/newsfirstlive-kannada/media/post_attachments/wp-content/uploads/2025/05/Shivaraj-kr-pete-nayana-on-rakesh-poojary.jpg)
ಕಾಮಿಡಿ ಕಿಲಾಡಿ ನಟ ರಾಕೇಶ್ ಪೂಜಾರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಉಡುಪಿಯಲ್ಲಿ ಇಂದು ಕುಟುಂಬಸ್ಥರು, ಆಪ್ತರು, ಸಾವಿರಾರು ಜನ ಅಗಲಿದ ಕಲಾವಿದನಿಗೆ ಭಾವುಕ ವಿದಾಯ ಹೇಳಿದ್ದಾರೆ. ಹೂಡೆ ಬೀಚ್ ಪಕ್ಕದಲ್ಲಿ ರಾಕೇಶ್ ಪೂಜಾರಿ ಅಂತ್ಯಕ್ರಿಯೆ ನೆರವೇರಿದೆ.
/newsfirstlive-kannada/media/post_attachments/wp-content/uploads/2025/05/Rakesh-poojari-2.jpg)
ರಾಕೇಶ್ ಪೂಜಾರಿ ಅಂತಿಮ ದರ್ಶನಕ್ಕೆ ಹಲವಾರು ಕಿರುತರೆಯ ನಟ, ನಟಿಯರು ಉಡುಪಿಗೆ ಆಗಮಿಸಿದ್ದರು. ರಾಕೇಶ್ ಅಂತಿಮ ದರ್ಶನ ಪಡೆದ ನಟಿ ನಯನಾ ಅವರು ನಾವು ಒಬ್ಬ ಒಳ್ಳೆ ಗೆಳೆಯನನ್ನು ಕಳೆದುಕೊಂಡೆವು. ರಾಕೇಶ್ ಅಪ್ಪನ ಹಾಗೆ, ಮನಸ್ಸು ಮಗುವಿನ ಹಾಗೆ. ನಾವೆಲ್ಲ ನಟ, ನಟಿಯರು ರಾಕೇಶ್ ಕುಟುಂಬದ ಜೊತೆ ಇದ್ದೇವು ಎಂದು ಕಣ್ಣೀರು ಹಾಕಿದರು.
ರಾಕೇಶ್ ಪೂಜಾರಿ ಒಬ್ಬ ಅಜಾತಶತ್ರು. ನನಗೆ ದೇವರ ಮೇಲೆ ಇದ್ದ ಸ್ವಲ್ಪ ನಂಬಿಕೆಯು ಹೊರಟು ಹೋಯಿತು. ಹೆಸರು, ದುಡ್ಡು ಅಂತ ಸಾಯ್ಬೇಡಿ ಅಂತ ಯಾವತ್ತು ಹೇಳುತ್ತಿದ್ದ. ಜೀವನದಲ್ಲಿ ಹೇಗಿದ್ದ ಹಾಗೆ ಸ್ಟೇಜ್ ಮೇಲೆ ಬರುತ್ತಿದ್ದ. ಅವನ ಜೊತೆ ಬಹಳ ದಿನ ಇರಲು ಪುಣ್ಯ ನಮಗೆ ಇಲ್ಲ.
ತಂಗಿಯ ಮದುವೆ ಮಾಡಬೇಕು ಎಂಬುದೇ ಆತನ ದೊಡ್ಡ ಕನಸಾಗಿತ್ತು. ಅವನ ಜೀವನದ ಒಂದೇ ಒಂದು ಆಸೆ ತಂಗಿಯ ಮದುವೆ ತುಂಬಾ ಗ್ರ್ಯಾಂಡ್ ಆಗಿ ಆಗಬೇಕು ಅನ್ನೋದಾಗಿತ್ತು. ಕಲಾವಿದರೆಲ್ಲರು ರಾಕೇಶ್ ಪೂಜಾರಿ ಕುಟುಂಬಕ್ಕೆ ಸಹಾಯ ಮಾಡಬೇಕು ಎಂದು ನಯನಾ ಕೇಳಿಕೊಂಡಿದ್ದಾರೆ.
ಇದೇ ವೇಳೆ ನಟ ಶಿವರಾಜ್ ಕೆ.ಆರ್ ಪೇಟೆ ಅವರ ರಾಕೇಶ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ನಾವು ನಮ್ಮ ಕುಟುಂಬದ ಕೂಸನ್ನು ಕಳೆದುಕೊಂಡಿದ್ದೇವೆ. ರಾಕೇಶ್ ಅಂದ್ರೆ ನಗು ನಗು ನಗು ನಗು ಬಿಟ್ಟು ಬೇರೆ ಏನಿಲ್ಲ. ಎಷ್ಟೇ ಸೀಸನ್‌ಗಳಾದರೂ ನಾವೆಲ್ಲರೂ ಕುಟುಂಬದಂತೆ ಕೆಲಸ ಮಾಡಿದ್ದೆವು. ರಾಕೇಶ್ ಪೂಜಾರಿ ತಂದೆಯನ್ನು ಕಳೆದುಕೊಂಡ ನಂತರ ಮನೆಗೆ ಆಧಾರ ಸ್ತಂಭವಾಗಿದ್ದ.
ಕಾಮಿಡಿ ಕಿಲಾಡಿ, ಚಾಂಪಿಯನ್ ಶಿಪ್ ಎಲ್ಲದರಲ್ಲೂ ನಾವು ಕುಟುಂಬ. ರಾಕೇಶ್ ತಂಗಿ ಮತ್ತು ತಾಯಿ ಜೊತೆ ನಾವು ಇದ್ದೇವೆ. ಸಂಪೂರ್ಣವಾಗಿ ಬೆಂಬಲ ನೀಡುತ್ತೇವೆ. ರಾಕೇಶ್ ಕುಟುಂಬಕ್ಕೆ ಎಲ್ಲರೂ ಸಹಾಯ ಮಾಡಬೇಕಾಗಿದೆ ಎಂದು ಶಿವರಾಜ್ ಕೆ.ಆರ್ ಪೇಟೆ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us