Advertisment

ಈ 5 ಆಹಾರಗಳಿಂದ ಸಾಧ್ಯವಾದಷ್ಟು ದೂರವಿರಿ; ನಿಮ್ಮ ಆಯಸ್ಸನ್ನೇ ಕ್ಷೀಣಿಸುತ್ತವೇ ಈ ಫುಡ್ಸ್​

author-image
Gopal Kulkarni
Updated On
ಈ 5 ಆಹಾರಗಳಿಂದ ಸಾಧ್ಯವಾದಷ್ಟು ದೂರವಿರಿ; ನಿಮ್ಮ ಆಯಸ್ಸನ್ನೇ ಕ್ಷೀಣಿಸುತ್ತವೇ ಈ ಫುಡ್ಸ್​
Advertisment
  • ಈ ಐದು ಆಹಾರಗಳು ನಿಮ್ಮ ಆರೋಗ್ಯಕ್ಕೆ ಕಂಟಕವಾಗುತ್ತವೆ
  • ನಿಮ್ಮ ಆಯಸ್ಸನ್ನು ಕ್ಷೀಣಿಸುತ್ತೆ ಈ ಐದು ಅಪಾಯಕಾರಿ ಆಹಾರ
  • ಯಾವೆಲ್ಲಾ ಆಹಾರಗಳು ನಿಮ್ಮ ದೀರ್ಘಾಯುಷ್ಯಕ್ಕೆ ಕಂಟಕ ಗೊತ್ತಾ

ನಾವು ಸೇವಿಸವು ನಮ್ಮ ನಿತ್ಯ ಆಹಾರಗಳು ನಮ್ಮ ಆರೋಗ್ಯವನ್ನು ಒಂದು ಸ್ಥಿತಿಗೆ ತರುತ್ತದೆ. ಉತ್ತಮ ಆಹಾರವನ್ನು ನಾವು ಸೇವಿಸಿದಷ್ಟು ಉತ್ತಮ ಆರೋಗ್ಯ ನಮ್ಮದಾಗುತ್ತದೆ. ಕೆಳಮಟ್ಟದ ಆಹಾರ ಕ್ರಮಗಳು ನಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತವೆ. ಅದು ಮಾತ್ರವಲ್ಲ. ದೇಹದ ಅನೇಕ ಅಂಗಗಳು ತಮ್ಮ ಕಾರ್ಯಕ್ಷಮತೆಯನ್ನು ಕಳೆದುಕೊಳ್ಳುವುದು ಕೂಡ ನಮ್ಮ ಕಳಪೆ ಆಹಾರ ಪದ್ಧತಿಯಿಂದ. ಈಗ ನಾವು ನಿಮಗೆ ಹೇಳುವ ಈ 6 ಸಾಮಾನ್ಯ ಆಹಾರಗಳು ನಿಮ್ಮ ಆರೋಗ್ಯ ಹಾಗೂ ದೀರ್ಘಾಯುಷ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತವೆ
'publive-image

Advertisment

1 ಸಂಸ್ಕರಿಸಿದ ಮಾಂಸ
ಸಂಸ್ಕರಿಸಿದ ಮಾಂಸ ಆರೋಗ್ಯದ ಮೇಲೆ ತುಂಬಾ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಅಂತ ಹಿಂದಿನಿಂದಲೂ ತಜ್ಞರು ಹೇಳುತ್ತಲೇ ಬಂದಿದ್ದಾರೆ ಫ್ರೋಜನ್ ಚಿಕನ್ ಸಲಾಮಿ ಇಲ್ಲವೇ ಸೌಸೇಜ್​ ಇವೆಲ್ಲವನ್ನೂ ಕೂಡ ಸಂಸ್ಕರಿಸಿದ ಮಾಂಸಾಹಾರ ಎಂದೇ ಪರಿಗಣಿಸಲಾಗುತ್ತದೆ. ಇವು ಆರೋಗ್ಯದ ಮೇಲೆ ಅತ್ಯಂತ ಅಪಾಯಕಾರಿ ಪರಿಣಾಮ ಬೀರುತ್ತವೆ. ಕ್ಯಾನ್ಸರ್​ನಂತ ಗಂಭೀರ ಕಾಯಿಲೆಗಳಿಗೆ ಇವು ಕಾರಣವಾಗುತ್ತೆವೆ. ಹೀಗಾಗಿ ಆದಷ್ಟು ಈ ಆಹಾರದಿಂದ ದೂರ ಇರುವುದು ತುಂಬಾ ಉತ್ತಮ. 2010ರಲ್ಲಿ ವರದಿಯಾದ ಒಂದು ಅಧ್ಯಯನದಿಂದ ಹೊರಬಿದ್ದ ಒಂದು ಆತಂಕಕಾರಿ ಅಂಶ ಅಂದ್ರೆ ಪ್ರಾಸೆಸ್ಡ್ ಮೀಟ್​ ಅಥವಾ ಸಂಸ್ಕರಿಸಿದ ಮಾಂಸಾಹಾರ ಸೇವನೆಯಿಂದ ಮರಣ ಪ್ರಮಾಣದ ಅಂಕಿಗಳು ಜಾಸ್ತಿಯಾಗುತ್ತವೆ ಕ್ಯಾನ್ಸರ್​ನಿಂದ ಹಿಡಿದು ಹೃದಯ ಸಂಬಂಧಿ ಕಾಯಿಲೆಗಳವರೆಗೂ ಕೂಡ ಸಮಸ್ಯೆಗಳನ್ನು ಸೃಷ್ಟಿಸುತ್ತದೆ.

publive-image

2. ಸಕ್ಕರೆಯುಕ್ತ ಪಾನೀಯಗಳು
ಇಂದಿನ ಯುವ ಜನಾಂಗ ಹೆಚ್ಚು ಮೊರೆ ಹೋಗುವುದು ಸಾಫ್ಟ್​ ಡ್ರಿಂಕ್ಸ್, ಎನರ್ಜಿ ಡ್ರಿಂಕ್ಸ್​ ಹಾಗೂ ಹಲವು ಸಕ್ಕರೆ ಅಂಶ ಹೆಚ್ಚಿರುವ ಪಾನೀಯಗಳಿಗೆ. ಈ ರೀತಿಯ ಪಾನೀಯಗಳು ದೇಹದಲ್ಲಿ ನೂರಾರು ಸಮಸ್ಯೆಗಳನ್ನು ಸೃಷ್ಟಿ ಮಾಡುತ್ತವೆ, ದೇಹದಲ್ಲಿ ಸಕ್ಕರೆ ಅಂಶವನ್ನು ಹೆಚ್ಚುಮಾಡಿ ದೇಹದ ತೂಕವನ್ನು ಜಾಸ್ತಿ ಮಾಡುವ ಹಾಗೂ ಇನ್ಸುಸಲಿನ್ ರಿಸಿಸ್ಟನ್ಸ್​ ಸಮಸ್ಯೆಗಳನ್ನು ಸೃಷ್ಟಿಮಾಡುತ್ತವೆ. ಇದು ಟೈಪ್ 2 ಸಕ್ಕರೆ ಕಾಯಿಲೆಗೂ ಕೂಡ ಕಾರಣವಾಗುತ್ತದೆ. ಹೃದಯಸಂಬಂಧಿ ಕಾಯಿಲೆಗಳಿಗೂ ಆಹ್ವಾನ ನೀಡುತ್ತದೆ. ಅದರ ಜೊತೆಗೆ ಲೀವರ್ ಆರೋಗ್ಯಕ್ಕೂ ಕೂಡ ಇದು ಕಂಟಕ

publive-image

3 ಸಂಸ್ಕರಿಸಿದ ಧಾನ್ಯಗಳು
ಸಂಸ್ಕರಿಸಿದ ಧಾನ್ಯಗಳು ಉದಾಹರಣೆಗೆ ಬಿಳಿ ಬ್ರೆಡ್, ಬಿಳಿ ಅಕ್ಕಿ ಮತ್ತು ಪಾಸ್ತಾ ಇವೆಲ್ಲವೂ ಕೂಡ ತುಂಬಾ ಅಪಾಯಕಾರಿ. ಅವುಗಳು ವಿಪರೀತವಾಗಿ ಸಂಸ್ಕರಿಸಲ್ಪಟ್ಟಿರುತ್ತೆ. ಅವುಗಳಲ್ಲಿರುವ ನ್ಯೂಟ್ರಿಯಂಟ್​ಸ್​ಗಳೆಲ್ಲಾ ಇಲ್ಲವಾಗಿರುತ್ತವೆ, ಹೀಗಾಗಿ ಅವುಗಳ ಸೇವನೆಯಿಂದ ಟೈಪ್ ಟು ಮಧುಮೇಹ ಹಾಗೂ ಬೊಜ್ಜಿನಂತ ಸಮಸ್ಯೆಗಳು ನಮಗೆ ಕಾಡುತ್ತವೆ. ಇವುಗಳ ಬದಲು ಬ್ರೌನ್ ರೈಸ್​,ಸಿರಿಧಾನ್ಯ ಹಾಗೂ ಗೋಧಿಯನ್ನು ಬಳಸುವುದು ತುಂಬಾ ಉತ್ತಮ.

Advertisment

publive-image

4. ಕರಿದ ಪದಾರ್ಥಗಳು
ವಿಪರೀತ ಕಾವಿನಲ್ಲಿ ಕರೀದ ಪದಾರ್ಥಗಳು ಕೂಡ ತುಂಬಾ ಅಪಾಯಕಾರಿ. ಫ್ರೈಡ್ ಚಿಕನ್, ಆನಿಯನ್ ರಿಂಗ್ಸ್​ ಇವೆಲ್ಲವೂ ಕೂಡ ತಿನ್ನಲು ರುಚಿಕರವಾಗಿದ್ದರೂ ಆರೋಗ್ಯಕ್ಕೆ ತುಂಬಾ ಹಾನಿಕಾರಕ. ಇವು ದೇಹದಲ್ಲಿ ಅನಾರೋಗ್ಯಕರ ಕೊಲೆಸ್ಟ್ರಾಲ್​ನ್ನು ಸೃಷ್ಟಿಸುತ್ತವೆ. ಇದರಿಂದ ಹೃದಯಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತವೆ. ಇಷ್ಟು ಮಾತ್ರವಲ್ಲ ಪಾರ್ಶ್ವವಾಯು ಹೊಡೆಯುವ ಸಾಧ್ಯತೆಯೂ ಕೂಡ ಇರುತ್ತದೆ.

5. ಪ್ಯಾಕ್ಡ್​ ಸ್ನ್ಯಾಕ್ಸ್
ಕುರುಕಲು ತಿಂಡಿ ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ. ಸಂಜೆಯಾದ್ರೆ ಅಥವಾ ಹಸಿವಾದ ರೀತಿಯಾದಾಗಲೆಲ್ಲಾ ಚಿಪ್ಸ್​ಗಳನ್ನು ಖರೀದಿಸಿ ತಿನ್ನುವುದು ಕಾಮನ್ ಆಗಿ ಬಿಟ್ಟಿದೆ. ಇದು ತುಂಬಾ ಅಪಾಯ. ಪ್ಯಾಕ್ ಮಾಡಲಾಗಿರುವ ಚಿಪ್ಸ್ ಕ್ರೇಕರ್ಸ್ ಒಟ್ಟಿನಲ್ಲಿ ಪ್ಯಾಕ್​ ಆಗಿರುವ ಯಾವುದೇ ಸ್ನ್ಯಾಕ್ಸ್ ಕೂಡ ತುಂಬಾ ಅಪಾಯಕಾರಿ. ಇದರಲ್ಲಿ ಅತಿಹೆಚ್ಚು ಸೋಡಿಯ ಇರುತ್ತದೆ ಇದು ರಕ್ತದೊತ್ತಡ ಹೆಚ್ಚಾಗಲು ಕಾರಣವಾಗುತ್ತದೆ. ಕಿಡ್ನಿಗೆ ಸಂಬಂಧಿಸಿದ ರೋಗಗಳು ಹಾಗೂ ಪಾರ್ಶ್ವವಾಯು ಸಂಭವಿಸುವ ಸಾಧ್ಯತೆಗಳು ಇರುತ್ತವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment