/newsfirstlive-kannada/media/post_attachments/wp-content/uploads/2024/12/ALLU_ARJUN_RASHMIKA_1-1.jpg)
ಪುಷ್ಪ-2 ದೀ ರೂಲ್ ಸದ್ಯ ಇಡೀ ದೇಶದ್ಯಾಂತ ಯುವಕರ ಬಾಯಲ್ಲಿ ಕೇಳಿ ಬರುತ್ತಿರುವ ಸಿನಿಮಾದ ಹೆಸರು. ಈ ಪ್ಯಾನ್ ಇಂಡಿಯಾ ಮೂವಿ ಡಿಸೆಂಬರ್ 5 ರಂದು ವಿಶ್ವದ್ಯಾಂತ ತೆರೆಗೆ ಅಪ್ಪಳಿಸಿದೆ. ಈ ಹಿನ್ನೆಲೆಯಲ್ಲಿ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಈ ಇಬ್ಬರು ಎಲ್ಲಿ ಹೋದರೂ ಫ್ಯಾನ್ಸ್ ಭಾರೀ ಸಂಖ್ಯೆಯಲ್ಲಿ ಸೇರುತ್ತಿದ್ದಾರೆ. ಹೀಗೆ ಸೇರಿರುವಾಗಲೇ ಅಲ್ಲು ಅರ್ಜುನ್ ದೊಡ್ಡ ಯಡವಟ್ಟು ಮಾಡಿಕೊಂಡಿದ್ದು ಕೇಸ್ ದಾಖಲು ಮಾಡಲಾಗಿದೆ.
ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಪುಷ್ಪ-2 ಸಿನಿಮಾದ ಪ್ರಚಾರಕ್ಕೆಂದು ಮುಂಬೈಗೆ ಹೋಗಿದ್ದರು. ಈ ವೇಳೆ ಅಲ್ಲಿ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಫುಲ್ ಜೋಶ್ನಲ್ಲಿ ಸ್ಟೇಜ್ ಮೇಲೆ ಮಾತನಾಡುತ್ತಿದ್ದ ಐಕಾನ್ ಸ್ಟಾರ್, ತನ್ನ ಅಭಿಮಾನಿಗಳ ಕುರಿತು, ‘ಆರ್ಮಿ’ ಎಂದು ಕರೆದಿದ್ದಾರೆ. ಇದೇ ಆರ್ಮಿ ಎನ್ನುವ ಮಾತೇ ಸದ್ಯ ಅವರಿಗೆ ಸಂಕಷ್ಟ ತಂದಿದೆ. ಈ ಸಂಬಂಧ ಪೊಲೀಸ್ ಕೇಸ್ ಕೂಡ ದಾಖಲು ಮಾಡಲಾಗಿದೆ.
ಇದನ್ನೂ ಓದಿ:Pushpa 2; ಐಕಾನ್ ಸ್ಟಾರ್ ಅಲ್ಲು ಅರ್ಜುನ್, ರಶ್ಮಿಕಾ ನೋಡಲು ಟವರ್ ಏರಿದ ಫ್ಯಾನ್ಸ್, ಪೊಲೀಸರ ಹರಸಾಹಸ
ಗ್ರೀನ್ ಪೀಸ್ ಎನ್ವಿರ್ಮೆಂಟ್ ಅಧ್ಯಕ್ಷ ಶ್ರೀನಿವಾಸ್ ಗೌಡ ಎನ್ನುವರು ಅಲ್ಲು ಅರ್ಜುನ್ ವಿರುದ್ಧ ಹೈದರಾಬಾದ್‌ನ ಜವಾಹರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಈ ಸಂಬಂಧ ಮಾತನಾಡಿರುವ ಶ್ರೀನಿವಾಸ್ ಗೌಡ, ನಟ ಅಲ್ಲು ಅರ್ಜುನ್ ಅವರು ತಮ್ಮ ಮಿತಿಯಲ್ಲಿ ಇರಬೇಕು. ಆರ್ಮಿ ಎನ್ನುವುದನ್ನು ಅತ್ಯಂತ ಗೌರವಾನ್ವಿತ ಪದವಿಗೆ ಬಳಸುವ ಪದವಾಗಿದೆ. ಅವರು ನಮ್ಮ ದೇಶವನ್ನು ರಕ್ಷಣೆ ಮಾಡುವ ಮಹಾನ್ ವ್ಯಕ್ತಿಗಳು. ಆದರೆ ತನ್ನ ಅಭಿಮಾನಿಗಳಿಗೆ ಆರ್ಮಿ ಅಂತ ಕರೆದಿರುವುದು ತಪ್ಪು ಎಂದು ಹೇಳಿದ್ದಾರೆ ಎನ್ನಲಾಗಿದೆ.
ಪುಷ್ಪ-2 ಇನ್ನೇನು ಮೂರು ದಿನದಲ್ಲಿ ಬಿಡುಗಡೆಯಾಗುತ್ತಿದ್ದು ಅಭಿಮಾನಿಗಳು ಕೂಡ ಕುತೂಹಲದಿಂದ ಇದ್ದಾರೆ. ಸಿನಿಮಾ ರಿಲೀಸ್ಗೂ ಮೊದಲು ದೊಡ್ಡ ಮೊತ್ತದಲ್ಲಿ ಹಣ ಗಳಿಸಿದೆ ಎಂದು ಹೇಳಲಾಗುತ್ತಿದೆ. ಇನ್ನು ಬಿಡುಗಡೆಯಾದ ಮೇಲೆ ಯಾವ ಮಟ್ಟದಲ್ಲಿ ಕಲೆಕ್ಷನ್ ಮಾಡುತ್ತದೆ ಎಂದು ಕಾದು ನೋಡಬೇಕು. ಸಿನಿಮಾದಲ್ಲಿ ಅಲ್ಲು ಅರ್ಜುನ್ ಮಾಸ್ ಲುಕ್ನಲ್ಲಿದ್ದು ರಶ್ಮಿಕಾ ನಾಯಕಿ ಆಗಿ ಕಂಟಿನ್ಯೂ ಮಾಡಿದ್ದಾರೆ. ಸಿನಿಮಾದಲ್ಲಿ ಫಾಹದ್ ಫಾಸಿಲ್ ಪೊಲೀಸ್ ಆ್ಯಕ್ಟಿಂಗ್ನಲ್ಲಿ ಐಕಾನ್ ಸ್ಟಾರ್ಗೆ ಟಕ್ಕರ್ ಕೊಟ್ಟಿರುವ ಸಾಧ್ಯತೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ