/newsfirstlive-kannada/media/post_attachments/wp-content/uploads/2025/05/ColonelSophiaQureshi.jpg)
‘ಆಪರೇಷನ್ ಸಿಂಧೂರ’ ಯಶಸ್ವಿ ಕಾರ್ಯಾಚರಣೆ ಬಗ್ಗೆ ದೇಶಕ್ಕೆ ಮಾಹಿತಿ ನೀಡುವಲ್ಲಿ ಇಬ್ಬರು ಹೆಣ್ಮಕ್ಕಳು ಪ್ರಮುಖ ಪಾತ್ರವಹಿಸಿದ್ದರು. ಒಬ್ಬರು ಲೆಫ್ಟಿನೆಂಟ್ ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್. ಬೆನ್ನಲ್ಲೇ ಈ ಸೇನಾಧಿಕಾರಿಗಳ ಜೀವನ ಶೈಲಿ, ಯಾವ ರಾಜ್ಯದವರು, ಕುಟುಂಬಸ್ಥರ ಬಗ್ಗೆ ತಿಳಿದುಕೊಳ್ಳಲು ಜನ ಕಾತುರದಿಂದ ಕಾಯುತ್ತಿದ್ದಾರೆ.
ಇದನ್ನೂ ಓದಿ:ಕರ್ನಲ್ ಖುರೇಷಿ, ವ್ಯೋಮಿಕಾ ಸಿಂಗ್ ತಿಂಗಳಿಗೆ ಎಷ್ಟು ಸಂಬಳ ಪಡೆಯುತ್ತಾರೆ..?
ಅದರಲ್ಲೂ ಹೆಮ್ಮೆಯ ವಿಚಾರ ಏನೆಂದರೆ ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಗ್ಗೆ ಎಳೆ ಎಳೆಯಾಗಿ ಮಾಹಿತಿ ಬಿಚ್ಚಿಟ್ಟಿದ್ದು ಬೇರೆ ಯಾರು ಅಲ್ಲ, ಅವರೇ ಬೆಳಗಾವಿಯ ಸೊಸೆ. ಇದೀಗ ಬೆಳಗಾವಿ ಜಿಲ್ಲೆಯ ಸೊಸೆ ಬಗ್ಗೆ ಮಾವ ಹೆಮ್ಮೆಯ ಮಾತಾಡಿದ್ದಾರೆ. ಸೋಫಿಯಾ ಖುರೇಷಿ ಮೂಲತಃ ಗುಜರಾತ್‌ನವರು. ಆದ್ರೆ ಬೆಳಗಾವಿ ಮೂಲದ ತಾಜುದ್ದೀನ್ ಬಾಗೇವಾಡಿ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು.
ಇದನ್ನೂ ಓದಿ:ಪಾಕಿಸ್ತಾನಕ್ಕೆ ಮೊತ್ತೊಂದು ದೊಡ್ಡ ಆಘಾತ; 12 ಸೈನಿಕರು ಛಿದ್ರ ಛಿದ್ರ..! VIDEO
ಇನ್ನೂ ಈ ಬಗ್ಗೆ ಕರ್ನಲ್ ಸೋಫಿಯಾ ಖುರೇಷಿ ಮಾವ ಗೌಸ್ ಸಾಬ್ ನ್ಯೂಸ್ಫಸ್ಟ್ನೊಂದಿಗೆ ಮಾತಾಡಿದ್ದಾರೆ. ಟಿವಿಯಲ್ಲಿ ನೋಡಿದ್ಮೇಲೆ ಹೆಮ್ಮೆ ಮತ್ತು ಖುಷಿಯಾಗಿದೆ. ನಮ್ಮ ಕರ್ನಾಟಕದ ಮೇಲಿನ ಗೌರವ ಹೆಚ್ಚಿಸಿದ್ದಾರೆ. ದೇಶ ಸಲುವಾಗಿ ದುಡಿಯಿರಿ ಅಂತಾ ಮಕ್ಕಳಿಗೆ ಹೇಳಿದ್ದೆ, ಮಕ್ಕಳು ದೇಶ ಸೇವೆ ಸಲ್ಲಿಸುತ್ತಿದ್ದಾರೆ. ಇಬ್ಬರಿಗೂ ಗುಜರಾತ್ನಲ್ಲಿ ಮದುವೆ ಮಾಡಿದ್ದೇವೆ. ಇಬ್ಬರು ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಸೊಸೆ ಜತೆಗೆ ಮಾತನಾಡಿಲ್ಲ, ಮಗನ ಜೊತೆಗೆ ಮಾತನಾಡಿದ್ದು ಹಬ್ಬದ ಸಂಭ್ರಮದಂತೆ ಆಗಿದೆ. ಸ್ವಾಮೀಜಿಗಳು, ಜನರು ಎಲ್ಲರೂ ಗೌರವ ನನಗೆ ಸಲ್ಲಿಸುತ್ತಿದ್ದಾರೆ.
ಸೊಸೆ, ಮಗ ಮನೆಗೆ ಬಂದಾಗ ಬಹಳ ಫ್ರೀ ಇರ್ತಾರೆ, ಲವಲವಿಕೆಯಿಂದ ಇರ್ತಾರೆ. ಸೊಸೆಗೆ ಜವಾರಿ (ನಾಟಿ) ಕೋಳಿ, ರೊಟ್ಟಿ, ಕಬ್ಬು ಅಂದರೆ ಬಹಳ ಇಷ್ಟ. ನಿಮ್ಮೂರು ಚಲೋ ಐತಿ, ನಮ್ದು ಗೋದಿ ನಾಡು, ನಿಮ್ಮೂರು ನ್ಯಾಚುರಲ್ ಇದೆ ಅಂತಾ ಸೊಸೆ ಹೇಳ್ತಾಳೆ. ವಾಕಿಂಗ್ ಮಾಡಿ ಅಂತಾ ಸೊಸೆ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ. ನಾವೆಲ್ಲ ಸಮಾಜದವರ ಜೊತೆಗೆ ಕೂಡಿ ಬಾಳುತ್ತೇವೆ, ಮಕ್ಕಳಿಗೂ ಅದನ್ನೇ ಹೇಳಿರುವೆ. ಜಮೀನು ಏನು ಕೆಲಸ ಮಾಡಿ ಮಕ್ಕಳನ್ನ ಓದಿಸಿರುವೆ. ನನಗೆ ಮೂರು ಗಂಡು ಮಕ್ಕಳು, ಅದರಲ್ಲಿ ಓರ್ವ ಮಗ ಅಗ್ನಿಶಾಮಕದಲ್ಲಿ ಸೇವೆ ಸಲ್ಲಿಸುತ್ತಾನೆ. ಕೊಣ್ಣೂರನಲ್ಲಿ ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ ಮಾಡಿದ್ದಾರೆ. ನಂತರ ಕಮಾಂಡ್ ಟ್ರೇನಿಂಗ್ನಲ್ಲಿ ಫಾಸ್ ಆಗಿದ್ದಾರೆ, ಇಬ್ಬರು ಕರ್ನಲ್ ಆಗಿ ಸೇವೆ. ವರ್ಷದಲ್ಲಿ ನಾನು ಎರಡು ಸಲ ಮಗನ ಹತ್ತಿರ ಹೋಗುತ್ತೇನೆ. ಮಳೆ ಆರಂಭದಲ್ಲಿ ನಾನು ಮತ್ತೆ ಹೋಗುವೆ. ಪಾಕಿಸ್ತಾನ ಹೇಡಿಯ ಹಾಗೆ ಹಿಂದಿನಿಂದ ದಾಳಿ ಮಾಡ್ತಿದೆ, ಅವರಿಗೆ ನಮ್ಮ ಸೈನಿಕರು ತಕ್ಕ ಪಾಠ ಕಲಿಸಿದ್ದಾರೆ. ಪಾಕಿಸ್ತಾನದವರಂತ ಮೂರ್ಖರು ಯಾರು ಇಲ್ಲ ಎಂದಿದ್ದಾರೆ.
ಸೋಫಿಯಾ ಖುರೇಷಿ ಬಹುರಾಷ್ಟ್ರೀಯ ಸೇನಾ ತುಕಡಿಯನ್ನು ಮುನ್ನಡೆಸಿದ ಮೊದಲ ಭಾರತೀಯ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಸೋಫಿಯಾ ಪತಿ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕೊಣ್ಣೂರು ಗ್ರಾಮದವರು. ಸೋಫಿಯಾ ಪತಿಯ ಹೆಸರು ತಾಜುದ್ದೀನ್ ಬಾಗೇವಾಡಿ. ಪತಿ ಹಾಗೂ ಪತ್ನಿ ಇಬ್ಬರೂ ಭಾರತೀಯ ಸೇನೆಯಲ್ಲಿ ಕರ್ನಲ್ ಆಗಿ ದೇಶ ಸೇವೆ ಮಾಡ್ತಿದ್ದಾರೆ. ಸೋಫಿಯಾ ಪತಿ ತಾಜುದ್ದೀನ್ ಬಾಗೇವಾಡಿ ಸಹ ಕರ್ನಲ್ ಆಗಿದ್ದಾರೆ. 2015ರಲ್ಲಿ ಈ ಇಬ್ಬರು ಪ್ರೀತಿಸಿ ಮದುವೆಯಾಗಿದ್ದರು. ಸದ್ಯ ಸೋಫಿಯಾ ಜಮ್ಮುವಿನಲ್ಲಿ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಪತಿ ತಾಜುದ್ದೀನಿ ಬಾಗೇವಾಡಿ ಸಹ ಜಾನ್ಸಿಯಲ್ಲಿ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇದನ್ನೂ ಓದಿ: ಆಪರೇಷನ್ ಸಿಂಧೂರ್ಗೆ ಬೆಂಗಳೂರು ಕನೆಕ್ಷನ್.. ಉಗ್ರರ ನೆಲೆ ಧ್ವಂಸ ಮಾಡಿದ್ದು ಕರ್ನಾಟಕದ ಡ್ರೋಣ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ