ಟೀಮ್​ ಇಂಡಿಯಾಗೆ ಯುವ ಬ್ಯಾಟರ್​ ಎಂಟ್ರಿ; ಸ್ಥಾನಕ್ಕಾಗಿ KL ರಾಹುಲ್ ಜತೆ ತೀವ್ರ ಪೈಪೋಟಿ

author-image
Ganesh Nachikethu
Updated On
ಟೀಮ್​ ಇಂಡಿಯಾಗೆ ಯುವ ಬ್ಯಾಟರ್​ ಎಂಟ್ರಿ; ಸ್ಥಾನಕ್ಕಾಗಿ KL ರಾಹುಲ್ ಜತೆ ತೀವ್ರ ಪೈಪೋಟಿ
Advertisment
  • ಟೀಮ್​ ಇಂಡಿಯಾ, ಆಸ್ಟ್ರೇಲಿಯಾ ಮಧ್ಯೆ 5 ಪಂದ್ಯಗಳ ಟೆಸ್ಟ್​!
  • ಮೊದಲ ಟೆಸ್ಟ್​ ಪಂದ್ಯದಿಂದ ಕ್ಯಾಪ್ಟನ್​ ರೋಹಿತ್​​ ಶರ್ಮಾ ಔಟ್​​
  • ಟೀಮ್​ ಇಂಡಿಯಾದಲ್ಲಿ ಯುವ ಆಟಗಾರನ ಜತೆ ರಾಹುಲ್​ ಪೈಪೋಟಿ

ಟೀಮ್​ ಇಂಡಿಯಾ, ಆಸ್ಟ್ರೇಲಿಯಾ ನಡುವಿನ 5 ಪಂದ್ಯಗಳ ಟೆಸ್ಟ್​​ ಸರಣಿಗೆ ದಿನಗಣನೆ ಶುರುವಾಗಿದೆ. ಇದೇ ತಿಂಗಳು ನವೆಂಬರ್ 22ನೇ ತಾರೀಕಿನಿಂದ ಆಸ್ಟ್ರೇಲಿಯಾ ವಿರುದ್ಧ ಟೀಮ್​ ಇಂಡಿಯಾ ಟೆಸ್ಟ್​ ಸರಣಿ ಆಡಲಿದೆ. ಇದಕ್ಕಾಗಿ ಭಾರೀ ತಯಾರಿ ನಡೆಸಿಕೊಂಡಿದೆ ಟೀಮ್​ ಇಂಡಿಯಾ.

ಕಳೆದ ಎರಡು ಆಸ್ಟ್ರೇಲಿಯಾ ಪ್ರವಾಸಗಳಲ್ಲಿ ಭಾರತ ಟ್ರೋಪಿ ಗೆದ್ದಿತ್ತು. 2016 ರಿಂದಲೂ ಟೀಮ್​ ಇಂಡಿಯಾ ಬಾರ್ಡರ್ ಗವಾಸ್ಕರ್ ಟ್ರೋಫಿ ಗೆಲ್ಲುತ್ತಲೇ ಬಂದಿದೆ. ಟೀಮ್​ ಇಂಡಿಯಾ ಈಗಿರೋ ಪರಿಸ್ಥಿತಿ ನೋಡಿದ್ರೆ ಗೆಲ್ಲೋದು ಕಷ್ಟವಾಗಿದೆ. ಎಷ್ಟೇ ಕಷ್ಟ ಆದ್ರೂ ಪರ್ವಾಗಿಲ್ಲ ಆಸೀಸ್ ಸರಣಿ ಗೆಲ್ಲಲೇಬೇಕು ಎಂದು ಸಜ್ಜಾಗಿರೋ ಬಿಸಿಸಿಐ ಮಾಸ್ಟರ್​ ಪ್ಲ್ಯಾನ್​ ಮಾಡಿಕೊಂಡಿದೆ.

ಮೊದಲ ಪಂದ್ಯದಿಂದ ರೋಹಿತ್​ ಔಟ್​​

ಆಸ್ಟ್ರೇಲಿಯಾ ವಿರುದ್ಧ ಮೊದಲ ಪಂದ್ಯಕ್ಕೆ ಟೀಮ್​ ಇಂಡಿಯಾದ ಪ್ಲೇಯಿಂಗ್ ಇಲೆವೆನ್​ನಲ್ಲಿ ಭಾರೀ ಬದಲಾವಣೆ ಆಗಲಿದೆ. ಕ್ಯಾಪ್ಟನ್​ ರೋಹಿತ್​ ಶರ್ಮಾ ಮೊದಲ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆಯಿದೆ. ಈಗಾಗಲೇ ಮೊದಲ ಟೆಸ್ಟ್​ಗೆ ತಮ್ಮ ಅಲಭ್ಯತೆ ಬಗ್ಗೆ ಹಿಟ್​ಮ್ಯಾನ್ ಸುಳಿವು ನೀಡಿದ್ದಾರೆ.

ಯಾರು ಓಪನರ್​​?

ಭಾರತದ ಆಸ್ಟ್ರೇಲಿಯಾ ಪ್ರವಾಸ ನವೆಂಬರ್ 22 ರಿಂದ ಪರ್ತ್​ನಲ್ಲಿ ಶುರುವಾಗಲಿದೆ. ಕ್ಯಾಪ್ಟನ್​ ರೋಹಿತ್​ ಶರ್ಮಾ ವೈಯಕ್ತಿಕ ಕಾರಣಗಳಿಂದಾಗಿ ಮೊದಲ ಟೆಸ್ಟ್​ನಲ್ಲಿ ಆಡುವುದಿಲ್ಲ ಎನ್ನಲಾಗುತ್ತಿದೆ. ಯಶಸ್ವಿ ಜೈಸ್ವಾಲ್ ಬದಲಿಗೆ ಅಭಿಮನ್ಯು ಈಶ್ವರನ್ ಇನ್ನಿಂಗ್ಸ್ ಆರಂಭಿಸಬಹುದು. ಶುಭ್ಮನ್​​ ಗಿಲ್​ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಹುದು. ಕೊಹ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಹುದು ಎಂದು ತಿಳಿದು ಬಂದಿದೆ.

ರಾಹುಲ್​, ಈಶ್ವರನ್​ ಮಧ್ಯೆ ಪೈಪೋಟಿ

ಮೊದಲ ಟೆಸ್ಟ್​ ಪಂದ್ಯದಲ್ಲಿ ಓಪನಿಂಗ್​ ಮಾಡಲು ಅಭಿಮನ್ಯು ಈಶ್ವರನ್ ಮತ್ತು ಕೆ.ಎಲ್​ ರಾಹುಲ್​ ಮಧ್ಯೆ ಪೈಪೋಟಿ ಶುರುವಾಗಬಹುದು. ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಕ್ಯಾಪ್ಟನ್​​ ರೋಹಿತ್ ಅನುಪಸ್ಥಿತಿಯಲ್ಲಿ ಇಬ್ಬರು ಪೈಪೋಟಿ ನಡೆಸುತ್ತಿದ್ದಾರೆ. ಆಸ್ಟ್ರೇಲಿಯಾ ಎ ವಿರುದ್ಧ ಭಾರತ ಎ ತಂಡದ ಎರಡನೇ ಅನಧಿಕೃತ ಟೆಸ್ಟ್‌ನಲ್ಲಿ ಯಾರು ಉತ್ತಮ ಪ್ರದರ್ಶನ ನೀಡುತ್ತಾರೋ ಅವರಿಗೆ ಓಪನಿಂಗ್​ ಮಾಡೋ ಅವಕಾಶ ಸಿಗಲಿದೆ.

ಕ್ಯಾಪ್ಟನ್​ ಯಾರು?

ರೋಹಿತ್​​ ಅಲಭ್ಯತೆಯಲ್ಲಿ ಟೀಮ್​ ಇಂಡಿಯಾವನ್ನು ಬುಮ್ರಾ ಅಥವಾ ಶುಭ್ಮನ್​ ಗಿಲ್​​ ಮುನ್ನಡೆಸಬಹುದು ಎನ್ನಲಾಗುತ್ತಿದೆ. ಸದ್ಯ ಜಸ್​ಪ್ರಿತ್​ ಬುಮ್ರಾ ಭಾರತ ಟೆಸ್ಟ್​ ತಂಡದ ಉಪನಾಯಕ. ಹಾಗಾಗಿ ಇವರು ಮುನ್ನಡೆಸಬಹುದು, ಇಲ್ಲದೆ ಹೋದಲ್ಲಿ ಭಾರತ ಏಕದಿನ ಮತ್ತು ಟಿ20 ತಂಡದ ವೈಸ್​ ಕ್ಯಾಪ್ಟನ್​ ಆಗಿರೋ ಗಿಲ್​ ಅವರಿಗೆ ಮೊದಲ ಬಾರಿ ಟೆಸ್ಟ್​ ಫಾರ್ಮೇಟ್​ನಲ್ಲಿ ಭಾರತವನ್ನು ಮುನ್ನಡೆಸುವ ಅವಕಾಶ ಸಿಗುವ ಸಾಧ್ಯತೆ ಇದೆ.

ಮೊದಲ ಪಂದ್ಯಕ್ಕೆ ಟೀಮ್​ ಇಂಡಿಯಾ ಹೀಗಿದೆ..!

ಯಶಸ್ವಿ ಜೈಸ್ವಾಲ್, ಅಭಿಮನ್ಯು ಈಶ್ವರನ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ (ಸಿ), ಆಕಾಶ್ ದೀಪ್.

ಇದನ್ನೂ ಓದಿ: ‘RCB ಜೊತೆಗಿನ ನನ್ನ ಜರ್ನಿ ಮುಗಿದಿಲ್ಲ’- ಮತ್ತೆ ತಂಡ ಸೇರೋ ಸುಳಿವು ಕೊಟ್ಟ ಸ್ಟಾರ್​ ಪ್ಲೇಯರ್​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment