/newsfirstlive-kannada/media/post_attachments/wp-content/uploads/2025/03/suhbha-laxmi.jpg)
ಕಾಮಿಡಿ ಕಿಲಾಡಿಗಳು ಸೀಸನ್ 4ರನ್ನರ್ ಅಪ್ ಆಗಿದ್ದ ಶುಭಲಕ್ಷ್ಮೀ ಅವರ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಹೌದು, ಮಜಾ ಭಾರತ, ಕಾಮಿಡಿ ಕಿಲಾಡಿಗಳ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ ಹಾಸ್ಯ ನಟಿ ಶುಭಲಕ್ಷ್ಮೀ.
ಇದನ್ನೂ ಓದಿ:ಮುದ್ದು ಮಗನ ಜೊತೆಗೆ ಮುದ್ದಾದ ಕುಟುಂಬ.. ಕವಿತಾ ಗೌಡ ದಂಪತಿ ಗುಂಡಪ್ಪನ ಬಗ್ಗೆ ಏನಂದ್ರು?
ಈಗ ಶುಭಲಕ್ಷ್ಮೀ ಅವರ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ಌಕ್ಟೀವ್ ಆಗಿರೋ ಶುಭಲಕ್ಷ್ಮೀ ಅವರು ತಮ್ಮ ಮದುವೆ ವಿಚಾರವನ್ನು ಹಾಗೂ ಹೆಣ್ಣು ನೋಡುವ ಶಾಸ್ತ್ರದ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದರು.
ಹಾಸ್ಯ ನಟಿ ಶುಭಲಕ್ಷ್ಮೀ ಅವರು ಮುಂದಿನ ತಿಂಗಳು ಅಂದರೆ ಏಪ್ರಿಲ್ 2ರಂದು ಮದುವೆ ಆಗುತ್ತಿದ್ದಾರೆ. ಇನ್ನೂ ನಟಿ ಶುಭಲಕ್ಷ್ಮೀ ಅವರ ಕೈ ಹಿಡಿಯುತ್ತಿರೋ ಹುಡುಗನ ಹೆಸರು ಕುಮಾರ್. ಇವರು ಸಾಫ್ಟ್‌ವೇರ್ ಎಂಜಿನಿಯರಿಂಗ್ ಆಗಿ ಕೆಲಸ ಮಾಡುತ್ತಿದ್ದಾರೆ. ಶಿರಸಿಯ ಡಾ ಬಿ ಆರ್ ಅಂಬೇಡ್ಕರ್ ಭವನದಲ್ಲಿ ಮದುವೆಯಾಗಲಿದ್ದಾರೆ. ಇದೊಂದು ಅರೇಂಜ್ ಮ್ಯಾರೇಜ್. ಗುರು ಹಿರಿಯರು ನಿಶ್ಚಯಿಸಿರುವ ಮದುವೆ ಇದಾಗಿದೆ.
View this post on Instagram
ಸದ್ಯ ಶುಭಲಕ್ಷ್ಮೀ ಅವರು ಮದುವೆ ಶಾಪಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೇ ಆಗಾ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮದುವೆಗೆ ಸಂಬಂಧಪಟ್ಟ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಮದುವೆ ವಿಚಾರ ತಿಳಿಯುತ್ತಿದ್ದಂತೆ ಅಭಿಮಾನಿಗಳು ಕೂಡ ಶುಭಲಕ್ಷ್ಮೀ ಅವರ ಮುಂದಿನ ಜೀವನಕ್ಕೆ ಶುಭ ಹಾರೈಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ