/newsfirstlive-kannada/media/post_attachments/wp-content/uploads/2024/06/raja-rani8.jpg)
ವೀಕೆಂಡ್​ನಲ್ಲಿ ಜಬರ್ದಸ್ತ್​​ ಮನರಂಜನೆ ಹೊತ್ತು ಬರ್ತಿದೆ ರಾಜಾರಾಣಿ ಶೋ. ಸದ್ಯ ರಾಜಾ ರಾಣಿ ಗ್ರಾಂಡ್ ಓಪನಿಂಗ್​ನಲ್ಲಿ ನಟಿ ಅನುಪಮಾ ಗೌಡ, ಜಡ್ಜ್​ ಸೀಟ್​ನಲ್ಲಿ ನಟಿ ತಾರಮ್ಮ, ನಟ ಸೃಜನ್​ ಜೊತೆಗೆ ಸ್ಯಾಂಡಲ್​ವುಡ್​ ಕ್ಯೂಟ್​ ಬೆಡಗಿ ಅದಿತಿ ಪ್ರಭುದೇವ ಕಾಣಿಸಿಕೊಂಡಿದ್ದಾರೆ. ಇದೀಗ ಕಲರ್ಸ್​ ಕನ್ನಡದಲ್ಲಿ ಸೂಪರ್​ ಜೋಡಿಗಳ ಹಂಗಾಮ ಶುರುವಾಗಲಿದೆ.
ಇದನ್ನೂ ಓದಿ: ಬ್ಯೂಟಿಯ ಸ್ಟೈಲೀಶ್ ಲುಕ್‌ಗೆ ಹುಡುಗರು ಫುಲ್ ಫಿದಾ.. ಸಪ್ತಮಿ ಗೌಡ ನ್ಯೂ ಫೋಟೋಶೂಟ್ ಹೇಗಿದೆ?
ಹೌದು, ಈಗಾಗಲೇ ಪ್ರೊಮೋಗಳ ಮೂಲಕ ವೀಕ್ಷಕರ ಗಮನ ಸೇಳೆದಿರೋ ರಾಜಾರಾಣಿಗೆ ನಟನಾ ಕ್ಷೇತ್ರದ ಬ್ಯೂಟಿಫುಲ್ ಜೋಡಿಗಳು ಎಂಟ್ರಿಯಾಗಿದ್ದಾರೆ. ಕನ್ನಡದ ಬಿಗ್​​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10ರ ಸ್ಪರ್ಧಿಯಾಗಿದ್ದ ವಿನಯ್​ ಗೌಡ ಹಾಗೂ ಪತ್ನಿ ಅಕ್ಷತಾ ರಾಜಾ ರಾಣಿ ಗ್ರಾಂಡ್ ಓಪನಿಂಗ್ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
[caption id="attachment_51391" align="alignnone" width="800"]
ವಿನಯ್​ ಗೌಡ ಹಾಗೂ ಪತ್ನಿ ಅಕ್ಷತಾ[/caption]
ಪುಟ್ಟಕ್ಕನ ಮಕ್ಕಳು ಸೀರಿಯಲ್​ನಲ್ಲಿ ರಾಜೇಶ್ವರಿ ಪಾತ್ರ ಮಾಡುತ್ತಿರೋ ನಟಿ ಹಂಸ ಹಾಗೂ ಪತಿ ಪ್ರತಾಪ್ ಕೂಡ ಈ ಬಾರಿ ರಾಜಾ ರಾಣಿ ಶೋಗೆ ಎಂಟ್ರಿ ಕೊಟ್ಟಿದ್ದಾರೆ.​
[caption id="attachment_67855" align="aligncenter" width="800"]
ನಟಿ ಹಂಸ ಹಾಗೂ ಪತಿ ಪ್ರತಾಪ್[/caption]
ಚುಕ್ಕಿತಾರೆ ಧಾರಾವಾಹಿಯಲ್ಲಿ ನಟಿಸುತ್ತಿರೋ ಹಾಸ್ಯ ಕಲಾವಿದ ಲೋಕೇಶ್​-ರಚನಾ ದಂಪತಿ ರಾಜಾರಾಣಿಗೆ ಕಾಲಿಟ್ಟಿದ್ದಾರೆ. ಇತ್ತೀಚೆಗಷ್ಟೇ ಈ ಜೋಡಿಗೆ ಮುದ್ದಾದ ಗಂಡುಮಗು ಜನಿಸಿದೆ.
[caption id="attachment_67850" align="aligncenter" width="800"]
ನಟ ಲೋಕೇಶ್​ ಹಾಗೂ ರಚನಾ[/caption]
ಇನ್ನು, ಮೊನ್ನೆ ಮೊನ್ನೆಯಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಗಿಚ್ಚಿ ಗಿಲಿಗಿಲಿ ಖ್ಯಾತಿಯ ಪ್ರಿಯಾಂಕಾ ಕಾಮತ್​ ಹಾಗೂ ಅಮೀತ್​ ಈ ಶೋಗೆ ಎಂಟ್ರಿ ಕೊಟ್ಟಿದ್ದಾರೆ.
[caption id="attachment_67848" align="alignnone" width="800"]
ಪ್ರಿಯಾಂಕಾ ಕಾಮತ್​ ಹಾಗೂ ಅಮೀತ್[/caption]
ಇನ್ನು, ಬಿಗ್​​ಬಾಸ್​ ಖ್ಯಾತಿಯ ನಟಿ ಜಯಶ್ರೀ ಆರಾಧ್ಯ ಹಾಗೂ ಪತಿ ಸ್ಟೀವನ್​ ರಾಜಾ ರಾಣಿ ಶೋಗೆ ಬಂದಿದ್ದಾರೆ.
[caption id="attachment_67851" align="aligncenter" width="800"]
ಜಯಶ್ರೀ ಆರಾಧ್ಯ ಹಾಗೂ ಪತಿ ಸ್ಟೀವನ್[/caption]
ಇತ್ತ, ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗುತ್ತಿರೋ ಅಂತರಪಟ ಧಾರಾವಾಹಿ ಖ್ಯಾತಿಯ ನಟ ವಿಠ್ಠಲ್​ ಕಾಮತ್​ ಹಾಗೂ ಶುಭಾ ಜೋಡಿ ಈ ಶೋಗೆ ಬಂದಿದ್ದಾರೆ.
[caption id="attachment_67847" align="aligncenter" width="800"]
ನಟ ವಿಠ್ಠಲ್​ ಕಾಮತ್​ ಹಾಗೂ ಶುಭಾ [/caption]
ಕನ್ನಡದ ಅಣ್ಣ-ತಂಗಿ ಸೀರಿಯಲ್​ ಖ್ಯಾತಿಯ ಮಧು ಸಾಗರ್​ ಹಾಗೂ ಸುಚಿತಾ ದಂಪತಿ ಶೋಗೆ ಎಂಟ್ರಿ ಕೊಟ್ಟಿದ್ದಾರೆ.
[caption id="attachment_67849" align="alignnone" width="800"]
ಮಧು ಸಾಗರ್​ ಹಾಗೂ ಸುಚಿತಾ[/caption]
ಇನ್ನು, ತಮ್ಮ ಅದ್ಭುತ ಡ್ಯಾನ್ಸ್ ಮೂಲಕವೇ ಸಾಕಷ್ಟು ಜನರ ಮನಸ್ಸು ಗೆದ್ದಿರೋ ​ನಟ ಅರ್ಜುನ್​ ಯೋಗಿ ಹಾಗೂ ಪತ್ನಿ ಸಹನಾ ಜೊತೆ ರಾಜಾರಾಣಿ ಶೋಗೆ ಬಲಗಾಲಿಟ್ಟಿದ್ದಾರೆ.
[caption id="attachment_67853" align="aligncenter" width="800"]
​ನಟ ಅರ್ಜುನ್​ ಯೋಗಿ ಹಾಗೂ ಪತ್ನಿ ಸಹನಾ[/caption]
ವಿಶೇಷವೆಂದರೆ ಈ ಬಾರಿ ಸಾಮಾಜಿಕ ಜಾಲತಾಣದಲ್ಲಿ ಕರ್ನಾಟಕ ಜೋಡಿ ಅಂತಾನೇ ಫೇಮಸ್​ ಆಗಿರೋ ಹಿರಿಯ ದಂಪತಿ ಗೋವಿಂದ ರಾಜ್ ಹಾಗೂ ಪತ್ನಿ​ ವೈಲಾ ಕೂಡ ಇರಲಿದ್ದಾರೆ.
[caption id="attachment_67852" align="aligncenter" width="800"]
ಗೋವಿಂದ ರಾಜ್ ಹಾಗೂ ಪತ್ನಿ​ ವೈಲಾ[/caption]
ತಮ್ಮ ಅದ್ಭುತ ಕಾಮಿಡಿ ಮೂಲಕವೇ ಅಭಿಮಾನಿಗಳನ್ನು ಸಂಪಾದಿಸಿದ ಹಾಸ್ಯ ಕಲಾವಿದರಾದ ಕಿರುತೆರೆಯ ಜನಪ್ರಿಯ ಜೋಡಿ ಗೋವಿಂದೇಗೌಡ ಮತ್ತು ದಿವ್ಯಾ ಕೂಡ ಮಸ್ತ್ ಮನರಂಜನೆ ನೀಡಲು ರಾಜಾ ರಾಣಿ ಶೋಗೆ ಎಂಟ್ರಿ ಕೊಟ್ಟಿದ್ದಾರೆ.
[caption id="attachment_67857" align="aligncenter" width="800"]
ಗೋವಿಂದೇಗೌಡ ಮತ್ತು ಪತ್ನಿ ದಿವ್ಯಾ[/caption]
ಒಟ್ಟಿನಲ್ಲಿ ಹತ್ತು ಹಲವು ವಿಶೇಷತೆಗಳ ಜೊತೆಗೆ ಭರ್ಜರಿ ಮನರಂಜನೆಯ ಶಾಟ್​ ನೀಡೋದಕ್ಕೆ ಫುಲ್​​ ಲೋಡೇಡ್​ ಆಗಿ ಬರ್ತಿದೆ ರಾಜಾರಾಣಿ ಶೋ. ಸದ್ಯ ಈ ಶೋವನ್ನು ನೋಡಲು ವೀಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us