ಹೊಸಕೋಟೆ ಧಮ್‌ ಬಿರಿಯಾನಿ ಹೋಟೆಲ್‌ಗಳ ಮೇಲೆ ರೇಡ್‌; ಕೋಟಿ, ಕೋಟಿ ನಗದು ಪತ್ತೆ!

author-image
admin
Updated On
ನಾನ್​ವೆಜ್ ಪ್ರಿಯರಿಗೆ ಕಹಿ ಸುದ್ದಿ; ಚಿಕನ್ ಬೆಲೆ ದಿಢೀರ್ ಏರಿಕೆ.. 1KG ಎಷ್ಟು?
Advertisment
  • ಬೆಳಗಿನ ಜಾವ ಹೊಸಕೋಟೆ ಬಿರಿಯಾನಿ ಅಂದ್ರೆ ಸಖತ್ ಫೇಮಸ್‌!
  • ವಾಣಿಜ್ಯ ತೆರಿಗೆ ಇಲಾಖೆಯ 50 ಅಧಿಕಾರಿಗಳ ತಂಡ ದಿಢೀರ್ ದಾಳಿ
  • ಹೋಟೆಲ್‌ ಮಾಲೀಕನ ಬಳಿ 30ಕ್ಕೂ ಹೆಚ್ಚು QR ಕೋಡ್‌ಗಳು ಪತ್ತೆ

ಬೆಂಗಳೂರು: ಬೆಳಗಿನ ಜಾವ 5 ಗಂಟೆ ಅಥವಾ 6 ಗಂಟೆಯ ಸಮಯದಲ್ಲಿ ಹೊಸಕೋಟೆ ಬಳಿ ಸಿಗೋ ಬಿರಿಯಾನಿ ಅಂದ್ರೆ ಸಖತ್ ಫೇಮಸ್‌. ಭಾನುವಾರ ಬಂದ್ರೆ ಸಾಕು ಸಿಲಿಕಾನ್ ಸಿಟಿಯ ಸಾಕಷ್ಟು ಮಂದಿ ಹೋಗಿ ಕ್ಯೂ ನಿಂತು ಚಿಕನ್, ಮಟನ್ ಬಿರಿಯಾನಿ ತಿನ್ನುತ್ತಾರೆ. ಅನೇಕ ಮಂದಿ ಹೊಸಕೋಟೆ ಬಿರಿಯಾನಿಯನ್ನು ಎಷ್ಟೋ ದೂರದವರೆಗೂ ಪಾರ್ಸಲ್ ತೆಗೆದುಕೊಂಡು ಹೋಗ್ತಾರೆ. ಆದ್ರೀಗ ಈ ಮಾಂಸಹಾರಿ ಹಾಗೂ ಬಿರಿಯಾನಿ ಹೊಟೇಲ್‌ಗಳ‌ ಮೇಲೆ ಐಟಿ ದಾಳಿ ನಡೆದಿದೆ.

ಹೊಸಕೋಟೆ ಬಳಿಯ ಕೆಲವು ಹೋಟೆಲ್ ಮಾಲೀಕರ ಮೇಲೆ GST ವಂಚನೆ ಮಾಡಿರೋ ಆರೋಪ ಕೇಳಿ ಬಂದಿದೆ. ಖಚಿತ ಮಾಹಿತಿ ಆಧರಿಸಿ ವಾಣಿಜ್ಯ ತೆರಿಗೆ ಇಲಾಖೆಯ 50 ಅಧಿಕಾರಿಗಳ ತಂಡ ಇಂದು ದಾಳಿ ಮಾಡಿದೆ. ಸರಕು ಮತ್ತು ಸೇವಾ ತೆರಿಗೆ ವಂಚನೆ ಮಾಡ್ತಿದ್ದ ಹೋಟೆಲ್‌ಗಳು ಹಾಗೂ ಹೋಟೆಲ್‌ ಮಾಲೀಕರ ಮನೆ ಶೋಧ ನಡೆಸಿದ್ದು, ಈ ವೇಳೆ ಕೋಟ್ಯಾಂತರ ರೂಪಾಯಿ ನಗದು ಪತ್ತೆಯಾಗಿದೆ. ಹೊಟೇಲ್ ಮಾಲೀಕನ‌ ಬಳಿ 1.47 ಕೋಟಿ ರೂಪಾಯಿ ನಗದು ಪತ್ತೆಯಾಗಿದೆ ಎನ್ನಲಾಗಿದೆ.

ಒಂದೇ ಒಂದು ಹೋಟೆಲ್‌ನಲ್ಲಿ 30 QR ಕೋಡ್! 

ಹೊಸಕೋಟೆಯ ಕೆಲವು ಮಾಂಸಹಾರಿ ಹಾಗೂ ಬಿರಿಯಾನಿ ಹೋಟೆಲ್‌ಗಳ‌ ಮೇಲೆ ಈ ದಾಳಿ ನಡೆದಿದೆ. ಈ ಹೋಟೆಲ್‌ಗಳಲ್ಲಿ ಯುಪಿಐ ಪಾವತಿ ಖಾತೆಗಳನ್ನು ಬದಲಾಯಿಸಿ ವಹಿವಾಟು ನಡೆಸಿದ್ದಾರೆ. ಈ ಮೂಲಕ ತೆರಿಗೆ ವಂಚನೆ ಮಾಡಿದ್ದಾರೆ ಎನ್ನಲಾಗಿದೆ. ಒಬ್ಬ ಹೋಟೆಲ್‌ ಮಾಲೀಕನಂತೂ ತನ್ನ ಹೋಟೆಲ್‌ನಲ್ಲಿ ಸುಮಾರು 30 QR ಕೋಡ್ ಹೊಂದಿದ್ದ. ಹೋಟೆಲ್ ಮಾರಾಟ ವಹಿವಾಟಿನ ಸರಿಯಾದ ಲೆಕ್ಕಪತ್ರ ಕೂಡ ನಿರ್ವಹಿಸ್ತಿರಲಿಲ್ಲ ಎನ್ನಲಾಗಿದೆ. ಬಿಲ್‌ಗಳನ್ನು ಸರಿಯಾಗಿ ನೀಡದೆ ತೆರಿಗೆ ವಂಚನೆ ಮಾಡಿದ್ದು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment