ನಕ್ಕು ನಲಿಸಿದ್ದ ರಾಕೇಶ್ ಪೂಜಾರಿ ನೆನಪು; ರಾಕಿ ಕಂಡ ಕನಸಿಗೆ ಪಣ ತೊಟ್ಟ ಸ್ನೇಹಿತರು; ಏನಂದ್ರು?

author-image
admin
Updated On
ನಕ್ಕು ನಲಿಸಿದ್ದ ರಾಕೇಶ್ ಪೂಜಾರಿ ನೆನಪು; ರಾಕಿ ಕಂಡ ಕನಸಿಗೆ ಪಣ ತೊಟ್ಟ ಸ್ನೇಹಿತರು; ಏನಂದ್ರು?
Advertisment
  • ಕಾಮಿಡಿ ಜೊತೆಗೆ ಅವನ ಮುಗ್ಧ ಮನಸು ನಮಗೆಲ್ಲಾ ಬಹಳ ಇಷ್ಟ
  • ರಾಕಿಯ ಸ್ನೇಹಿತರು, ಕುಟುಂಬಸ್ಥರು ಆ ಶಾಕ್‌ನಿಂದ ಹೊರ ಬಂದಿಲ್ಲ
  • ರಾಕೇಶ್ ತಂದೆಯನ್ನು ಕಳೆದುಕೊಂಡ ಮೇಲೆ ಮನೆಗೆ ಆಧಾರವಾಗಿದ್ದ

ಎಲ್ಲರನ್ನು ನಕ್ಕು ನಲಿಸುತ್ತಿದ್ದ ಕಾಮಿಡಿ ಕಲಾವಿದ ರಾಕೇಶ್ ಪೂಜಾರಿ ಇನ್ನು ನೆನಪು ಮಾತ್ರ. ಕಾಮಿಡಿ ನಟ ಬದುಕು ದುರಂತ ಅಂತ್ಯವಾಗಿದ್ದು, ರಾಕೇಶ್ ಪೂಜಾರಿಯ ಸ್ನೇಹಿತರು, ಕುಟುಂಬಸ್ಥರು, ಕನ್ನಡ ಕಿರುತೆರೆಯ ಲೋಕ ಆ ಶಾಕ್‌ನಿಂದ ಹೊರ ಬಂದಿಲ್ಲ.

ಆ ನಗು, ನಗುವಿನ ಜೊತೆ ರಾಕೇಶ್ ಪೂಜಾರಿ ಇದ್ದರೆ ಅದೇನೋ ಹೊಸ ಉತ್ಸಾಹ. ಕಾಮಿಡಿ ಜೊತೆಗೆ ಅವನ ಮುಗ್ಧ ಮನಸು ನಮಗೆಲ್ಲಾ ಬಹಳ ಇಷ್ಟವಾಗಿತ್ತು. ಆದರೆ ರಾಕೇಶ್ ಪೂಜಾರಿ ಇಂದು ನಮ್ಮೊಂದಿಗಿಲ್ಲ ಅನ್ನೋದನ್ನ ನಾವು ಊಹಿಸಿಕೊಳ್ಳಲು ಆಗಲ್ಲ ಎಂದು ರಾಕಿ ಸ್ನೇಹಿತರು ಹೇಳುತ್ತಿದ್ದಾರೆ.

publive-image

ಎಲ್ಲರ ನಗಿಸುತ್ತಿದ್ದ ಕಾಮಿಡಿ ಕಿಲಾಡಿ ರಾಕೇಶ್ ಪೂಜಾರಿ ಈಗ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾನೆ. ರಾಕೇಶ್ ಅಕಾಲಿಕ ಮರಣದಿಂದ ಕನ್ನಡ ಸಿನಿಮಾ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಉದಯೋನ್ಮುಖ, ಅದ್ಭುತ ನಟನನ್ನ ನಾವೆಲ್ಲಾ ಕಳೆದುಕೊಂಡಿದ್ದೇವೆ. ರಾಕಿ ತುಂಬಾ ಪ್ರೀತಿಯ, ಮಗುವಿನ ಹೃದಯದವನು ಎಂದಿದ್ದಾರೆ.

publive-image

ರಾಕೇಶ್ ಪೂಜಾರಿ ನೆನಪಿನ ಬಗ್ಗೆ ನ್ಯೂಸ್ ಫಸ್ಟ್ ಜೊತೆ ರಾಕಿ ಆಪ್ತ ಸ್ನೇಹಿತರಾದ ಪ್ರವೀಣ್ ಜೈನ್, ಮನೋಹರ್, ಸದಾನಂದ, ಅನೀಶ್, ಮಂಥನ ಸೇರಿದಂತೆ ಹಲವಾರು ಕಲಾವಿದರು ಮಾತನಾಡಿದ್ದಾರೆ.

ಇದನ್ನೂ ಓದಿ: ಪ್ರೀತಿಯ ತಮ್ಮ.. ರಾಕೇಶ್​ ಪೂಜಾರಿಗೆ ನಿರೂಪಕಿ ಅನುಶ್ರೀ ಕಣ್ಣೀರಿನ ವಿದಾಯ; ಹೇಳಿದ್ದೇನು? 

ರಾಕೇಶ್‌ಗೆ ಏನಾಗಿತ್ತು?
ರಾಕೇಶ್ ಪೂಜಾರಿ ಇತ್ತೀಚಿಗಷ್ಟೆ ತಂದೆಯನ್ನು ಕಳೆದುಕೊಂಡು ನೊಂದಿದ್ದ. ತಂಗಿಯ ಮದುವೆಯೇ ಅವನ ಬಹಳ ದೊಡ್ಡ ಕನಸಾಗಿತ್ತು. ರಾಕೇಶ್​ಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ದಿಢೀರ್​ ಹೀಗೆ ಆಗಿರೋದು ಆಘಾತವನ್ನ ಉಂಟುಮಾಡಿದೆ ಎಂದು ರಾಕೇಶ್​ ಪೂಜಾರಿಯ ಸ್ನೇಹಿತರು ಹೇಳಿದ್ದಾರೆ.

publive-image

ರಾಕೇಶ್ ಪೂಜಾರಿಯ ನಿಧನ ಅವರ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ. ತಾಯಿ, ತಂಗಿಗೆ ಸಾಂತ್ವನ ಹೇಳೋದು ಕಷ್ಟವಾಗಿದೆ. ಆದರೆ ಸ್ನೇಹಿತರು, ಕಿರುತೆರೆಯ ಹಲವು ಕಲಾವಿದರು ರಾಕೇಶ್‌ ಕಂಡ ಕನಸುಗಳ ನನಸಿಗೆ ಪಣ ತೊಟ್ಟಿದ್ದಾರೆ. ರಾಕೇಶ್ ಪೂಜಾರಿ ತಂಗಿಯ ಮದುವೆಗೆ ನಾವು ಸಾಥ್ ನೀಡುತ್ತೇವೆ ಅನ್ನೋ ಭರವಸೆಯ ಮಾತುಗಳನ್ನಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment