/newsfirstlive-kannada/media/post_attachments/wp-content/uploads/2023/07/lpg.jpg)
ಏಪ್ರಿಲ್ 1, 2025 ರಿಂದ ಮಹಾನಗರಗಳಲ್ಲಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಕಡಿಮೆಯಾಗಿದೆ. ವಾಣಿಜ್ಯ ಗ್ಯಾಸ್ ಸಿಲಿಂಡರ್ನಲ್ಲಿ 40 ರೂಪಾಯಿ ಕಡಿತ ಘೋಷಿಸಲಾಗಿದೆ. ಗೃಹಬಳಕೆಯ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಕಳೆದ ತಿಂಗಳು ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು ಹೆಚ್ಚಿಸಲಾಗಿತ್ತು.
ಇದನ್ನೂ ಓದಿ:ಹಾಲು, ಮೊಸರು, ಕರೆಂಟು, ಕಾರು.. ಇಂದಿನಿಂದ ಯಾವುದೆಲ್ಲಾ ದುಬಾರಿ; ಓದಲೇಬೇಕಾದ ಸ್ಟೋರಿ!
ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಗಳನ್ನು ಕೊನೆಯ ಬಾರಿಗೆ ಮಾರ್ಚ್ 2024ರಲ್ಲಿ ಇಳಿಸಲಾಗಿತ್ತು. ಕಳೆದ 11 ತಿಂಗಳಿನಿಂದ ಎಲ್‌ಪಿಜಿ ಬೆಲೆ ಸ್ಥಿರವಾಗಿದೆ. ಅದರಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮಾಹಿತಿ ಪ್ರಕಾರ, ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್‌ನ ಬೆಲೆ 1762 ರೂಪಾಯಿ ಆಗಿದೆ. ರಾಷ್ಟ್ರರಾಜಧಾನಿಯಲ್ಲಿ 41 ರೂಪಾಯಿ ಕಡಿಮೆ ಮಾಡಲಾಗಿದೆ. ಕೋಲ್ಕತ್ತಾದಲ್ಲಿ 44.50 ಪೈಸೆ ಇಳಿಕೆಯಾಗಿದ್ದು, ಹೊಸ ಸಿಲಿಂಡರ್ ಬೆಲೆ 1868.50 ರೂಪಾಯಿ.
ಮುಂಬೈನಲ್ಲಿ 42 ರೂಪಾಯಿ ಇಳಿಕೆಯಾಗಿದೆ. ಇದೀಗ ಮುಂಬೈನಲ್ಲಿ ಸಿಲಿಂಡರ್ ಬೆಲೆ 1713 .50 ರೂಪಾಯಿ ಆಗಿದೆ. ಚೆನ್ನೈನಲ್ಲಿ 43.50 ರೂಪಾಯಿ ಇಳಿಕೆಯಾಗಿದ್ದು, ಹೊಸ ಬೆಲೆ 1921.50 ರೂಪಾಯಿ.
ಪ್ರಸ್ತುತ ಗೃಹಬಳಕೆ ಸಿಲಿಂಡರ್
- ದೆಹಲಿ: 803 ರೂಪಾಯಿ
- ಮುಂಬೈನಲ್ಲಿ 802.50 ರೂಪಾಯಿ
- ಕೋಲ್ಕತ್ತಾದಲ್ಲಿ 829 ರೂಪಾಯಿ
- ಚೆನ್ನೈನಲ್ಲಿ 818.50 ರೂಪಾಯಿ
ಗೃಹಬಳಕೆಯ ಮತ್ತು ವಾಣಿಜ್ಯ ಅನಿಲ ಸಿಲಿಂಡರ್‌ಗಳ ಬೆಲೆಗಳನ್ನು ಸರ್ಕಾರಿ ತೈಲ ಕಂಪನಿಗಳು ಪ್ರತಿ ತಿಂಗಳ ಆರಂಭದಲ್ಲಿ ಪರಿಶೀಲಿಸುತ್ತವೆ. ನಂತರ ಅವುಗಳ ಬೆಲೆಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತವೆ.
ಇದನ್ನೂ ಓದಿ: ಹೊಸ ಆರ್ಥಿಕ ವರ್ಷ ಆರಂಭ; ದುಡಿಯುವ ವರ್ಗಕ್ಕೆ ಗಾಯದ ಮೇಲೆ ಬರೆ! ಯಾರಿಗೆಲ್ಲ ಬಿಗ್ ರಿಲೀಫ್?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ