/newsfirstlive-kannada/media/post_attachments/wp-content/uploads/2023/12/Auto_Uber.jpg)
ಉಬರ್, ಓಲಾ ಆಟೋಗಳ ದೇಶಾದ್ಯಂತ ಮಹಾನಗರಗಳಲ್ಲಿ ಸೇವೆಯನ್ನು ನೀಡುತ್ತಿವೆ. ಅವರ ಸೇವೆಯ ಬಗ್ಗೆ ಹಲವರು ಐದು ಸ್ಟಾರ್ಗಳನ್ನು ಕೊಟ್ಟು ಹೊಗಳುತ್ತಲೂ ಇದ್ದಾರೆ. ಆದ್ರೆ ಇಂತಹ ಸೇವೆಯನ್ನು ನೀಡುತ್ತಿರುವ ಉಬರ್ ಸಂಸ್ಥೆ ತನ್ನ ಡ್ರೈವರ್ ಮಾಡಿದ ಒಂದು ಯಡವಟ್ಟಿನಿಂದಾಗಿ ಮುಜುಗರಕ್ಕೆ ಈಡಾಗಿದೆ. ಒಲಾ ಉಬರ್ನಂತಹ ಆಟೋಗಳು ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ಎಷ್ಟು ಸರಿ ಎಂಬ ಪ್ರಶ್ನೆ ಮತ್ತೆ ಮೂಡುವಂತ ಘಟನೆಯೊಂದು ದೆಹಲಿಯಲ್ಲಿ ನಡೆದಿದೆ.
ತಾನಿಯಾ ಶರ್ಮಾ ಎಂಬ ಯುವತಿ ಬೌದ್ಧಿಕ ಆಸ್ತಿ ಹಕ್ಕುಗಳ (ಐಪಿಆರ್) ನ ವಕೀಲೆ ಲಿಂಕ್ಡ್ ಇನ್ನಲ್ಲಿ ತಮಗಾದ ಹೀನಾಯ ಅನುಭವವನ್ನು ಹಂಚಿಕೊಂಡಿದ್ದಾರೆ. ಉಬರ್ ಆಟೋ ಡ್ರೈವರ್ ಆಕೆಯೊಂದಿಗೆ ದುರ್ವರ್ತನೆಯಿಂದ ನಡೆದುಕೊಂಡ ರೀತಿಯನ್ನು ಹಂಚಿಕೊಂಡಿದ್ದಾರೆ. ಘಟನೆ ಎಲ್ಲಿ ನಡೆಯಿತು ಎಂಬ ಬಗ್ಗೆ ತಾನಿಯಾ ಯಾವುದೇ ವಿವರ ಕೊಟ್ಟಿಲ್ಲ. ಆದ್ರೆ ಅವರ ಲಿಂಕ್ಡ್ ಇನ್ ಪ್ರೊಫೈಲ್ನಲ್ಲಿ ಆದ ಘಟನೆಯನ್ನು ವಿವರಿಸಿದ್ದಾರೆ.
ಉಬರ್ ಆ್ಯಪ್ನಲ್ಲಿ ಶರ್ಮಾ ಆಟೋವನ್ನು ಬುಕ್ ಮಾಡಿದ್ದರು ಈ ವೇಳೆ ಈ ವೇಳೆ ಆಟೋ ಡ್ರೈವರ್ ತಾನಿಯಾ ಮೊಬೈಲ್ಗೆ ಅಶ್ಲೀಲ ಸಂದೇಶ ಕಳುಹಿಸಿ ದುರ್ವರ್ತನೆ ತೋರಿದ್ದಾನೆ. ಆಟೋ ಬುಕ್ ಆದ ಕ್ಷಣದಲ್ಲಿಯೇ ಡ್ರೈವರ್ ಜಲ್ದಿ ಆವೋ ಬಾಬು, ಯಾರ್ ಮನ್ ಹೋ ರಹಾ ಹೈ ಎಂದು ಹಿಂದಿಯಲ್ಲಿ ಟೆಕ್ಷ್ಟ್ ಕಳುಹಿಸಿದ್ದಾನೆ. ಅಂದ್ರೆ ಬೇಗ ಬಾ ಜಾನು.. ನನಗೆ ಮೂಡ ಬರ್ತಾ ಇದೆ ಎಂದರ್ಥ. ಇದನ್ನು ಕಂಡು ವಿಚಲಿತಗೊಂಡ ತಾನಿಯಾ ಶರ್ಮಾ ರೈಡ್ ಕ್ಯಾನ್ಸಲ್ ಮಾಡಿದ್ದು ಉಬರ್ಗೆ ದೂರನ್ನು ಸಹ ನೀಡಿದ್ದಾರೆ.
ಇದನ್ನೂ ಓದಿ:8 ವರ್ಷ, 40 ಸಾವಿರ ಗಿಡಗಳು.. ಬೋಳು ಬೆಟ್ಟವನ್ನೇ ನಿತ್ಯ ಹರಿದ್ವರ್ಣದ ಕಾಡು ಮಾಡಿದ ಭೂಪ; ಯಾರಿವನು?
ಲಿಂಕ್ಡ್ ಇನ್ನಲ್ಲಿ ಸಂಪೂರ್ಣ ವಿವರ ಬರೆದಿರುವ ತಾನಿಯಾ ಶರ್ಮಾ ಇದೊಂದು ನಿಜಕ್ಕೂ ಆತಂಕಕಾರಿ ಹಾಗೂ ಕರುಣಾಜನಕ ಸ್ಥಿತಿ ಎಂದು ಹೇಳಿದ್ದಾರೆ. ಇದನ್ನು ಕಂಡ ಜನರು ಉಬರ್ ಇಂಡಿಯಾ ವಿರುದ್ಧ ಛೀ ಥೂ ಎಂದು ಉಗಿಯುತ್ತಿದ್ದಾರೆ. ಇನ್ನು ತಾನಿಯಾ ನೀಡಿದ ದೂರಿಗೆ ಸ್ಪಂದಿಸಿದ ಉಬರ್, ನಾವು ಕೂಡಲೇ ಇದನ್ನು ವಿಚಾರಣೆ ಮಾಡುತ್ತೇವೆ. ಈ ಬಗ್ಗೆ ಮಾಹಿತಿಯನ್ನು ಕಲೆ ಹಾಕುತ್ತೇವೆ. ಕೇವಲ 30 ನಿಮಿಷಗಳಲ್ಲಿ ನಾವು ನಿಮ್ಮನ್ನು ಸಂಪರ್ಕಿಸುತ್ತೇವೆ ಎಂದು ಹೇಳಿದೆ. ಯಾವಾಗಾ ತಾನಿಯಾಗೆ ದೊಡ್ಡ ಮಟ್ಟದ ಬೆಂಬಲ ವ್ಯಕ್ತವಾಯಿತೋ ಉಬರ್ ಆ ಡ್ರೈವರ್ನನ್ನು ತನ್ನ ಕಂಪನಿಯಂದ ಶಾಶ್ವತವಾಗಿ ಬ್ಯಾನ್ ಮಾಡಿರುವುದಾಗಿ ಹೇಳಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ