ನಿಮ್ಮ ಆಲಸ್ಯತನವೇ ನಿಮ್ಮ ಮೆದುಳಿನ ಆರೋಗ್ಯಕ್ಕೆ ವೈರಿಯಾಗಬಲ್ಲದು
ಬದುಕಿನ ಯಾವೆಲ್ಲಾ ರೂಢಿಗಳನ್ನು ನಿಮ್ಮ ಮೆದಳಿನ ಆರೋಗ್ಯಕ್ಕೆ ಮಾರಕ?
ವ್ಯಾಯಾಮ ಹಾಗೂ ಬಿಸಿಲು ಮೆದುಳನ್ನು ಎಷ್ಟು ಆರೋಗ್ಯವಾಗಿಡುತ್ತವೆ ಗೊತ್ತಾ?
ಸದೃಢವಾದ ಮನಸ್ಸು ಇದ್ದಲ್ಲಿ ಮಾತ್ರ ಸದೃಢವಾದ ದೇಹ ಇರುತ್ತದೆ ಎಂದು ವೈದ್ಯಲೋಕ ಹೇಳುತ್ತದೆ. ನಮ್ಮ ಮನಸ್ಸು ಪ್ರಫುಲ್ಲವಾಗಿದ್ದಷ್ಟು, ನಮ್ಮ ದೇಹವೂ ಕೂಡ ಆರೋಗ್ಯವಾಗಿರತ್ತದೆ. ಹೀಗಾಗಿ ಮನಸ್ಸನ್ನು ಸಂಪೂರ್ಣವಾಗಿ ನಿರ್ವಹಿಸುವುದು ನಮ್ಮ ದೇಹ ಪ್ರಮುಖ ಅಂಗವಾದ ಮೆದುಳು. ನಾವು ಮೆದುಳನ್ನು ಆರೋಗ್ಯಕರವಾಗಿಟ್ಟಷ್ಟು ನಮ್ಮ ಮನಸ್ಸು ಹಾಗೂ ನಮ್ಮ ದೇಹ ಆರೋಗ್ಯವಾಗಿರುತ್ತವೆ. ಆದ್ರೆ ನಮಗೆ ಗೊತ್ತಿಲ್ಲದಂತೆ ನಾವು ನಮ್ಮ ಮೆದುಳಿ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವಂತಹ ಒಂದಿಷ್ಟು ಆಲಸ್ಯ ಕೆಲಸಗಳನ್ನು ಮಾಡುತ್ತಿರುತ್ತೇವೆ. ಹೀಗೆ ಮಾಡುವುದರಿಂದ ಮೆದುಳಿನ ಮೇಲೆ ಪರಿಣಾಮ ಬೀರುತ್ತವೆ ಎಂದು ವೈದ್ಯರು ಹೇಳುತ್ತಾರೆ.
ನಿತ್ಯವೂ ಬೇಕಾದಷ್ಟು ವ್ಯಾಯಾಮ ಮಾಡದೇ ಇರುವುದು
ದೇಹ ಒಂದಿಲ್ಲ ಒಂದು ರೀತಿ ದಣಿಯಬೇಕು. ಹೈರಾಣಾಗಬೇಕು, ಸ್ವಲ್ಪ ಬೆವರು ಸುರಿಸಬೇಕು. ಆಗಲೇ ದೇಹವು ಆರೋಗ್ಯಕರವಾಗಿ ಉಳಿಯುವುದು. ನಿತ್ಯ ಸಾಧಾರಣ ವ್ಯಾಯಾಮ ಮಾಡುವುದರಿಂದ ಮೆದುಳಿನ ಅನೇಕ ಕಾರ್ಯಗಳು ಉತ್ತಮಗೊಳ್ಳುತ್ತವೆ. ಏಕಾಗ್ರತೆ ಹಾಗೂ ನೆನಪಿನ ಶಕ್ತಿಯನ್ನು ಹೆಚ್ಚಿಸಲು ದೈನಂದಿನ ವ್ಯಾಯಾಮ ಅತ್ಯಗತ್ಯ ಇದರಿಂದ ಮೆದುಳಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನೀವು ನಿತ್ಯ ವ್ಯಾಯಾಮ ಮಾಡದೇ ಆಲಸ್ಯ ತೋರಿದಲ್ಲಿ ಅತಿಯಾದ ಒತ್ತಡ ಹಾಗೂ ಸದಾ ಆತಂಕದಲ್ಲಿರುವ ಮಾನಸಿಕ ಸಮಸ್ಯೆಗಳು ಇನ್ನಷ್ಟು ವೃದ್ಧಿಸುತ್ತವೆ.
ಅತಿಯಾಗಿ ವ್ಯಾಲ್ಯೂಮ್ ಇಟ್ಟು ಮ್ಯೂಸಿಕ್ ಕೇಳುವುದು ಅಪಾಯ
ಮನೆ ತಾರಸಿಯೇ ಹಾರಿ ಹೋಗುವಂತೆ ಸೌಂಡ್ ಇಟ್ಟುಕೊಂಡು ಹಾಡು ಕೇಳುವ ಹುಚ್ಚು ಈಗೀನ ತಲೆಮಾರಿನ ಯುವಕರಲ್ಲಿ ಇದೆ. ಆದ್ರೆ ನೆನಪಿರಲಿ ಇದರಿಂದ ನಿಮ್ಮ ಮೆದುಳಿನ ಮೇಲೆ ವ್ಯತಿರಿಕ್ತ ಪರಿಣಾಮ ಆಗಲಿದೆ. ಸಂಗೀತ ನಿಜಕ್ಕೂ ಮನಸ್ಸನ್ನು ಉಲ್ಲಸಿತಗೊಳಿಸುತ್ತದೆ. ಹೈ ವಾಲ್ಯೂಮ್ ಮ್ಯೂಸಿಕ್ಗಳು ನಮ್ಮ ದೇಹದಲ್ಲಿ ಕಾರ್ಟಿಸೋಲ್ ಅನ್ನುವ ಹಾರ್ಮೋನ್ನನ್ನು ವೃದ್ಧಿಸುತ್ತದೆ ಇದರಿಂದಾಗಿ ಆ್ಯಂಜಿಟಿಯಂತಹ ಮಾನಸಿಕ ಸಮಸ್ಯೆಗಳು ಹುಟ್ಟುವ ಸಂಭವ ಹೆಚ್ಚು ಇರುತ್ತದೆ.
ಅತಿಯಾದ ಸಕ್ಕರೆಯುಕ್ತ ಆಹಾರ ಸೇವನೆ
ಅತಿಯಾದ ಸಕ್ಕರೆಯುಕ್ತ ಆಹಾರ ಸೇವನೆಯಿಂದಲೂ ಕೂಡ ನಮ್ಮ ಮೆದುಳಿಗೆ ಹಾಣಿಯಾಗುವ ಸಂಭವ ಜಾಸ್ತಿ. ಇದರಿಂದ ಕಲಿಯುವಿಕೆ ಸಾಮರ್ಥ್ಯ ಹಾಗೂ ನೆನಪಿನ ಸಾಮರ್ಥ್ಯಕ್ಕೆ ಧಕ್ಕೆಯಾಗುವ ಸಂಭವವಿರುತ್ತೆ ಎಂದು ಹೇಳುತ್ತಾರೆ ಮನೋರೋಗ ತಜ್ಞರು. ಅತಿಯಾದ ಸಕ್ಕರೆಯುಕ್ತ ಪದಾರ್ಥಗಳನ್ನು ತಿನ್ನುವುದರಿಂದ ಮೆದುಳಿನ ಹಲವು ಕ್ರಿಯೆಯಗಳ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ .ಇದು ನಿಮ್ಮ ಮನಸ್ಥಿತಿಯನ್ನು ಒಂದೇ ರೀತಿಯಾಗಿ ಇಡುವುದಿಲ್ಲ ಪದೇ ಪದೇ ಮೂಡ್ ಸ್ವಿಂಗ್ನಂತಹ ಮಾನಸಿಕ ಕಾಯಿಲೆಗಳು ಕಾಡುತ್ತವೆ.
ಬಿಸಿಲಿನಿಂದ ದೂರು ಉಳಿಯುವುದು ಕೂಡ ಅಪಾಯ
ಸ್ಕಿನ್ ಕೇರ್ ನೆಪದಲ್ಲಿ ನಾವು ಈಗ ಸೂರ್ಯನ ಕಿರಣಗಳಿಂದ ತಪ್ಪಿಸಿಕೊಳ್ಳಲು ಹಲವು ಉಪಾಯಗಳನ್ನು ಹುಡುಕುತ್ತೇವೆ. ಆದ್ರೆ ನೆನಪಿರಲಿ, ನಮ್ಮ ದೇಹಕ್ಕೆ ಸರಿಯಾದ ಪ್ರಮಾಣದ ಸೂರ್ಯನ ಕಿರಣಗಳು ಬೀಳಬೇಕು. ಬಿಸಿಲು ಕಾಯಿಸುವ ರೂಢಿ ಇಟ್ಟುಕೊಳ್ಳಬೇಕು. ಸೂರ್ಯನ ಶಾಖ ದೇಹದಲ್ಲಿ serotonin ನ ಅಂಶವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಖಿನ್ನತೆಯಂತ ರೋಗಗಳಿಂದ ನಾವು ದೂರ ಉಳಿಯಬಹುದು. ಸೂರ್ಯನ ಕಿರಣಗಳಿಂದ ನಾವು ತಪ್ಪಿಸಿಕೊಳ್ಳುವುದರಿಂದ ನಮ್ಮಲ್ಲಿ ವಿಟಮಿನ್ ಡಿ ಕೊರತೆಯೂ ಉಂಟಾಗುತ್ತದೆ
ಅತಿಯಾದ ಡಿಹೈಡ್ರೇಷನ್ (ನಿರ್ಜಲೀಕರಣ)
ಅತಿಯಾದ ನಿರ್ಜಲೀಕರಣ ಅಂದ್ರೆ ಡಿಹೈಡ್ರೇಷನ್ನಿಂದಲೂ ಕೂಡ ಮೆದುಳಿನ ಮೇಲೆ ಋಣಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ನೆನಪಿನ ಶಕ್ತಿಯಿಂದ ಹಿಡಿದು ಒಟ್ಟಾರೆ ಮಾನಸಿಕ ಆರೋಗ್ಯದ ಮೇಲೆ ಇದು ಪರಿಣಾಮ ಬೀರಲಿದೆ. ದೇಹದಲ್ಲಿ ಹೈಡ್ರೇಷನ್ ಶಕ್ತಿಯನ್ನು ಹೆಚ್ಚು ಮಾಡಲು ನಾವು ಹೆಚ್ಚು ಹೆಚ್ಚು ನೀರನ್ನು ಕುಡಿಯಬೇಕು. ಎಳನೀರಿನಂತಹ ಪಾನೀಯಗಳನ್ನು ಸೇವಿಸಬೇಕು. ಒಂದು ವೇಳೆ ದೇಹದಲ್ಲಿ ಡಿಹೈಡ್ರೇಷನ್ ಅಂದ್ರೆ ನಿರ್ಜಲೀಕರಣ ಹೆಚ್ಚಾಗುತ್ತಾ ಹೋದ್ರೆ. ಡಿಪ್ರೆಷನ್, ಮೂಡ್ ಸ್ವಿಂಗ್ನಂತಹ ಸಮಸ್ಯೆಗಳು ನಮ್ಮನ್ನು ಕಾಡುತ್ತವೆ.
ತೀವ್ರ ಒತ್ತಡಗಳನ್ನು ನಿರ್ಲಕ್ಷಿಸುವುದು
ಇದು ಸ್ಪರ್ಧಾತ್ಮಕ ಜಗತ್ತು. ಇದರ ಹಿಂದೆ ಓಡುವಾಗ, ಹೊಸದೆನೊಂದನ್ನೋ ಸಾಧಿಸುವಾಗ ಅನೇಕ ರೀತಿಯ ಒತ್ತಡಗಳನ್ನು ಎದುರಿಸುವುದು ಸಾಮಾನ್ಯ. ನಾವು ಅದನ್ನು ಸರಿಯಾದ ರೀತಿ ನಿರ್ವಹಿಸದೇ ಹೋದಲ್ಲಿ ಅದು ಕೂಡ ಮೆದುಳಿನ ಮೇಲೆ ವಿಪರೀತ ಋಣಾತ್ಮಕ ಪರಿಣಾಮ ಬೀರುವುದು ನಿಶ್ಚಿತ ಹೀಗಾಗಿ ನಿಮ್ಮ ಮೂಡ್ ಸ್ವಿಂಗ್ ಆಗದಿರಲು, ಡಿಪ್ರೆಷನ್ನಂತಹ ಮಾನಸಿಕ ಕಾಯಿಲೆಯಿಂದ ದೂರವಿರಲು ನಿಮ್ಮ ಒತ್ತಡದ ಬದುಕನ್ನು ಹೇಗೆ ನಿರ್ವಹಿಸುವುದು ಎಂಬುದನ್ನು ಕೂಡ ಕಲಿಯಬೇಕು ಇಲ್ಲವಾದಲ್ಲಿ ಅನೇಕ ರೀತಿಯ ಸಮಸ್ಯೆಗಳಿಗೆ ನೀವೆ ಆಹ್ವಾನ ನೀಡಿದಂತೆ ಆಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ