/newsfirstlive-kannada/media/post_attachments/wp-content/uploads/2025/05/Rakesh-Poojary13.jpg)
ಕಾಮಿಡಿ ಕಿಲಾಡಿಗಳು ಸೀಸನ್​ 3ರ ಮೂಲಕ ಜನಪ್ರಿಯತೆ ಪಡೆದ ಅದ್ಭುತ ನಟ ರಾಕೇಶ್​ ಪೂಜಾರಿ. ಸೀಸನ್​ ವಿನ್ನರ್​ ಆಗಿ ಗೆಲುವಿನ ನಗೆ ಬಿರಿರೋ ರಾಕೇಶ್ ಅವರು ಕುಟುಂಬಕ್ಕೆ ಆಸರೆ ಆಗಿದ್ದರು.
ಇದನ್ನೂ ಓದಿ:Breaking: ಕಾಮಿಡಿ ಕಿಲಾಡಿಗಳು ಸೀಸನ್ 3ರ ವಿನ್ನರ್ ರಾಕೇಶ್ ಪೂಜಾರಿ ಇನ್ನಿಲ್ಲ
/newsfirstlive-kannada/media/post_attachments/wp-content/uploads/2025/05/Rakesh-Poojary15.jpg)
ಇಷ್ಟೆ ಅಲ್ಲದೇ ಭರ್ಜರಿ ಬ್ಯಾಚುಲರ್ಸ್​ ವೇದಿಕೆಯಲ್ಲೂ ಛಾಪು ಮೂಡಿಸಿದ್ರು. ಕನ್ನಡತಿ ಖ್ಯಾತಿಯ ನಟಿ ಆರೋಹಿ ಜೋಡಿ ಆಗಿ ಮಿಂಚಿದ್ದರು. ಸರಿಗಮಪ, ಡಿಕೆಡಿ ಸ್ಪೂಫ್​ಗಳಲ್ಲಿ ಅರ್ಜುನ್​ ಜನ್ಯ ಅವರನ್ನ ಅದ್ಭುತವಾಗಿ ಇಮಿಟೇಟ್​ ಕೂಡ ಮಾಡುತ್ತಿದ್ದರು ರಾಕೇಶ್​. ಆದ್ರೆ, ಇವತ್ತಿಗೂ ಜನ್ಯಾಜಿ ಇಮಿಟೇಶನ್​ ಅಂದ್ರೇ ನೆನಪಾಗೋದೇ ರಾಕೇಶ್​ ಹೆಸರು ಮಾತ್ರ. ಆದ್ರೆ ವೀಕ್ಷಕರನ್ನು ನಕ್ಕು ನಗಿಸಿ.. ನಗು ನಗುತ್ತಲೇ ಇಹಲೋಕ ತ್ಯಜಿಸಿದ್ದಾರೆ.
/newsfirstlive-kannada/media/post_attachments/wp-content/uploads/2025/05/Rakesh-Poojary14.jpg)
ಇನ್ನೂ, ರಾಕೇಶ್​ ಪೂಜಾರಿ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ನಟ ಗೋವಿಂದೇ ಗೌಡ (ಜಿಜಿ) ದಂಪತಿ ಶಾಕ್​ಗೆ ಒಳಗಾಗಿದ್ದರಂತೆ. ಈ ಬಗ್ಗೆ ಖುದ್ದು ನಟ ಗೋವಿಂದೇ ಗೌಡ ಅವರು ನ್ಯೂಸ್​ಫಸ್ಟ್​ನೊಂದಿಗೆ ಮಾತಾಡಿದ್ದಾರೆ. ನಟಿ ರಕ್ಷಿತಾ ಪ್ರೇಮ್ ಅವರಿಗೆ ರಾಕೇಶ್ ಮಗನಂತೆ ಇದಿದ್ದರು. ಕಾಂತಾರದಿಂದ ದೊಡ್ಡ ಲೈಫ್ ಸಿಗೋ ನಿರೀಕ್ಷೆ ಇತ್ತು. ರಾಕಿಗೆ ಯಾರೂ ಶತ್ರುಗಳು ಅನ್ನೋರೆ ಇಲ್ಲ. ಎಲ್ಲರನ್ನೂ ಇಷ್ಟಪಡ್ತಿದ್ದ. ರಾಕೇಶ್ ನಿಧನದ ಸುದ್ದಿ ಕೇಳಿ ನನಗೆ ಹಾಗೂ ದಿವ್ಯಾಗೆ ತುಂಬಾ ಶಾಕ್​ ಆಯ್ತು. ಕೊನೆಯದಾಗಿ ಅವನನ್ನು ನೋಡೋಕೆ ಆಗ್ತಿಲ್ಲ ಅನ್ನೋ ಬೇಸರ ಇದೆ. ರಾಕಿಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ತುಂಬಾ ಚೆನ್ನಾಗಿದ್ದ. ಅವರ ಕುಟುಂಬವನ್ನು ಇವರೇ ನೋಡಿಕೊಳ್ತಿದ್ದರು ಎಂದು ಹೇಳುತ್ತಾ ಭಾವುಕರಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us