ಸ್ಪೆಷಲ್​ ಟ್ಯಾಟೂ ಹಾಕಿಸಿಕೊಂಡ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನ; ಅದರಲ್ಲೇನಿದೆ?

author-image
Veena Gangani
ಸ್ಪೆಷಲ್​ ಟ್ಯಾಟೂ ಹಾಕಿಸಿಕೊಂಡ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನ; ಅದರಲ್ಲೇನಿದೆ?
Advertisment
  • ಕಾಮಿಡಿ ಕಿಲಾಡಿಗಳು ಮೂಲಕ ಫೇಮಸ್ ಆಗಿದ್ದ ನಟಿ
  • ತಾನು ಇಷ್ಟ ಪಡುವ ಮೂವರ ಹೆಸರು ಒಂದೇ ಫ್ರೇಮ್​ನಲ್ಲಿ!
  • ‘ತುಂಬಾ ವರ್ಷಗಳಿಂದ ಟ್ಯಾಟೂ ಹಾಕಿಸಿಕೊಳ್ಳೋ ಆಸೆ ಇತ್ತು’

ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟಿ ನಯನಾ ಸಖತ್ ಖುಷಿಯಲ್ಲಿದ್ದಾರೆ. ಹೌದು, ನಟಿ ನಯನಾ ಅವರು ಎದೆಯ ಮೇಲೆ ಸ್ಪೆಷಲ್​ ಟ್ಯಾಟೂವೊಂದನ್ನು ಹಾಕಿಸಿಕೊಂಡಿದ್ದಾರೆ. ಸ್ಪೆಷಲ್​ ಟ್ಯಾಟೂ ಹಾಕಿಸಿಕೊಂಡಿರೋ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: BBK12: ಕಿಚ್ಚ ಸುದೀಪ್​ ಫ್ಯಾನ್ಸ್​ಗೆ ಗುಡ್​ನ್ಯೂಸ್​.. ಬಿಗ್​ಬಾಸ್​ 12ಕ್ಕೆ ಕಂಬ್ಯಾಕ್ ಆಗೋ ಸುಳಿವು ಕೊಟ್ರಾ?

publive-image

ತುಂಬಾ ವರ್ಷಗಳಿಂದ ಟ್ಯಾಟೂ ಹಾಕಿಸಿಕೊಳ್ಳಬೇಕು ಅಂತ ಆಸೆ ಇತ್ತು. ಎಲ್ಲಿ ನೋವು ಆಗುತ್ತೆ ಅನ್ನೋ ಭಯಕ್ಕೆ ಹಾಕಿಸಿಕೊಂಡಿರಲಿಲ್ಲ. ಮೂರು ಬಾರಿ ಹೋಗಿ ಮತ್ತೆ ಭಯ ಆಗಿ ವಾಪಸ್ ಬಂದಿದ್ದೆ.

ಕೊನೆಗೂ ಬ್ಯೂಟಿಫುಲ್​ ಆಗಿರೋ ಟ್ಯಾಟೂ ಹಾಸಿಕೊಂಡಿದ್ದೀನಿ. ನನ್ನ ಪತಿ, ನನ್ನ ಮಗು ಹಾಗೂ ನಾನು ಇಷ್ಟ ಪಡೋ ದೇವರು ಕೃಷ್ಣನ ಕೊಳಲು ಈ ಮೂವರು ಒಂದೇ ಫ್ರೇಮ್​ನಲ್ಲಿ ಬರಬೇಕಾಗಿತ್ತು. ನಾನು ಹೇಳಿದ ಹಾಗೇ ಅವರು ಟ್ಯಾಟೂ ಹಾಕಿದ್ದಾರೆ, ನನಗೆ ಸಖತ್ ಖುಷಿ ಆಯ್ತು ಅಂತ ಹೇಳಿಕೊಂಡಿದ್ದಾರೆ. ​

9 ವರ್ಷಗಳ ಪ್ರೀತಿಸಿ ನಟಿ ನಯನಾ ಬೆಂಗಳೂರು ಮೂಲದ ಉದ್ಯಮಿ ಶರತ್ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆ ಬಳಿಕವೂ ನಟಿ ನಯನ ಸಿನಿಮಾ ಹಾಗೂ ಶೋಗಳಲ್ಲಿ ನಟಿಸಿ ಮೆಚ್ಚುಗೆ ಗಳಿಸಿದ್ರು. ಇನ್ನೂ ನಟಿಗೆ ಒಂದು ಮುದ್ದಾದ ಮಗಳಿದ್ದಾಳೆ.

publive-image

ಇನ್ನೂ, ಕಾಮಿಡಿ ಕಿಲಾಡಿಗಳು ಮೂಲಕ ಕರ್ನಾಟಕದಾದ್ಯಂತ ಪ್ರಸಿದ್ಧಿಯಾಗಿದ್ದಾರೆ ನಯನಾ. ಇವರು ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟಿ. ಹುಬ್ಬಳ್ಳಿ ಮೂಲದ ನಯನಾರ ತಂದೆ ಪೇಂಟ್ ಕಾಂಟ್ರಾಕ್ಟರ್ ಅಗಿದ್ದರು ಮತ್ತು ತಾಯಿ ಕೃಷಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಅದ್ಭುತ ನಟನೆಯ ಮೂಲಕ ನಯನಾ ಅಭಿಮಾನಿಗಳ ಮನಗೆದ್ದರು. ಅನೇಕ ಸಿನಿಮಾಗಳಲ್ಲಿ ನಟಿ ನಯನಾ ನಟಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment