/newsfirstlive-kannada/media/post_attachments/wp-content/uploads/2025/07/kannada-serials.jpg)
ಕರ್ಣ ಸಾಹಿತ್ಯ ಪ್ರೀತಿಯ ಪಯಣಕ್ಕೆ 400 ಸಂಚಿಕೆಗಳ ಸಂಭ್ರಮ. ಈ ಸಂದರ್ಭದಲ್ಲಿ ಕರಿಮಣಿ ಅಭಿಮಾನಿಗಳಿಗೆ ಬೇಸರದ ಸುದ್ದಿ ಇದೆ. ಧಾರಾವಾಹಿ ಮುಕ್ತಾಯದ ಸೂಚನೆ ಸಿಕ್ಕಿದೆ.
ಹೌದು, ಹಲವು ಬಾರಿ ಸಮಯ ಬದಲಾದ್ರೂ ಕಟ್ಟಾ ಅಭಿಮಾನಿಗಳು ಅದೇ ಪ್ರೀತಿ ನೀಡುತ್ತಾ ಬಂದಿದ್ದಾರೆ. ಸದ್ಯ ಕರಿಮಣಿ ಸಂಜೆ 6 ಗಂಟೆಗೆ ವೀಕ್ಷಕರ ಮನೆಗೆ ಕಾಲಿಡುತ್ತಿದೆ. ವೀಕ್ಷಕರ ರೆಸ್ಪಾನ್ಸ್ ಚನ್ನಾಗಿದೆ. ಆದ್ರೆ ಬಿಗ್​ ಬಾಸ್​ ಅನೌನ್ಸ್​ ಆಗುತ್ತಿದ್ದಂತೆ ಕರಿಮಣಿಗೂ ಕತ್ತರಿ ಬಿಳ್ತಿದೆ ಎನ್ನಲಾಗ್ತಿದೆ.
ಬಿಗ್​ ಬಾಸ್​ ಪ್ರತಿದಿನ ಒಂದುವರೆ ಗಂಟೆ ಪ್ರಸಾರ ಆಗುತ್ತೆ. ಹೀಗಾಗಿ ಬರೋಬ್ಬರಿ 3 ಧಾರಾವಾಹಿಗಳಿಗೆ ಶುಭಂ ಹೇಳಾಲಾಗುತ್ತೆ. ಅದು ಅಲ್ಲದೇ ಹೊಸ ಧಾರಾವಾಹಿ ಪ್ರೇಮಕಾವ್ಯ ಹಾಗೂ ಶ್ರೀಗಂಧದ ಗುಡಿ ಧಾರಾವಾಹಿ ಅನೌನ್ಸ್ ಆಗಿದ್ದು, ಈ 3 ಕಾರ್ಯಕ್ರಮಕ್ಕೆ ಸ್ಲಾಟ್​ ಹೊಂದಿಸುತ್ತೀವೆ ತಂಡ ಎಂಬ ಮಾಹಿತಿ ಲಭ್ಯವಾಗಿದೆ.
ಹೀಗಾಗಿ ರಾಮಾಚಾರಿ, ಕರಿಮಣಿ ಧಾರಾವಾಹಿ ಮುಕ್ತಾಯ ಆಗೋ ಚಾನ್ಸ್​ ಇದೆ. ಇನ್ನೊಂದು ಧಾರಾವಾಹಿ ಯಾವುದು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಒಟ್ಟಿನಲ್ಲಿ ರಾಮಾಚಾರಿ ಹಾಗೂ ಕರಿಮಣಿ ಶೀಘ್ರದಲ್ಲೇ ವೀಕ್ಷಕರಿಗೆ ಗುಡ್​ ಬೈ ಹೇಳೋದು ಖಚಿತವಾಗಿದೆ. ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ