್

    ಈ ಬಗ್ಗೆ ಪೂರ್ಣ ತನಿಖೆ ಮಾಡಲಾಗುವುದು ಎಂದ ಪೊಲೀಸರು

    ಯುವಕ ಅಂಥ ದೊಡ್ಡ ಮಟ್ಟದ ವ್ಯವಹಾರ ಮಾಡಿದ್ದು ನಿಜವೇ.?

ಭೋಪಾಲ್​: ಮಧ್ಯಪ್ರದೇಶದ ಗ್ವಾಲಿಯರ್‌ನ 25 ವರ್ಷದ ಪ್ರಮೋದ್​ ಕುಮಾರ್​ ದಂಡೋಟಿಯಾ ಎಂಬ ವಿದ್ಯಾರ್ಥಿ ತನ್ನ ಖಾತೆಯಿಂದ ₹46 ಕೋಟಿ ವಹಿವಾಟು ನಡೆಸಿದ್ದಾನೆಂದು ಹೇಳಿ ಆದಾಯ ತೆರಿಗೆ ಇಲಾಖೆ ನೊಟೀಸ್​ ನೀಡಿದೆ. ಸದ್ಯ ಇನ್​ಕಮ್​ ಟ್ಯಾಕ್ಸ್​ ಅಧಿಕಾರಿಗಳು ನೀಡಿದ ನೋಟಿಸ್​ನಿಂದ ವಿದ್ಯಾರ್ಥಿ ಬೆಚ್ಚಿ ಬಿದ್ದಿದ್ದಾನೆ.

ಗ್ವಾಲಿಯರ್‌ನಲ್ಲಿ ಕಾಲೇಜು ವಿದ್ಯಾರ್ಥಿ ಪ್ರಮೋದ್ ತನ್ನ ಬ್ಯಾಂಕ್ ಖಾತೆಯಲ್ಲಿ 46 ಕೋಟಿ ರೂಪಾಯಿಗಳ ವಹಿವಾಟು ಆಗಿರುವುದನ್ನು ಕಂಡು ಶಾಕ್ ಆಗಿದ್ದಾನೆ. 2021 ರಿಂದ ಮುಂಬೈ ಮತ್ತು ದೆಹಲಿಯಲ್ಲಿ ವ್ಯಾಪಾರ ಚಟುವಟಿಕೆಯಲ್ಲಿ ತೊಡಗಿರುವ ಕಂಪನಿಯೊಂದರಲ್ಲಿ ವಿದ್ಯಾರ್ಥಿಯ ಪ್ಯಾನ್ ಕಾರ್ಡ್ ಬಳಕೆಯಲ್ಲಿದ್ದು, ಇದರ ಆಧಾರದ ಮೇಲೆ ನೊಟೀಸ್​ ನೀಡಲಾಗಿದೆ. ನನ್ನ ಪ್ಯಾನ್ ಕಾರ್ಡ್ ಅನ್ನು ದುರುಪಯೋಗಪಡಿಸಿಕೊಂಡು ಹಣದ ವಹಿವಾಟು ಮಾಡಲಾಗಿದೆ ಎಂದು ವಿದ್ಯಾರ್ಥಿ ಆರೋಪಿಸಿದ್ದಾನೆ.

ಇನ್ನು ವಿದ್ಯಾರ್ಥಿಯ ದೂರಿನ ಸಂಬಂಧ ಎಎಸ್‌ಪಿ ಶಿಯಾಜ್ ಕೆಎಂ ಮಾತನಾಡಿ, ಯುವಕನ ಬ್ಯಾಂಕ್ ಖಾತೆಯಿಂದ ₹46 ಕೋಟಿಗೂ ಹೆಚ್ಚು ವಹಿವಾಟು ನಡೆಸಿದ್ದಾನೆ ಎನ್ನುವ ಅರ್ಜಿ ಸ್ವೀಕರಿಸಲಾಗಿದೆ. ಈ ಸಂಬಂಧ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಪಾನ್ ಕಾರ್ಡ್ ದುರುಪಯೋಗ ಮಾಡಿಕೊಂಡು ಕಂಪನಿ ಹೆಸರು ನೋಂದಾಯಿಸಿ ದೊಡ್ಡ ಮೊತ್ತದ ವ್ಯವಹಾರ ಮಾಡಲಾಗಿದೆ. ಹೀಗಾಗಿ ಸಂಪೂರ್ಣ ತನಿಖೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

₹46 ಕೋಟಿ ವ್ಯವಹಾರ ಮಾಡಿದ ಅಂತ ಕಾಲೇಜು ವಿದ್ಯಾರ್ಥಿಗೆ IT ನೋಟಿಸ್.. ಫೊಲೀಸರು ಏನು ಅಂತಾರೆ?

https://newsfirstlive.com/wp-content/uploads/2024/03/STUDENT-1.jpg

Load More