/newsfirstlive-kannada/media/post_attachments/wp-content/uploads/2024/10/GAZHAIABAD-INCIDENT.jpg)
ಯತಿ ನರಸಿಂಹಾನಂದ ಸರಸ್ವತಿ ಪ್ರವಾದಿ ಬಗ್ಗೆ ಆಡಿದ ಮಾತೊಂದು ಉತ್ತರಪ್ರದೇಶದಲ್ಲಿ ಕೋಮು ಕಿಚ್ಚಿಗೆ ಕಾರಣವಾಗಿದೆ. ದೇವಸ್ಥಾನಗಳಿಗೆ ಉದ್ರಿಕ್ತರು ಕಲ್ಲೆಸೆದು ಪರಿಸ್ಥಿತಿಯನ್ನು ಬಿಗಡಾಯಿಸಿದ್ದಾರೆ. ಪ್ರತಿಭಟನೆ ವೇಳೆ ಪೊಲೀಸರ ಮೇಲೆಯೇ ಕಲ್ಲು ತೂರಿ ಉದ್ಧಟತನ ತೋರಿದ್ದಾರೆ. ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನ ಮಾಡಿದ ಉತ್ತರಪ್ರದೇಶದ ಗಾಜಿಯಾಬಾದ್‌ನ ದಾಸ್ನಾ ದೇವಸ್ಥಾನದ ಮುಖ್ಯ ಅರ್ಚಕ ಯತಿ ನರಸಿಂಹಾನಂದ್ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಮಾತ್ರವಲ್ಲದೇ ಬಂಧನ ಕೂಡ ಆಗಿದೆ. ಆದ್ರೆ ಇಷ್ಟಕ್ಕೆ ಈ ವಿಚಾರ ತಣ್ಣಗಾಗಿಲ್ಲ.
/newsfirstlive-kannada/media/post_attachments/wp-content/uploads/2024/10/GAZHAIABAD-INCIDENT-1.jpg)
ದಾಸ್ನಾ ದೇವಿ ದೇವಸ್ಥಾನದ ಮೇಲೆ ಕಲ್ಲು ತೂರಾಟ
ಅದ್ಯಾವಾಗ ಪ್ರವಾದಿ ಮೊಹಮ್ಮದ್ ಬಗ್ಗೆ ನರಸಿಂಹಾನಂದ್ ಅವಹೇಳನ ಮಾಡಿದ್ರೋ ಮುಸ್ಲಿಮರು ಅವರ ವಿರುದ್ಧ ಕೆಂಡವಾಗಿದ್ದಾರೆ. ಈಗಾಗಲೇ ಅವರ ವಿರುದ್ಧ ಹೈದ್ರಾಬಾದ್​ನಲ್ಲಿ ಪ್ರತಿಭಟನೆ ಮಾಡಿ ದೂರು ಕೊಟ್ಟಿದ್ದಾರೆ. ಗಾಜಿಯಾಬಾದ್‌ನ ದಾಸ್ನಾ ದೇವಸ್ಥಾನದ ಮೇಲೆ ಪ್ರತಿಭಟನಾಕಾರರು ಕಲ್ಲೆಸೆದು ಕೋಮು ಕಿಚ್ಚಿಗೆ ಕಾರಣವಾಗಿದ್ದಾರೆ. ಈಗಾಗಲೇ ಹಲವರ ವಿರುದ್ಧ ಕೇಸ್ ದಾಖಲಾಗಿದ್ದು ಕೆಲವರನ್ನು ಬಂಧಿಸಲಾಗಿದೆ. ಇನ್ನು ದೇವಸ್ಥಾನಕ್ಕೆ ಕಲ್ಲು ತೂರಿದ್ದಕ್ಕೆ ಹಿಂದೂ ಮುಖಂಡರು ಹಾಗೂ ಸ್ಥಳೀಯರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮನೆಯ ಟಾಯ್ಲೆಟ್ ಮೇಲೂ ಟ್ಯಾಕ್ಸ್.. ಹಿಮಾಚಲ ಪ್ರದೇಶದಲ್ಲಿ ಹೊಸ ತೆರಿಗೆ; ನಿರ್ಮಲಾ ಸೀತಾರಾಮನ್ ಶಾಕ್!
/newsfirstlive-kannada/media/post_attachments/wp-content/uploads/2024/10/GAZHAIABAD-INCIDENT-2.jpg)
ಉತ್ತರ ಪ್ರದೇಶದಲ್ಲಿ ಪೊಲೀಸರ ಮೇಲೆ ಕಲ್ಲು ತೂರಿದ ಉದ್ರಿಕ್ತರು
ಇನ್ನು ಯತಿ ನರಸಿಂಹಾನಂದರ ಹೇಳಿಕೆಯಿಂದ ಉತ್ತರ ಪ್ರದೇಶದ ಸಹರಾನ್ಪುರದ ಶೇಖಪುರ ಗ್ರಾಮದಲ್ಲೂ ಉದ್ವಿಗ್ನತೆ ಹೆಚ್ಚಿದೆ. ಸಾವಿರಕ್ಕೂ ಅಧಿಕ ಮುಸ್ಲಿಮರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಉದ್ರಿಕ್ತರು ಪೊಲೀಸರ ಮೇಲೆಯೇ ಕಲ್ಲು ತೂರಿ ದಾಂಧಲೆ ಎಬ್ಬಿಸಿದ್ದಾರೆ. ಇದರಿಂದ ಹಲವು ಪೊಲೀಸರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೇ ವೇಳೆ 40 ಕಿಡಿಗೇಡಿಗಳ ವಿರುದ್ಧ ದೂರು ದಾಖಲಾಗಿದ್ದು 12 ಜನರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಅಮೆಜಾನ್ ಅರಣ್ಯಪ್ರದೇಶಕ್ಕೆ ಆಪತ್ತು.. 122 ವರ್ಷಗಳಷ್ಟು ಕೆಳಮಟ್ಟಕ್ಕೆ ಇಳಿದ ಉಪನದಿ ರಿಯೋ; ಕಾರಣವೇನು?
ಸದ್ಯ ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಯತಿ ವಿರುದ್ಧ ಕ್ರಮ ಕೈಗೊಳ್ಳಲು ಕೋರ್ಟ್, ಕಾನೂನು ಅನ್ನೋ ವ್ಯವಸ್ಥೆ ನಮ್ಮಲ್ಲಿದೆ. ಅದು ಬಿಟ್ಟು ಪೊಲೀಸರು ಹಾಗೂ ದೇವಸ್ಥಾನಗಳ ಮೇಲೆಯೇ ಕಲ್ಲು ತೂರಾಡೋ ಮೂಲಕ ಕೆಲವರು ಪರಿಸ್ಥಿತಿಯನ್ನ ಮತ್ತಷ್ಟು ಬಿಗಡಾಯಿಸಿದ್ದಾರೆ. ಕೂಡಲೇ ತಪ್ಪಿತಸ್ಥರ ವಿರುದ್ಧ ಯೋಗಿ ಆದಿತ್ಯನಾಥ್ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us