/newsfirstlive-kannada/media/post_attachments/wp-content/uploads/2025/05/Rakesh-poojari-duniya-Vijay.jpg)
ಕಾಮಿಡಿ ಕಿಲಾಡಿ ಖ್ಯಾತಿಯ ರಾಕೇಶ್ ಪೂಜಾರಿ ಅವರ ಘೋರ ದುರಂತ ಇನ್ನೂ ಕನ್ನಡಿಗರ ಮನಸಿನಲ್ಲಿ ಆಗೇ ಉಳಿದಿದೆ. ಪ್ರತಿಭಾವಂತ ಕಲಾವಿದ ಚಿಕ್ಕ ವಯಸ್ಸಿಗೆ ಹೃದಯಾಘಾತಕ್ಕೆ ಕೊನೆ ಉಸಿರೆಳೆದಿದ್ದು ಸಹಿಸಿಕೊಳ್ಳಲಾಗದ ಆಘಾತವಾಗಿದೆ. ರಾಕಿ ನೆನಪಿನಲ್ಲಿರುವ ಅವರ ಕುಟುಂಬಸ್ಥರಿಗೆ ಆಪ್ತರು, ಸ್ನೇಹಿತರು, ಕನ್ನಡ ಚಿತ್ರರಂಗದ ಹಲವು ನಟರು ಸಂತಾಪ ಸೂಚಿಸುತ್ತಿದ್ದಾರೆ.
ನಟ, ನಿರ್ದೇಶಕ ದುನಿಯಾ ವಿಜಯ್ ಅವರು ರಾಕೇಶ್ ಪೂಜಾರಿ ಸಾವಿಗೆ ಕಂಬನಿ ಮಿಡಿದಿದ್ದಾರೆ. ನ್ಯೂಸ್ ಫಸ್ಟ್ ಜೊತೆ ಮಾತನಾಡಿರುವ ಅವರು ರಾಕಿ ಸಾವು ನಿಜಕ್ಕೂ ಬೇಸರ ತರಿಸಿದೆ. ನಾನೂ ಅವನ ಕಾಮಿಡಿ ವಿಡಿಯೋಸ್ ನೋಡುತ್ತಿದ್ದೆ. ಅವನು ನಗೋ ಸ್ಟೈಲ್ ನನಗೆ ಇಷ್ಟ. ಅವನ ಸಾವಿನ ದುಃಖ ತಡೆದುಕೊಳ್ಳುವ ಶಕ್ತಿ ಆ ತಾಯಿಗೆ ಸಿಗಲಿ ಎಂದಿದ್ದಾರೆ.
ಇದನ್ನೂ ಓದಿ: ನಕ್ಕು ನಲಿಸಿದ್ದ ರಾಕೇಶ್ ಪೂಜಾರಿ ನೆನಪು; ರಾಕಿ ಕಂಡ ಕನಸಿಗೆ ಪಣ ತೊಟ್ಟ ಸ್ನೇಹಿತರು; ಏನಂದ್ರು?
ರಾಕೇಶ್ ತಂಗಿಯ ಮದುವೆ ಮಾಡಲು ಅವನ ಸ್ನೇಹಿತರು ಅವರ ಕುಟುಂಬದ ಜೊತೆ ನಿಂತಿದ್ದಾರೆ. ರಾಕಿ ತಂಗಿಯ ಮದುವೆಗೆ ನಾನೂ ಸಹಾಯ ಮಾಡ್ತೀನಿ ಎಂದು ದುನಿಯಾ ವಿಜಯ್ ಭರವಸೆ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ