/newsfirstlive-kannada/media/post_attachments/wp-content/uploads/2023/10/LPG_Cylinder_Price_1.jpg)
ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಈಗ ಮತ್ತೊಂದು ಬರೆ ಬಿದ್ದಿದೆ. ಆಯಿಲ್ ಮಾರ್ಕೆಟಿಂಗ್ ಕಂಪನಿಗಳು ಶನಿವಾರ ಕಮರ್ಷಿಯಲ್ ಸಿಲಿಂಡರ್ ಬೆಲೆಯಲ್ಲಿ ಏರಿಕೆ ಮಾಡಿದ್ದು. ಈಗ ಅವುಗಳ ಬೆಲೆಯಲ್ಲಿ ಸುಮಾರು 6 ರೂಪಾಯಿ ಏರಿಕೆಯಾಗಿದೆ.
19ಕೆಜಿ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆ ದೆಹಲಿಯಲ್ಲಿ ಈ ಮೊದಲು 1,797 ರೂಪಾಯಿ ಇತ್ತು ಈಗ ಅದರ ಬೆಲೆ 1,803 ರೂಪಾಯಿ ಆಗಿದೆ. ಪ್ರತಿ ಸಿಲಿಂಡರ್ ಬೆಲೆಯಲ್ಲಿ 6 ರೂಪಾಯಿ ಏರಿಕೆಯಾಗಿದೆ.
ಇದನ್ನೂ ಓದಿ:ರೀಲ್ನಲ್ಲಿ ಅಲ್ಲ ಇವರು ರಿಯಲ್ ಖತರ್ನಾಕ್ ಡಾಕುಗಳು.. ದೇಶ ಕಂಡ ಈ 10 ಕಿರಾತಕರ ಕ್ರೌರ್ಯ ಹೇಗಿತ್ತು?
ಆದರೆ ಒಂದು ನಿರಾಳತೆಯ ವಿಷಯ ಏನಂದ್ರೆ ಕಳೆದ ಆಗಷ್ಟ್ನಿಂದಲೂ ಗೃಹ ಬಳಕೆ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ರೀತಿಯ ಏರಿಕೆ ಆಗಿಲ್ಲ. ಇಳಿಕೆಯೂ ಕೂಡ ಆಗಿಲ್ಲ. ಒಂದೇ ಬೆಲೆಯನ್ನು ಕಾಯ್ದುಕೊಂಡು ಬರಲಾಗಿದೆ. ನಗರಗಳ ಅನ್ವಯ ಕಮರ್ಷಿಯಲ್ ಸಿಲಿಂಡರ್ ಬೆಲೆ ಹೇಗಿದೆ ಎನ್ನುವುದನ್ನ ನೋಡುವುದಾದ್ರೆ.
ದೆಹಲಿಯಲ್ಲಿ 1,803 ಕೊಲ್ಕತ್ತಾದಲ್ಲಿ 1,913,ಮುಂಬೈನಲ್ಲಿ 1,755 ಮತ್ತು ಚೆನ್ನೈನಲ್ಲಿ 1,965 ರೂಪಾಯಿಗಳಷ್ಟಾಗಿದೆ ಈ ಮೊದಲು ಈ ಬೆಲೆಗಿಂತ 6 ರೂಪಾಯಿ ಕಡಿಮೆಗೆ ಇಲ್ಲಿ ಕಮರ್ಷಿಯಲ್ ಸಿಲಿಂಡರ್ಗಳನ್ನು ನೀಡಲಾಗುತ್ತಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ