/newsfirstlive-kannada/media/post_attachments/wp-content/uploads/2024/07/women_42_murder.jpg)
ನರರೂಪದ ರಾಕ್ಷಸ, ಸೀರಿಯಲ್​ ಕಿಲ್ಲರ್​ನೊಬ್ಬ ತನ್ನ ಹೆಂಡತಿ ಸೇರಿದಂತೆ ಸುಮಾರು 42 ಮಹಿಳೆಯರನ್ನ ಭೀಕರವಾಗಿ ಕೊಲೆ ಮಾಡಿ ಅವರ ದೇಹಗಳನ್ನು ಕ್ವಾರಿಗೆ ಬೀಸಾಕಿದ್ದಾನೆ. 2022ರಿಂದಲೂ ಕೊಲೆ ಮಾಡಿಕೊಂಡು ಬಂದಿರುವುದಾಗಿ ಆರೋಪಿ ತನ್ನ ತಪ್ಪು ಒಪ್ಪಿಕೊಂಡಿದ್ದಾನೆ ಎಂದು ಹೇಳಲಾಗಿದೆ.
ಕೀನ್ಯಾದ ರಾಜಧಾನಿ ನೈರೋಬಿಯ ದಕ್ಷಿಣದಲ್ಲಿರುವ ಮುಕುರು ಪ್ರದೇಶದ ಸೀರಿಯಲ್ ಕಿಲ್ಲರ್ ಹೆಸರು ಕಾಲಿನ್ಸ್ ಜುಮೈಸಿ (33) ಎಂದು ಗುರುತಿಸಲಾಗಿದೆ. ಈ ಕಿರಾತಕನಿಗೆ ಮಹಿಳೆಯರು ಎಂದರೆ ಆಗುತ್ತಿರಲಿಲ್ಲವಂತೆ. ಸ್ಥಳೀಯ ಜನರು ಹೇಳುವ ಪ್ರಕಾರ ಯಾವುದೇ ಮಹಿಳೆಯನ್ನು ಕಂಡರು ಕೆಂಡ ಕಾರುತ್ತಿದ್ದನಂತೆ. ಹೀಗಾಗಿಯೇ ತನ್ನ ಹೆಂಡತಿ ಸೇರಿ 42 ಮಹಿಳೆಯರನ್ನು ಭಯಾನಕವಾಗಿ, ಭೀಕರವಾಗಿ ಹತ್ಯೆ ಮಾಡಿದ್ದಾನೆ. ತನ್ನ ಹೆಂಡತಿಯನ್ನು ಇದೇ ಜುಲೈ 11 ರಂದು ಕೊಲೆ ಮಾಡಿದ ವೇಳೆಯೇ ಪ್ರಕರಣ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ರಕ್ಷ್ ನಿರ್ಮಾಣದಲ್ಲಿ ಹೊಸ ಧಾರಾವಾಹಿ.. ಎಂಟ್ರಿಯಾಗ್ತಿದೆ ದೃಷ್ಟಿಬೊಟ್ಟು ಸೀರಿಯಲ್, ಹೀರೋ ಯಾರು?
ಸದ್ಯ ಆರೋಪಿಯು ಮಹಿಳೆಯರನ್ನು ಕೊಲೆ ಮಾಡಿ ಬೀಸಾಕುತ್ತಿದ್ದ ಕ್ವಾರಿಯಿಂದ ಈಗಾಗಲೇ 9 ಮೃತದೇಹಗಳನ್ನು ಪತ್ತೆ ಹಚ್ಚಲಾಗಿದೆ. ಎಲ್ಲ ಮೃತದೇಹಗಳಿಗೆ ಪ್ಲಾಸ್ಟಿಕ್ ಕವರ್​ನಿಂದ ಕಟ್ಟಿ ಮೇಲ್ಭಾಗದಲ್ಲಿ ಏನು ಕಾಣದಂತೆ ಮಾಡಿ ನಂತರ ಕ್ವಾರಿಗೆ ಹಾಕುತ್ತಿದ್ದನು. ಕೊಲೆಯಾದ ಮಹಿಳೆಯರ ಬಳಿಯಿದ್ದ ಮೊಬೈಲ್​, ಐಡಿ ಕಾರ್ಡ್​​ಗಳು, ಚೈನ್, ಬಟ್ಟೆ ಇತ್ಯಾದಿಗಳನ್ನು ಪೊಲೀಸರು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆಯರನ್ನು ಕೊಲೆ ಮಾಡಲು ಬಳಕೆ ಮಾಡಿದ್ದ ಮಚ್ಚು, ಚಾಕು, ಮೃತದೇಹಗಳನ್ನು ತುಂಬಲು ಇಟ್ಟುಕೊಂಡಿದ್ದ ಪ್ಲಾಸ್ಟಿಕ್ ಚೀಲ, ಕೈ ಗ್ಲೌಸ್​ಗಳು ಆತನ ಮನೆಯಲ್ಲಿ ಸಿಕ್ಕಿವೆ ಎಂದು ಪೊಲೀಸರು ಹೇಳಿದ್ದಾರೆ. ಮೃತದೇಹಗಳನ್ನು ಕ್ವಾರಿಯಿಂದ ತೆಗೆಯುವಾಗ ಸಾಕಷ್ಟು ಜನರು ಸೇರಿದ್ದರು. ಸದ್ಯ ಹಂತಕನನ್ನು ಅರೆಸ್ಟ್ ಮಾಡಿರುವ ಪೊಲೀಸರು ವಿಚಾರಣೆ ಕೈಗೊಂಡಿದ್ದು ಮಹಿಳೆಯರ ಹತ್ಯೆ ಕುರಿತು ಕೆಲ ಮಾಹಿತಿಗಳನ್ನು ನೀಡಿದ್ದಾನೆಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ