/newsfirstlive-kannada/media/post_attachments/wp-content/uploads/2024/03/Siddaramaiah-24.jpg)
ಕಳಂಕ ರಹಿತ, ಶುದ್ಧ ಹಸ್ತ ಸಿಎಂ ಸಿದ್ದರಾಮಯ್ಯರಿಗೆ ಮುಡಾ ಹಗರಣ ಹೆಗಲೇರಿದೆ. ರಾಜ್ಯದಲ್ಲಿ ದೊಡ್ಡ ಸದ್ದು ಮಾಡುತ್ತಿರುವ ಮುಡಾ ಅಕ್ರಮದ ಸುಳಿಯಲ್ಲಿ ಇಡೀ ಸಿಎಂ ಸಿದ್ಧರಾಮಯ್ಯ ಕುಟುಂಬವೇ ಸಿಲುಕುವ ಸಾಧ್ಯತೆ ಇದೆ. ಇದೀಗ ಮುಡಾ ಹಗರಣ ಕೇಸ್​ನಲ್ಲಿ ಸಿದ್ದರಾಮಯ್ಯ ವಿರುದ್ಧ ದೂರು ದಾಖಲಾಗಿದೆ.
ಮುಡಾ ಹಗರಣದಲ್ಲಿ ಸಿಎಂ ಹೆಸರು
ಇದೇ ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಂಪ್ಲೇಂಟ್​​ ನೀಡಲಾಗಿದೆ. ರಾಜ್ಯ ಚುನಾವಣಾ ಆಯೋಗಕ್ಕೆ ಸಾಮಾಜಿಕ ಹೋರಾಟಗಾರ ಅಬ್ರಹಾಂ ದೂರು ನೀಡಿದ್ದಾರೆ. 2013ರ ಚುನಾವಣೆ ವೇಳೆ ಆಸ್ತಿ ವಿವರವನ್ನು ಘೋಷಿಸಿಲ್ಲ. ತಮ್ಮ ಪತ್ನಿ ಹೆಸರಿನಲ್ಲಿರುವ ಆಸ್ತಿ ಬಗ್ಗೆ ಮಾಹಿತಿ ನೀಡಿಲ್ಲ. ಆದರೆ ಲೋಕಾಯುಕ್ತಕ್ಕೆ ನೀಡಿದ ಮಾಹಿತಿಯಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ತಪ್ಪು ಮಾಹಿತಿ ನೀಡಿರುವ ಸಿಎಂ ವಿರುದ್ಧ ಕ್ರಮಕ್ಕೆ ಮನವಿ ಮಾಡಿದ್ದಾರೆ.
/newsfirstlive-kannada/media/post_attachments/wp-content/uploads/2024/07/Muda-1.jpg)
ಸಿದ್ದು ಹಳೇ ಅಸ್ತ್ರವನ್ನೇ ತಿರುಮಂತ್ರಕ್ಕೆ ಕಮಲ ಪಡೆ ಪ್ಲಾನ್​
ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಸದ್ದು ಮಾಡುತ್ತಿರುವ ಮುಡಾ ಅಕ್ರಮದಲ್ಲಿ ಸಿದ್ದರಾಮಯ್ಯ ಸಿಲುಕಿಸುವ ಯತ್ನಕ್ಕೆ ಬಿಜೆಪಿ ಬೃಹತ್​​ ಪ್ಲಾನ್​​ ರೂಪಿಸಿದೆ. ಶತಾಯಗತಾಯ ತಾರ್ಕಿಕ ಅಂತ್ಯಕ್ಕೆ ತಲುಪಿಸಬೇಕೆಂಬ ಗುರಿಯಿಟ್ಟು ಬಿಜೆಪಿ ತಂತ್ರ ಹೆಣೆಯುತ್ತಿದೆ. 2010ರಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ತೊಡೆ ತಟ್ಟಿದ್ದ ಸಿದ್ಧರಾಮಯ್ಯ, ಅವತ್ತು ರೆಡ್ಡಿ ಕೋಟೆಗೆ ಪಾದಯಾತ್ರೆ ಮೂಲಕ ಲಗ್ಗೆ ಹಾಕಿದ್ರು. ಈಗ ಇದೇ ರೀತಿಯ ಯಾತ್ರೆಯನ್ನ ಹಮ್ಮಿಕೊಳ್ಳಲು ವಿಜಯೇಂದ್ರ ತಂಡ ಪ್ಲಾನ್​ ಮಾಡ್ಕೊಂಡಿದೆ ಅಂತ ಗೊತ್ತಾಗಿದೆ.
/newsfirstlive-kannada/media/post_attachments/wp-content/uploads/2024/07/Muda-2-1.jpg)
ಆಗಸ್ಟ್ ಮೊದಲ ವಾರ ಪಾದಯಾತ್ರೆ ಹೊರಡಲು ರೂಪುರೇಷೆ
ಅಂದು ಸಿದ್ಧರಾಮಯ್ಯ ಬೆಂಗಳೂರಿನಿಂದ ಬಳ್ಳಾರಿಯವರೆಗೂ ಪಾದಯಾತ್ರೆ ಮಾಡಿದ್ರೆ, ಇಂದು ಬೆಂಗಳೂರಿನಿಂದ ಮೈಸೂರಿನವರೆಗೆ ಬಿಜೆಪಿ ಪಾದಯಾತ್ರೆ ಮಾಡಲು ಬಿಜೆಪಿ ತೆರೆಮರೆಯ ಸಿದ್ಧತೆ ನಡೆಸಿದೆ. ಮುಡಾ ಅಕ್ರಮ ತಾರ್ಕಿಕ ಅಂತ್ಯ ಮುಟ್ಟಿಸುವ ಸಲುವಾಗಿ ಪಾದಯಾತ್ರೆ ಅನ್ನೋ ಅಸ್ತ್ರ ಪ್ರಯೋಗಿಸ್ತಿದೆ. ಆಗಸ್ಟ್ ಮೊದಲ ವಾರದಲ್ಲಿ ಪಾದಯಾತ್ರೆ ಹೊರಡಲು ಬಿಜೆಪಿ ಪಡೆ ರೂಪುರೇಷೆ ಸಿದ್ಧಗೊಳಿಸ್ತಿದೆ.
ಇದನ್ನೂ ಓದಿ: ವಿದ್ಯಾರ್ಥಿಗಳ ಜೊತೆ ಮಹಿಳಾ ಶಿಕ್ಷಕರು ಲೈಂಗಿಕ ಸಂಪರ್ಕ.. ಇಬ್ಬರು ಅರೆಸ್ಟ್!
ಸದ್ಯ ಸೋಮವಾರದಿಂದ ವಿಧಾನಮಂಡಲ ಮುಂಗಾರು ಅಧಿವೇಶನ ಆರಂಭವಾಗ್ತಿದೆ. ಈ ಅಧಿವೇಶನದಲ್ಲಿ ಮುಡಾ, ವಾಲ್ಮೀಕಿ ನಿಗಮ ಹಗರಣವೇ ಸರ್ಕಾರದ ವಿರುದ್ಧ ಬಿಜೆಪಿಗೆ ಬ್ರಹ್ಮಾಸ್ತ್ರದ ರೀತಿ ಸಿಕ್ಕಿದೆ. ಅಧಿವೇಶನದಲ್ಲಿ ಸರ್ಕಾರವನ್ನ ಕಟ್ಟಿಹಾಕಲು ಬೃಹತ್​​​ ಪ್ರತಿಭಟನೆಗೆ ಮುಂದಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us