/newsfirstlive-kannada/media/post_attachments/wp-content/uploads/2024/10/Director-Guruprasad.jpg)
ಮಠ, ಎದ್ದೇಳು ಮಂಜುನಾಥ್ ತರಹದ ಸಿನಿಮಾಗಳನ್ನು ಕನ್ನಡಕ್ಕೆ ಕೊಟ್ಟು ತಮ್ಮದೇ ವಿಶೇಷ ಶೈಲಿಯ ನಿರ್ದೇಶನದಿಂದ ಜನಪ್ರಿಯಗೊಂಡಿದ್ದ ನಿರ್ದೇಶಕ ಅಂದ್ರೆ ಅದು ಗುರುಪ್ರಸಾದ್​. ಅವರನ್ನು ಗುರುತಿಸುವುದೇ ಅವರ ಮೊದಲ ಸಿನಿಮಾ ಮಠದ ಮೂಲಕ. ಇಂತಹ ನಿರ್ದೇಶಕರ ಮೇಲೆ ಈಗ ದೂರೊಂದು ದಾಖಲಾಗಿದೆ.
ನಿರ್ದೇಶಕ ಗುರುಪ್ರಸಾದ್ ವಿರುದ್ದ ದೂರು ದಾಖಲಾಗಿದೆ. ಜಯನಗರದಲ್ಲಿರುವ ಟೋಟಲ್ ಕನ್ನಡ ಪುಸ್ತಕ ಮಳಿಗೆಯಲ್ಲಿ ರಿಯಾಯಿತಿ ದರದಲ್ಲಿ ಪುಸ್ತಕ ಖರೀದಿಸಿದ ಗುರುಪ್ರಸಾದ್​, ಹಣ ನೀಡದೇ ಸತಾಯಿಸುತ್ತಿದ್ದಾರೆ ಎಂದು ಆರೋಪದಡಿ ದೂರು ದಾಖಲಾಗಿದೆ
ಜಯನಗರದ ಟೋಟಲ್ ಕನ್ನಡ ಮಳಿಗೆ ಮಾಲೀಕ ಲಕ್ಷ್ಮೀಕಾಂತ್ ಅವರು ಗುರುಪ್ರಸಾದ್ ವಿರುದ್ಧ ದೂರು ದಾಖಲಿಸಿದ್ದಾರೆ. ಕನ್ನಡ ಸಾಹಿತ್ಯ ಹಾಗೂ ಸಿನಿಮಾ ಸಂಬಂಧಿತ ಪುಸ್ತಕ ಹಾಗೂ ಸಿಡಿಗಳ ಸಂಗ್ರಹವಿರುವ ಪುಸ್ತಕ ಮಳಿಗೆ ಟೋಟಲ್ ಕನ್ನಡ. ತಾವು ತರಬೇತಿ ನೀಡುವ ವಿದ್ಯಾರ್ಥಿಗಳಿಗೆ ಓದಲು ಬೇಕಾದ ನೂರು ಪುಸ್ತಕ ಬೇಕು ರಿಯಾಯಿತಿ ದರದಲ್ಲಿ ಕೊಡಿ ಎಂದು 2019ರಲ್ಲಿ ಪುಸ್ತಕ ಮಳಿಗೆಗೆ ತೆರಳಿದ್ದರಂತೆ ನಿರ್ದೇಶಕ ಗುರುಪ್ರಸಾದ್. 75 ಪುಸ್ತಕಗಳ ಐದು ಸೆಟ್​ ಖರೀದಿಸಿದ್ದರಂತೆ. ಒಂದು ಸೆಟ್​ಗೆ 13 ಸಾವಿರದಂತೆ ಐದು ಸೆಟ್ ಪುಸ್ತಕಗಳಿಗೆ 65 ಸಾವಿರ ನೀಡಬೇಕಿತ್ತಂತೆ. ಆದ್ರೆ ಪುಸ್ತಕ ಮಳಿಗೆಯಿಂದ ಪುಸ್ತಕ ಹಾಗೂ ಸಿನಿಮಾ ಸಂಬಂಧಿತ ಸಿಡಿಗಳನ್ನು ಖರೀದಿಸಿ ಹಣ ನೀಡದ ಆರೋಪದಡಿ ಈಗ ದೂರು ದಾಖಲಾಗಿದೆ.
/newsfirstlive-kannada/media/post_attachments/wp-content/uploads/2024/10/Director-Guruprasad-1.jpg)
ಪುಸ್ತಕ ಖರೀದಿಸಿಕೊಂಡು ಹೋದ ಮೇಲೆ ಹಣ ನೀಡದರೆ ಸತಾಯಿಸುತ್ತಿದ್ದಾರೆ. ಫೋನ್ ಕರೆಯನ್ನು ಸ್ವೀಕರಿಸುತ್ತಿಲ್ಲ, ಅದರ ಜೊತೆ ತಮ್ಮ ವಿಳಾಸವನ್ನು ಕೂಡ ಬದಲಾಯಿಸಿದ್ದಾರೆ ಎಂದು ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us