/newsfirstlive-kannada/media/post_attachments/wp-content/uploads/2025/05/manasa.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಮೂಲಕ ಫೇಮಸ್ ಆಗಿದ್ದರು ಈ ದಂಪತಿ. ಮೊದಲು ಗಂಡ, ಆಮೇಲೆ ಹೆಂಡತಿ. ಹೀಗೆ ಒಬ್ಬರಾದ ಮೇಲೆ ಒಬ್ಬರು ಬಿಗ್ಬಾಸ್ ಮನೆಗೆ ಹೋಗಿ ಕಮಾಲ್ ಕೂಡ ಮಾಡಿದ್ದರು. ಬಿಗ್ಬಾಸ್ನಿಂದ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡ ತುಕಾಲಿ ಸಂತೋಷ್ ಹಾಗೂ ಮಾನಸಾ ಸಂತೋಷ್ ಈಗ ಸುದ್ದಿಯಲ್ಲಿದ್ದಾರೆ. ಇದಕ್ಕೆ ಒಂದು ಬಲವಾದ ಕಾರಣ ಕೂಡ ಇದೆ. ಅದೇನೆಂದರೆ ತುಕಾಲಿ ಸಂತೋಷ್ ಪತ್ನಿ ಮಾನಸಾ ಧರಿಸಿರೋ ದುಬಾರಿ ಮಾಂಗಲ್ಯ.
ಇದನ್ನೂ ಓದಿ:ಗ್ರ್ಯಾಂಡ್ ಆಗಿ ಅತ್ತೆ-ಮಾವನ ಮದುವೆ ವಾರ್ಷಿಕೋತ್ಸವ ಸೆಲೆಬ್ರೇಟ್ ಮಾಡಿದ ರಜತ್ ಕಿಶನ್! PHOTOS
ಹೌದು, ಮೊನ್ನೆಯಷ್ಟೇ ಬಿಗ್ಬಾಸ್ ಸೀಸನ್ 11ರ ಸ್ಪರ್ಧಿಯಾಗಿದ್ದ ರಂಜಿತ್ ಕುಮಾರ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅವರ ಮದುವೆಗೆ ಬಿಗ್ಬಾಸ್ ಸ್ಪರ್ಧಿಗಳು ಹೋಗಿ ವಿಶ್ ಕೂಡ ಮಾಡಿದ್ದರು. ಅದರಲ್ಲೂ ತುಕಾಲಿ ಸಂತೋಷ್ ದಂಪತಿ ಕೂಡ ಆಗಮಿಸಿತ್ತು. ಮದುವೆಗೆ ತುಕಾಲಿ ಸಂತೋಷ್ ಪತ್ನಿ ಗುಲಾಬಿ ಬಣ್ಣದ ಲಾಂಗ್ ಗೌನ್ನಲ್ಲಿ ಕಂಗೊಳಿಸಿದ್ದರು. ಅಲ್ಲದೇ ಬಹಳ ಮುಖ್ಯವಾಗಿ ಮಾನಸಾ ಅವರು ಹೊಸ ಮಾಂಗಲ್ಯ ಸರವನ್ನು ಧರಿಸಿಕೊಂಡು ಬಂದಿದ್ದು ಎಲ್ಲರ ಕಣ್ಣು ಕುಕ್ಕುವಂತಿತ್ತು.
ಹೀಗಾಗಿ ಯೂಟ್ಯೂಬರ್ ಒಬ್ಬರು ಹೊಸ ಮಾಂಗಲ್ಯ ನೋಡಿ ನೀವು ಧರಿಸಿದ್ದು ಚಿನ್ನದ್ದೇನಾ ಅಂತ ಕೇಳಿದ್ದಾರೆ. ಮಾನಸಾ ಮೇಡಂಗೆ ನೀವು ದೊಡ್ಡ ಸರ ಕೊಡಿಸಿದ್ದೀರಲ್ವಾ.. ಅದು ಎಷ್ಟು ಇರಬಹುದು?’’ ಎಂದು ಯೂಟ್ಯೂಬರ್ ಪ್ರಶ್ನಿಸಿದರು. ಅದಕ್ಕೆ ಕೂಡಲೇ ಉತ್ತರಿಸಿದ ಅವರು, ಅದು ಚಿನ್ನದ್ದು ಅಂತ ನೀವು ಅಂದುಕೊಳ್ಳುತ್ತಿದ್ದೀರಲ್ವಾ? ನಂಗೆ ತುಂಬಾ ಖುಷಿ ಆಯ್ತು ಅಂತ ಮಾನಸಾ ಕೌಂಟರ್ ಕೊಟ್ಟಿದ್ದಾರೆ.
ಆಗ ತುಕಾಲಿ ಸಂತೋಷ್ ಅದು ಚಿನ್ನದ್ದೇ. ಎಷ್ಟು ಗ್ರಾಂ ಅಂತ ಹೇಳಬಾರದು. ಗ್ರಾಂ ಹೇಳಿದರೆ ಪ್ರೀತಿ ಕಡಿಮೆ ಆಗುತ್ತದೆ. ಜನರೇ ಲೆಕ್ಕ ಹಾಕಬೇಕು. ಎಷ್ಟು ಗ್ರಾಂ ಇದೆ. ನಾನು ಪ್ರೀತಿಯಿಂದ ಮಾಡಿಸಿಕೊಟ್ಟಿದ್ದೀನಿ. ನಾನು ಅವಳಿಗೆ ಏನೂ ಕೊಡಿಸಿಲ್ಲ ಅಂತ ಜನ ಕೇಳುತ್ತಿದ್ದರು. ಈಗ ನಾನು ಅವಳಿಗೆ ಮಾಂಗಲ್ಯ ಸರ ಕೊಡಿಸಿದ್ದೇನೆ. ತೂಕ ಹೇಳಿದಷ್ಟು ಪ್ರೀತಿ ಕಡಿಮೆ ಆಗುತ್ತದೆ. ನಾವು ಹೀಗೆ ಖುಷಿ ಖುಷಿಯಾಗಿ ಇರಬೇಕು ಅನ್ನೋದು ನಮ್ಮ ಆಸೆ.
ನಾನು ಏನೇ ಮಾಡಿದರೂ ಎಲ್ಲಾ ನನ್ನ ಹೆಂಡತಿಗಾಗಿಯೇ ಅಂತ ಹೇಳಿದ್ದಾರೆ. ಹೀಗಾಗಿ ಇದನ್ನೇ ನೋಡಿದ ನೆಟ್ಟಿಗರು ಮಾಂಗಲ್ಯ ಅಷ್ಟು ದಪ್ಪ ಇದೆ, ಇದಕ್ಕೆ ಎಷ್ಟು ದುಡ್ಡು ಇರಬಹುದು ಅಂತ ಲೆಕ್ಕಾ ಹಾಕುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ