ಗಿಚ್ಚಿ ಗಿಲಿಗಿಲಿ ಮಾನಸಗೆ ಸ್ಪೆಷಲ್​ ಗಿಫ್ಟ್​ ಕೊಟ್ಟ ಹಾಸ್ಯನಟ ರಾಘವೇಂದ್ರ.. ಏನದು ನೀವೇ ನೋಡಿ!

author-image
Veena Gangani
ಗಿಚ್ಚಿ ಗಿಲಿಗಿಲಿ ಮಾನಸಗೆ ಸ್ಪೆಷಲ್​ ಗಿಫ್ಟ್​ ಕೊಟ್ಟ ಹಾಸ್ಯನಟ ರಾಘವೇಂದ್ರ.. ಏನದು ನೀವೇ ನೋಡಿ!
Advertisment
  • ರಾಗಿಣಿ ಅಲಿಯಾಸ್ ರಾಘವೇಂದ್ರ ಮಾನಸಗೆ ಕೊಟ್ಟ ಗಿಫ್ಟ್ ಏನು?
  • ಅದ್ಭುತ ಅಭಿನಯದ ಮೂಲಕವೇ ರಾಗಿಣಿ ಸಖತ್ ಫೇಮಸ್​
  • ಗಿಚ್ಚಿ ಗಿಲಿಗಿಲಿ ಮೂಲಕ ಸಖತ್​ ಫೇಮಸ್​ ಆಗಿದ್ದ ನಟಿ ಮಾನಸ

ಕನ್ನಡ ಕಿರುತೆರೆ ಲೋಕದಲ್ಲಿ ತಮ್ಮ ಅದ್ಭುತ ಅಭಿನಯದ ಮೂಲಕ ಎಲ್ಲರ ಮನೆ ಮಾತಾಗಿರೋ ಯುವನಟ ಎಂದರೆ ಅದು ರಾಘವೇಂದ್ರ. ಮಜಾ ಭಾರತ, ಗಿಚ್ಚಿ ಗಿಲಿಗಿಲಿ ಮೂಲಕ ರಾಗಿಣಿ ಎಂಬ ಹೆಸರನ್ನು ಪಡೆದುಕೊಂಡಿದ್ದರು ರಾಘವೇಂದ್ರ. ಇವರ ನಿಜವಾದ ಹೆಸರು ಯಾರಿಗೂ ಗೊತ್ತಿಲ್ಲ. ಏಕೆಂದರೆ ರಾಘು ಅವರು ಫೇಮಸ್​ ಆಗಿದ್ದೇ ರಾಗಿಣಿ ಎಂಬ ಹೆಸರಿನ ಮೂಲಕ.

publive-image

ಈ ವಿಚಾರ ಹೇಳೋದಕ್ಕೆ ಒಂದು ಕಾರಣವಿದೆ. ಹೌದು, ಮಜಾ ಭಾರತ, ಗಿಚ್ಚಿ ಗಿಲಿಗಿಲಿ ಮೂಲಕ ಈ ಇಬ್ಬರು ಫೇಮಸ್​ ಆದ್ರು. ತಮ್ಮ ಅದ್ಭುತ ಅಭಿನಯದ ಮೂಲಕವೇ ಅಭಿಮಾನಿಗಳನ್ನು ಸಂಪಾದಿಸಿಕೊಂಡರು. ಅಲ್ಲದೇ ಸೋಷಿಯಲ್​ ಮೀಡಿಯಾದಲ್ಲಿ ಸದಾ ಜೋಡಿಯಾಗಿ ರೀಲ್ಸ್​ ಮಾಡಿ ಅಲ್ಲು ಫೇಮಸ್ ಆಗಿದ್ದಾರೆ. ಅವರು ಬೇರೆ ಯಾರು ಅಲ್ಲ, ಮಜಾ ಭಾರತ, ಗಿಚ್ಚಿ ಗಿಲಿಗಿಲಿ ಖ್ಯಾತಿಯ ಮಾನಸ ಹಾಗೂ ರಾಘವೇಂದ್ರ.

ಇದನ್ನೂ ಓದಿ:ಶೆಫಾಲಿ ಜೀವಬಿಟ್ಟಿದ್ದು ಹೃದಯಾಘಾತದಿಂದ ಅಲ್ವಾ? ನಟಿಯ ಸಾವಿನ ಹಿಂದೆ ಹಲವು ಅನುಮಾನ..!

publive-image

ಮಜಾ ಭಾರತ, ಗಿಚ್ಚಿ ಗಿಲಿಗಿಲಿ ಶೋ ಮೂಲಕವೇ ಇಬ್ಬರು ಒಳ್ಳೆಯ ಬಾಂಧವ್ಯ ಇಟ್ಟುಕೊಂಡಿದ್ದರು. ಎಷ್ಟರ ಮಟ್ಟಿಗೆ ಎಂದ್ರೆ ಸ್ವಂತ ಅಕ್ಕ ತಮ್ಮನ ಹಾಗೇ. ಇನ್ನೂ ಮೊನ್ನೆಯಷ್ಟೇ ಹಾಸ್ಯ ನಟಿ ಮಾನಸ ಅವರ ಹುಟ್ಟುಹಬ್ಬವಿತ್ತು. ಹೀಗಾಗಿ ರಾಘವೇಂದ್ರ ಅವರು ಪ್ರೀತಿಯ ಅಕ್ಕನಿಗೆ ಒಂದು ಸ್ಪೆಷಲ್​ ಗಿಫ್ಟ್​ ಅನ್ನು ಕೊಟ್ಟಿದ್ದಾರೆ.

ಎಷ್ಟು ಸ್ಪೆಷಲ್ ಅಂದ್ರೆ, ಆ ಕಪ್​ನಲ್ಲಿ ಬಿಸಿ ನೀರು ಹಾಕಿದ್ರೆ ಅದರ ಮೇಲೆ ಮಾನಸ ಅವರ ಫೋಟೋ ಗೋಚರವಾಗುತ್ತದೆ. ಅದಕ್ಕೆ ಮ್ಯಾಜಿಕ್​ ಮಗ್ ಎಂದು ಕರೆಯಲಾಗುತ್ತದೆ. ಇದನ್ನೇ ರಾಘವೇಂದ್ರ ಗಿಫ್ಟ್​ ಆಗಿ ಕೊಟ್ಟಿದ್ದಾರೆ. ಇದೇ ವಿಡಿಯೋವನ್ನು ಹಂಚಿಕೊಂಡ ಮಾನಸ ನಮ್ಮಿಬ್ಬರ ನಡುವಿನ ಬಾಂಧವ್ಯ ಅನನ್ಯ ಮತ್ತು ಅತ್ಯಂತ ಅಮೂಲ್ಯವಾದದ್ದು ರಾಘು. ಇದು ಅಣ್ಣ-ತಂಗಿಗಿಂತ ಹೆಚ್ಚು. ಸ್ನೇಹಿತನಿಗಿಂತ ಹೆಚ್ಚು. ನಾವು ಒಬ್ಬರನ್ನೊಬ್ಬರು ಕೀಟಲೆ ಮಾಡುತ್ತೇವೆ. ನಾವು ಒಬ್ಬರನ್ನೊಬ್ಬರು ಪ್ರೋತ್ಸಾಹಿಸುತ್ತೇವೆ ಮತ್ತು ಪ್ರಶಂಸಿಸುತ್ತೇವೆ. ನಾವು ಒಟ್ಟಿಗೆ ಇರುವಾಗ ಅದು ಲೆಕ್ಕವಿಲ್ಲದಷ್ಟು ನೆನಪುಗಳು. ಬಹಳಷ್ಟು ನಗು. ಎಲ್ಲದಕ್ಕೂ ಧನ್ಯವಾದಗಳು ನನ್ನ ಸೂಪರ್ ಪ್ರತಿಭಾನ್ವಿತ ಚಿಕ್ಕ ಸಹೋದರ ಎಂದು ಬರೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment