newsfirstkannada.com

ದರ್ಶನ್​ ಒಬ್ಬ ಕುಡುಕ, ಬಂಡವಾಳ ಗೊತ್ತಿದೆ; ಕರ್ನಾಟಕ ಪ್ರಜಾಪರ ವೇದಿಕೆಯಿಂದ ನಟನ ವಿರುದ್ಧ ದೂರು

Share :

Published February 21, 2024 at 2:42pm

Update February 21, 2024 at 3:44pm

  ನಿರ್ಮಾಪಕನಿಗೆ ತಗಡೇ, ಗುಮ್ಮುಸ್ಕೊತಿಯ ಪದ ಬಳಸಿದ್ದು ತಪ್ಪು

  ನಟ ದರ್ಶನ್​ ಯಾವ ಅಭಿಮಾನಿಗಳಿಗೆ ಮಾದರಿಯಾಗ್ತಾರೆ..?

  ದರ್ಶನ್​ ಕ್ಷಮೆಯಾಚಿಸಬೇಕು; ಕರ್ನಾಟಕ ಪ್ರಜಾಪರ ವೇದಿಕೆ ಮನವಿ

ಸ್ಯಾಂಡಲ್​ವುಡ್​ ನಟ ದರ್ಶನ್​ ವಿರುದ್ಧ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ದಾಖಲಾಗಿದೆ. ಕರ್ನಾಟಕ‌ ಪ್ರಜಾಪರ ವೇದಿಕೆ ದರ್ಶನ್ ಪದ ಬಳಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಇಂದು ಫಿಲಂ ಚೇಂಬರ್​ನಲ್ಲಿ ದೂರು ದಾಖಲಿಸಿದ್ದಾರೆ.

ನಿನ್ನೆ ಕಾಟೇರ ಸಿನಿಮಾ 50 ವರ್ಷ ಪೂರೈಸಿದ ಸಂಭ್ರಮದ ವೇದಿಕೆ ಮೇಲೆ ನಿಂತು ದರ್ಶನ್​ ಗುಮ್ಮುಸ್ಕೊತಿಯ ಎಂದು ನಿರ್ಮಾಪಕರೊಬ್ಬರಿಗೆ ಬೆದರಿಕೆ ಹಾಕಿದ್ದರು. ಆದರೀಗ ಇದಕ್ಕೆ ಕ್ಷಮೆಯಾಚಿಸಬೇಕು ಅಂತ ಕರ್ನಾಟಕ ಪ್ರಜಾಪರ ವೇದಿಕೆ ಮನವಿ ಮಾಡಿದೆ. ಕರ್ನಾಟಕ ಪ್ರಜಾಪರ ವೇದಿಕೆಯ ರಾಜ್ಯಾಧ್ಯಕ್ಷ ಕನ್ನಡ ಶಫಿ ಅವರಿಂದ ದೂರು ದಾಖಲಾಗಿದೆ.

ಸಾರ್ವಜನಿಕ ವೇದಿಕೆಯಲ್ಲಿ ನಿರ್ಮಾಪಕನಿಗೆ ತಗಡೇ, ಗುಮ್ಮುಸ್ಕೊತಿಯ ಪದ ಬಳಸಿದ್ದು ತಪ್ಪು. ದರ್ಶನ್ ಒಬ್ಬ ಕುಡುಕ. ಈ ನಟ ಯಾವ ಅಭಿಮಾನಿಗಳಿಗೆ ಮಾದರಿಯಾಗ್ತಾರೆ..?. ದರ್ಶನ್ ಬಂಡವಾಳ ಗೊತ್ತಿದೆ ಸಾಕ್ಷಿ ಎಲ್ಲವೂ ಇದೆ. ಗುಮ್ಮುಸ್ಕೊತಿಯ ಅಂದ್ರೆ ಕೊಲೆ ಬೆದರಿಕೆ ಎಂದು ಹೇಳಿದ್ದಾರೆ.

ನಟ ದರ್ಶನ್​ ಸೇರಿದಂತೆ ಕಾಟೇರ ಚಿತ್ರತಂಡ 50 ದಿನಗಳನ್ನು ಪೂರೈಸಿದ ಸಂತಸದಲ್ಲಿ ನಗರದ ಪ್ರಸನ್ನ ಥಿಯೇಟರ್​ನಲ್ಲಿ ಸಂಭ್ರಮಿಸಿದ್ದರು. ಈ ವೇಳೆ ವೇದಿಕೆ ಮೇಲೆ ದರ್ಶನ್​ ‘ಕಾಟೇರ’ ಟೈಟಲ್​ ಕುರಿತು ಮಾತನಾಡಿದ್ದರು. ನಿರ್ದೇಶಕ ಉಮಾಪತಿ ಕಾಟೇರ ಟೈಟಲ್​ ನನ್ನದು ಎಂದು ಹೇಳಿದ ಮಾತಿಗೆ ಕ್ಲಾರಿಟಿ ನೀಡಿದ ದರ್ಶನ್​ ತಗಡೇ, ಗುಮ್ಮುಸ್ಕೊತಿಯ ಎಂದು ಹೇಳಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ದರ್ಶನ್​ ಒಬ್ಬ ಕುಡುಕ, ಬಂಡವಾಳ ಗೊತ್ತಿದೆ; ಕರ್ನಾಟಕ ಪ್ರಜಾಪರ ವೇದಿಕೆಯಿಂದ ನಟನ ವಿರುದ್ಧ ದೂರು

https://newsfirstlive.com/wp-content/uploads/2024/02/darshan-9.jpg

Load More