/newsfirstlive-kannada/media/post_attachments/wp-content/uploads/2025/05/kannadadiga1.jpg)
ಬೆಂಗಳೂರು: ಕನ್ನಡಿಗರನ್ನು ಅವಮಾನಿಸಿದ ಕೋರಮಂಗಲದ ಹೊಟೇಲ್ಗೆ ತಕ್ಕ ಶಾಸ್ತಿ ಕಲಿಸೋಕೆ ಮುಂದಾಗಿದ್ದಾರೆ. ಕೋರಮಂಗಲದ ನೆಕ್ಸಸ್ ಮಾಲ್ ಸಮೀಪದ HOTEL GS SUITEನ ಡಿಸ್ಪ್ಲೇ ಬೋರ್ಡ್ನಲ್ಲಿ ಕನ್ನಡಿಗರಿಗೆ ಅಪಮಾನ ಆಗುವಂತಹ ಬರಹ ಹಾಕಲಾಗಿತ್ತು.
ಇದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಹೋಟೆಲ್ಗೆ ತೆರಳಿ ಪೊಲೀಸರು ಪರಿಶೀಲನೆ ಮಾಡಿದ್ದರು. ಈ ಬಗ್ಗೆ ಆಗ್ನೇಯ ವಿಭಾಗ ಡಿಸಿಪಿ ಸಾರಾಫಾತೀಮಾ ಅವರು ಕೂಡ ಪ್ರತಿಕ್ರಿಯೆ ನೀಡಿದ್ದರು.
ಇದೀಗ ಕನ್ನಡಿಗರ ಬಗ್ಗೆ ಅವಹೇಳನಕಾರಿ ಪದಗಳನ್ನ ಪ್ರದರ್ಶಿಸಿದ ಹೋಟೆಲ್ ವಿರುದ್ದ ಕನ್ನಡ ಚಳುವಳಿ ಕೇಂದ್ರ ಸಮಿತಿ ಅಧ್ಯಕ್ಷ ಗುರುದೇವ್ ಅವರು ದೂರು ದಾಖಲಿಸಿದ್ದಾರೆ. ಅಷ್ಟೇ ಅಲ್ಲದೇ ಹೋಟೆಲ್ ಲೈಸೆನ್ಸ್ ಶಾಶ್ವತವಾಗಿ ರದ್ದುಗೊಳಿಸುವಂತೆ ಬಿಬಿಎಂಪಿ ಆಯುಕ್ತರಿಗೆ ದೂರು ಕೊಟ್ಟಿದ್ದಾರೆ. ಕನ್ನಡಿಗರ ಕೆಣಕಿದ ಕೋರಮಂಗಲದ ಹೊಟೇಲ್ಗೆ ತಕ್ಕ ಶಾಸ್ತಿ ಕಲಿಸೋಕೆ ಮುಂದಾಗಿದ್ದಾರೆ.
ಇದನ್ನೂ ಓದಿ:ಕನ್ನಡಿಗರ ಬಗ್ಗೆ ಹೋಟೆಲ್ ಡಿಸ್ಪ್ಲೇನಲ್ಲಿ ಅವಾಚ್ಯ ಪದ ಬಳಕೆ.. ಮ್ಯಾನೇಜರ್ ವಶಕ್ಕೆ
ಇನ್ನೂ, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮ್ಯಾನೇಜರ್ ಸರ್ಫರಾಜ್ ಎಂಬಾತನನ್ನು ಬಂಧನ ಮಾಡಲಾಗಿದೆ. ಹೋಟೆಲ್ ಮಾಲೀಕ ಜಮ್ಸದ್ ಮೇಲು ಎಫ್ಐಆರ್ ದಾಖಲಿಸಲಾಗಿದೆ. ಸದ್ಯ ಜಿ.ಎಸ್ ಸೂಟ್ ಮಾಲೀಕ ಜಮ್ಸದ್ ಕೇರಳದಲ್ಲಿದ್ದಾರೆ.
ಬಿಬಿಎಂಪಿ ಆಯುಕ್ತ ಮಹೇಶ್ವರ್ ರಾವ್ಗೆ ನೀಡಿದ ಲಿಖಿತ ದೂರಿನಲ್ಲಿ ಏನಿದೆ?
ಬೆಂಗಳೂರಿನ ಕೋರಮಂಗಲದಲ್ಲಿರುವ ಜಿ.ಎಸ್.ಸೂಟ್ಸ್ ಹೋಟೆಲ್ಲಿನವರು ಕನ್ನಡಿಗರ ಬಗ್ಗೆ ಅತಿ ತುಚ್ಚವಾದ ಪದಗಳನ್ನು ಬಳಸಿರುವ ತೋರುಫಲಕ ಪ್ರದರ್ಶಿಸಿ ಕನ್ನಡಿಗರ ಮಾನ ಹರಾಜು ಹಾಕಿರುವಂತಹ ನಾಡದ್ರೋಹದ ಕೆಲಸ ಮಾಡಿದ್ದಾನೆ. ಈ ನೆಲದಲ್ಲಿ ಬದುಕು ಕಟ್ಟಿಕೊಳ್ಳಲು ಬಂದಿರುವ ಈ ವಲಸೆ ಉದ್ದಿಮೆದಾರರು ಕನ್ನಡಿಗರನ್ನು ಅವಹೇಳನ ಮಾಡಿರುವುದು ಸಹಿಸಲಸಾಧ್ಯ ಈಗಾಗಲೇ ಹೋಟೆಲ್ ಮಾಲೀಕನ ಮೇಲೆ ಸಿಬ್ಬಂದಿಯ ಮೇಲೆ ಮಡಿವಾಳ ಪೋಲಿಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸದೆ. ಈ ಕೂಡಲೇ ಜಿ.ಎಸ್.ಟ್ಸ್ ಹೋಟೆಲ್ನಲ್ಲಿ ಪರವಾನಗಿಯನ್ನು ಶಾಶ್ವತವಾಗಿ ರದ್ದುಪಡಿಸಲು ಕನ್ನಡ ಚಳವಳಿ ಕೇಂದ್ರ ಸಮಿತಿ ಅಧ್ಯಕ್ಷ ಗುರುದೇವ್ ನಾರಾಯಣ್ ಕುಮಾರ ಆಗ್ರಹ ಪಡಿಸುತ್ತಿದ್ದಾರೆ ಎಂದು ಉಲ್ಲೇಖಿಸಲಾಗಿದೆ.